

ಬೆಂಗಳೂರು: 12ನೇ ಶತಮಾನದ ಸಂತ ಮತ್ತು ವಚನಕಾರ ಅಲ್ಲಮಪ್ರಭುಗಳ ಕುರಿತಾಗಿ ‘ಶ್ರೀ ಅಲ್ಲಮಪ್ರಭು’ ಎಂಬ ಚಿತ್ರವೊಂದು ಕಳೆದ ವರ್ಷದ ಕೊನೆಯಲ್ಲಿ ಸೆಟ್ಟೇರಿತ್ತು. ಈಗ ಆ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದೆ. ‘ಶ್ರೀ ಅಲ್ಲಮಪ್ರಭು’ ಚಿತ್ರದ ವಿಶೇಷವೆಂದರೆ, ಶಿರಸಿ, ಸಹಸ್ರಲಿಂಗ, ತೇರದಾಳ, ಮುಗಳಖೋಡ ಮುಂತಾದ ಹಲವು ಕಡೆ ಚಿತ್ರೀಕರಣ ಮಾಡಲಾಗಿದೆ. ಅಲ್ಲದೆ, ಬನವಾಸಿ ಮಧುಕೇಶ್ವರ ದೇವಸ್ಥಾನ ದಲ್ಲಿ ವಿಶೇಷ ಅನುಮತಿ ಪಡೆದು ಅಲ್ಲಿಯೂ ಹಲವು ಸನ್ನಿವೇಶಗಳನ್ನು ಚಿತ್ರೀಕರಿಸಲಾಗಿದೆ. ಇನ್ನು, ಅನುಭವ ಮಂಟಪದ ಸೆಟ್ ಹಾಕಿಸಿ ಹಲವು ದಿನಗಳ ಕಾಲ ಚಿತ್ರೀಕರಣ ನಡೆಸಲಾಗಿದೆ.
ಈ ಹಿಂದೆ ‘ಎನ್ಕೌಂಟರ್ ದಯಾನಾಯಕ್’ ಚಿತ್ರದಲ್ಲಿ ದಯಾನಾಯಕ್ ಪಾತ್ರದಲ್ಲಿ ಕಾಣಿಸಿಕೊಂಡಿದ್ದ ಸಚಿನ್ ಸುವರ್ಣ ಈ ಚಿತ್ರದಲ್ಲಿ ಅಲ್ಲಮಪ್ರಭುಗಳಾಗಿ ನಟಿಸಿದ್ದಾರೆ. ಚಿತ್ರವನ್ನು ಶಿವರಾಜ್ ನಿರ್ದೇಶಿಸಿದರೆ, ಮಹಾವೀರಪ್ರಭು ಮತ್ತು ಮಾಧವಾನಂದ ಜೊತೆಯಾಗಿ ನಿರ್ವಿುಸುತ್ತಿದ್ದಾರೆ. ನಿರ್ಮಾಪಕ ಮಾಧವಾ ನಂದ ಕಥೆ-ಚಿತ್ರಕಥೆ ರಚಿಸಿದ್ದಾರೆ. ಸಚಿನ್, ರಾಮಕೃಷ್ಣ, ಬಿರಾದಾರ್, ಮೂಗು ಸುರೇಶ್, ಸಂಗೀತಾ ನಟಿಸಲಿದ್ದಾರೆ.