

ಬೆಂಗಳೂರು: ಇದೇ ಮೊದಲ ಬಾರಿಗೆ ಗ್ಯಾಂಗ್‌ಸ್ಟರ್ ಪಾತ್ರದಲ್ಲಿ ಕಾಣಿಸಿಕೊಳ್ಳುವ ಖುಷಿಯಲ್ಲಿ ಶೂಟಿಂಗ್ ಮಾಡುತ್ತಿದ್ದ ನಟಿ ಶಾನ್ವಿ ಶ್ರೀವಾಸ್ತವ್ ಚಿತ್ರೀಕರಣದ ವೇಳೆ ಆಯತಪ್ಪಿ ಬಿದ್ದು ಗಾಯಗೊಂಡಿದ್ದಾರೆ.
'ಬ್ಯಾಂಗ್' ಸಿನಿಮಾದ ಚಿತ್ರೀಕರಣದ ವೇಳೆ ಈ ಅವಘಡ ಸಂಭವಿಸಿದೆ. ಈ ಚಿತ್ರದಲ್ಲಿ ಅವರದ್ದು ಗ್ಯಾಂಗ್‌ಸ್ಟರ್ ಪಾತ್ರ. ಸಾಹಸ ಸನ್ನಿವೇಶಗಳು ಇದ್ದ ಹಿನ್ನೆಲೆಯಲ್ಲಿ ಫೈಟ್ ದೃಶ್ಯ ಮಾಡುವ ಮೊದಲು ನಾಲ್ಕೈದು ದಿನ ಟ್ರೇನಿಂಗ್ ಪಡೆದುಕೊಂಡಿದ್ದರು. ಎಲ್ಲಾ ಸಿದ್ಧತೆ ಮಾಡಿಕೊಂಡೇ ಶೂಟಿಂಗ್ ನಡೆಯುತ್ತಿತ್ತು.
ಆದರೆ ಮಳೆ ಬರುವ ವೇಳೆ ಈ ಫೈಟಿಂಗ್ ಸೀನ್ ಸಿನಿಮಾದಲ್ಲಿ ಇದೆ. ಮಳೆ ಎಫೆಕ್ಟ್‌ನಲ್ಲಿ ಶೂಟಿಂಗ್ ಮಾಡುವಾಗ ಅವರು ಕಾಲು ಜಾರಿ ಬಿದ್ದಿದ್ದಾರೆ. ಆ ವೇಳೆ ಅವರ ಕೈಗೆ ಮತ್ತು ಕಾಲಿಗೆ ಪೆಟ್ಟುಬಿದ್ದಿದೆ. ಕೂಡಲೇ ಅವರಿಗೆ ಚಿಕಿತ್ಸೆ ನೀಡಲಾಗಿದ್ದು, ದೊಡ್ಡ ಅನಾಹುತವಾಗಿಲ್ಲ ಎನ್ನಲಾಗಿದೆ.
ಸದ್ಯ ಶಾನ್ವಿ ಚೇರಿಸಿಕೊಳ್ಳುತ್ತಿದ್ದಾರೆ. ಇದೀಗ ಚಿತ್ರೀಕರಣವನ್ನು ಸ್ಥಗಿತಗೊಳಿಸಲಾಗಿದೆ ಎಂದು ಚಿತ್ರತಂಡ ಹೇಳಿದೆ. ಈ ಚಿತ್ರಕ್ಕೆ ಶ್ರೀ ಗಣೇಶ್ ಪರಶುರಾಮ್ ನಿರ್ದೇಶಕನ ಮಾಡುತ್ತಿದ್ದಾರೆ.