ಕರ್ನಾಟಕ ಚಲನಚಿತ್ರ ಕಾರ್ಮಿಕರಿಗೆ ನೆರವಾದ 'ಡೈಲಾಗ್​ ಕಿಂಗ್​' ಸಹೋದರರು

Saikumar Brothers - Final
Published on

ಬೆಂಗಳೂರು: ಕರೊನಾ ಎರಡನೇ ಅಲೆಯಿಂದ ಚಿತ್ರೀಕರಣ ಸ್ಥಗಿತವಾಗಿ ಎರಡು ತಿಂಗಳೇ ಕಳೆದಿವೆ. ಚಿತ್ರೀಕರಣ ಮತ್ತೆ ಯಾವಾಗಿನಿಂದ ಪ್ರಾರಂಭವಾಗುತ್ತದೆ ಅಥವಾ ಆಗಬಹುದು ಎಂದು ಯಾರಿಗೂ ಗೊತ್ತಾಗುತ್ತಿಲ್ಲ. ಇಂತಹ ಸಮಯದಲ್ಲಿ ಸಿನಿಮಾ ಕಾರ್ಮಿಕರ ಬವಣೆ ಹೇಳತೀರಲಾಗಿದೆ.

ಈ ಸಮಯದಲ್ಲಿ ಹಲವರು ಕನ್ನಡ ಚಿತ್ರರಂಗದ ಹಲವು ನಟ-ನಟಿಯರು ಸಹಾಯಹಸ್ತ ಚಾಚುತ್ತಿದ್ದಾರೆ. ಯಶ್​, ಪುನೀತ್​, ಉಪೇಂದ್ರ, ಸುದೀಪ್​, ವಿಜಯ್​ಕುಮಾರ್​ ಕಿರಗಂದೂರು, ರಾಗಿಣಿ, ಸಂಜನಾ ಸೇರಿದಂತೆ ಹಲವರು ನಟ-ನಟಿಯರು ಸಂಕಷ್ಟದಲ್ಲಿರುವ ಕನ್ನಡ ಚಿತ್ರರಂಗದ ಹಲವು ಕಾರ್ಮಿಕರು, ತಂತ್ರಜ್ಱರಿಗೆ ತಮ್ಮದೇ ರೀತಿಯಲ್ಲಿ ಸಹಾಯ ಮಾಡುತ್ತಿದ್ದಾರೆ. ಈಗ ಅವರ ಸಾಲಿಗೆ 'ಡೈಲಾಗ್​ ಕಿಂಗ್​' ಎಂದೇ ಜನಪ್ರಿಯರಾಗಿರುವ ಸಾಯಿಕುಮಾರ್ ಮತ್ತು ಅವರ ಸಹೋದರರು ಸಹ ಸೇರಿಕೊಂಡಿದ್ದಾರೆ.

ಸಾಯಿಕುಮಾರ್ ತಮ್ಮ ಸಹೋದರರಾದ ರವಿಶಂಕರ್ ಹಾಗೂ ಅಯ್ಯಪ್ಪ ಪಿ ಶರ್ಮ ಸೇರಿ ಐದು ಲಕ್ಷದ ನಾಲ್ಕು ರೂಪಾಯಿಗಳನ್ನು ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ನೀಡಿದ್ದಾರೆ. ಈ ಮೊತ್ತವನ್ನು ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಹಂಚಲಾಗುತ್ತದೆ.

ಸಹಾಯಹಸ್ತ ಚಾಚುತ್ತಿರುವ ಕುರಿತು ಮಾತನಾಡಿರುವ ಅವರು, 'ನಾವು ಬೇರೆ ರಾಜ್ಯದಲ್ಲಿ ಜನಿಸಿದ್ದರೂ, ನಮ್ಮ ಜನಪ್ರಿಯತೆಯ ಹೆಚ್ಚು ಪಾಲು ಕರ್ನಾಟಕದ್ದು. ಹಾಗಾಗಿ, ನಾವು ನಮ್ಮ ಕೈಲಾದ ಸಹಾಯ ಮಾಡಿದ್ದೇವೆ' ಎಂದು ಸಾಯಿಕುಮಾರ್​, ರವಿಶಂಕರ್​ ಹಾಗೂ ಅಯ್ಯಪ್ಪ ಶರ್ಮ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net