

ನವದೆಹಲಿ: ದೇಶದ ಪ್ರಖ್ಯಾತ ಹಣಕಾಸು ಕಂಪನಿಯಾದ ಮುತ್ತೊಟ್ ಪೈನಾನ್ಸ್ನ ಮಾಲೀಕ ಹಾಗೂ ವ್ಯವಸ್ಥಾಪಕ ನಿರ್ದೇಶಕ ಎಂಜಿ ಜಾರ್ಜ್ ಮುತ್ತೊಟ್ (68) ಅವರು ಇಂದು ನವದೆಹಲಿಯಲ್ಲಿ ವಿಧಿವಶರಾಗಿದ್ದಾರೆ.
ನಾನ್ ಬ್ಯಾಂಕಿಂಗ್ ಪೈನಾನ್ಸ್ನಲ್ಲಿ ಅತಿ ಹೆಚ್ಚು ಗೋಲ್ಡ್ ಲೋನ್ ನೀಡುವ ಮುತ್ತೊಡ್ ಪೈನಾನ್ಸ್ನ್ನು ಎಂಜಿ ಜಾರ್ಜ್ ಬೆಳೆಸಿದ್ದರು. ಇವರು ಮೂಲತಃ ಕೊಚ್ಚಿಯವರಾಗಿದ್ದು, ದೇಶದ ಹೆಸರಾಂತ ಉದ್ಯಮಿಯಾಗಿದ್ದರು.
ಮುತ್ತೊಟ್ ಅವರು 2011 ಮತ್ತು 2019 ರಲ್ಲಿ ಭಾರತದ 50 ನೇ ಅತಿ ದೊಡ್ಡ ಶ್ರೀಮಂತ ಎಂದು ಫೋರ್ಬ್ ಏಷಿಯಾ ಮ್ಯಾಗ್ಜಿನ್ನಲ್ಲಿ ಗುರುತಿಸಿಕೊಂಡಿದ್ದರು.