ಕುಂದ್ರಾರ ಆದಾಯ ಮೂಲ ಯಾವ್ದು? ಅಂಥದ್ದೇನು ಕಂಡು ಅವ್ರನ್ನ ಮದ್ವೆಯಾಗಿದ್ರಿ ಎಂದಾಗ ಶಿಲ್ಪಾ ಹೇಳಿದ್ದೇನು?

shilpa shetty1
Published on

ಮುಂಬೈ: ಬ್ಲೂ ಫಿಲ್ಮ್ಂ ಹಗರಣದಲ್ಲಿ ಸಿಲುಕಿರುವ ಉದ್ಯಮಿ, ನಟಿ ಶಿಲ್ಪಾ ಶೆಟ್ಟಿ ಅವರ ಪತಿ ರಾಜ್‌ ಕುಂದ್ರಾ ಅವರ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ. ಸದ್ಯ ನ್ಯಾಯಾಂಗ ಬಂಧನದಲ್ಲಿ ಇರುವ ರಾಜ್‌ ಕುಂದ್ರಾ ಅವರನ್ನು ಹಾಗೂ ಅವರ ಜತೆ ಸಂಪರ್ಕದಲ್ಲಿ ಇರುವವರನ್ನು ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದಾರೆ.

ಒಂದನೆಯ ಮದುವೆಯಿಂದ ವಿಚ್ಛೇದನ ಪಡೆದು ಶಿಲ್ಪಾ ಶೆಟ್ಟಿಯನ್ನು ಮದುವೆಯಾದವರು ರಾಜ್‌ ಕುಂದ್ರಾ, ಶಿಲ್ಪಾ ಶೆಟ್ಟಿ ಅವರಿಗೆ ಇದು ಮೊದಲ ಮದುವೆ. ಕುಂದ್ರಾ ಅವರ ಮೊದಲ ಪತ್ನಿ ಕವಿತಾರಿಗೆ ತಮ್ಮ ಸಹೋದರನ ಜತೆ ಸಂಬಂಧ ಇದ್ದ ಕಾರಣ ತಾನು ಆಕೆಯನ್ನು ಬಿಟ್ಟಿರುವುದಾಗಿ ಕುಂದ್ರಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದರು.

ಅದೇನೇ ಇದ್ದರೂ, ಬಾಲಿವುಡ್‌ನಲ್ಲಿ ಉತ್ತುಂಗ ಸ್ಥಿತಿಯಲ್ಲಿ ಇರುವ ಶಿಲ್ಪಾ ರಾಜ್‌ ಕುಂದ್ರಾ ಅವರ ಎರಡನೆಯ ಪತ್ನಿಯಾಗುವ ಅಗತ್ಯವೇನಿತ್ತು ಎಂದು ಬಹುತೇಕ ಮಂದಿ ಆಡಿಕೊಳ್ಳುತ್ತಿದ್ದಾರೆ. ಇದೇ ವಿಷಯವನ್ನು ಹಿಂದಿಯ ಪ್ರಸಿದ್ಧ ಕಾಮಿಡಿ ಷೋ ಎನಿಸಿರುವ ಕಪಿಲ್‌ ಶರ್ಮಾ ಅವರ ‘ಕಾಮಿಡಿ ಷೋ’ ಸಂಚಿಕೆಯೊಂದರಲ್ಲಿ ಕಪಿಲ್‌ ಅವರು ಶಿಲ್ಪಾ ಅವರ ಮುಂದೆ ಇಟ್ಟಿದ್ದರು.

ಅದೇನು ಕಂಡು ನೀವು ರಾಜ್‌ ಕುಂದ್ರಾ ಅವರನ್ನು ಮದುವೆಯಾಗಿದ್ದೀರಿ ಎಂದು ಕಪಿಲ್‌ ಪ್ರಶ್ನಿಸಿದ್ದರು. ಆದರೆ ಅದಕ್ಕೆ ಯಾವುದೇ ಸ್ಪಷ್ಟ ಉತ್ತರ ನೀಡದೇ ಹಾಸ್ಯದ ಮೂಲಕವೇ ಹಾರಿಕೆ ಉತ್ತರ ನೀಡಿದ್ದ ಶಿಲ್ಪಾ ಶೆಟ್ಟಿ, ‘ನನಗೆ ಕಪಿಲ್‌ ಶರ್ಮಾ ಮೊದಲೇ ಸಿಕ್ಕಿರಲಿಲ್ಲವಲ್ಲ, ಕಪಿಲ್‌ ಸಿಗುವ ಮೊದಲೇ ರಾಜ್‌ ಕುಂದ್ರಾ ಸಿಕ್ಕಿದರು, ಅದಕ್ಕೇ ಮದುವೆಯಾದೆ’ ಎಂದು ಥಟ್‌ ಅಂತ ಉತ್ತರ ಹೇಳಿ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದ್ದರು. ಅದರೆ ಗುಟ್ಟು ಮಾತ್ರ ಬಿಟ್ಟು ಕೊಟ್ಟಿರಲಿಲ್ಲ.

ಈ ಎಪಿಸೋಡ್‌ ಇದೀಗ ಪುನಃ ವೈರಲ್‌ ಆಗುತ್ತಿದೆ. ಶಿಲ್ಪಾ ಶೆಟ್ಟಿ ಅಭಿಮಾನಿಗಳು ಪುನಃ ಇದೇ ಪ್ರಶ್ನೆಯನ್ನು ಶಿಲ್ಪಾ ಅವರ ಮುಂದೆ ಇಡುತ್ತಿದ್ದಾರೆ.

ಅಂದಹಾಗೆ, ಶಿಲ್ಪಾ ಶೆಟ್ಟಿ ಅವರನ್ನು ರಾಜ್‌ಕುಂದ್ರಾ ಮೊದಲು ಪ್ರಪೋಸ್‌ ಮಾಡಿದಾಗ ಶಿಲ್ಪಾ ಅವರ ಪಾಲಕರು ಇದಕ್ಕೆ ಒಪ್ಪಿರಲಿಲ್ಲವಂತೆ. ನಂತರ ಪ್ಯಾರೀಸ್‌ನಲ್ಲಿ ಪ್ರಪೋಸ್‌ ಮಾಡಿದ್ದ ರಾಜ್‌ಕುಂದ್ರಾ ಐದು ಕ್ಯಾರೆಟ್‌ ವಜ್ರವನ್ನು ಶಿಲ್ಪಾರಿಗೆ ನೀಡಿದ್ದರು. ನಂತರ ಮದುವೆಯಾದರೆ ಇದಕ್ಕಿಂತಲೂ ದುಬಾರಿಯ ಬೆಲೆಬಾಳುವ ಗಿಫ್ಟ್‌ ನೀಡುವುದಾಗಿ ಹೇಳಿದ್ದರಂತೆ.

ಇನ್ನೂ ಒಂದು ಇಂಟರೆಸ್ಟಿಂಗ್‌ ವಿಷಯ ಎಂದರೆ ಇದೇ ಷೋನಲ್ಲಿ ಕಪಿಲ್‌ ಷರ್ಮಾ ಅವರು, ರಾಜ್‌ಕುಂದ್ರಾ ಅವರಿಗೆ ನೀವು ಕೆಲಸ ಮಾಡುವುದನ್ನೇ ನೋಡಲಿಲ್ಲ, ಆದರೂ ಇಷ್ಟೊಂದು ದುಡ್ಡು ಹೇಗೆ ಗಳಿಸ್ತೀರಾ ಎಂದು ತಮಾಷೆಯಾಗಿ ಪ್ರಶ್ನಿಸಿದ್ದರು. ಅವರ ಆದಾಯದ ಮೂಲ ಏನಾದ್ರೂ ಗೊತ್ತಾ ಎಂಬ ಪ್ರಶ್ನೆ ಹಾಕಿದ್ದರು. ಅದಕ್ಕೆ ಕುಂದ್ರಾ ಹಾಗೂ ಶಿಲ್ಪಾ ಬಿದ್ದು ಬಿದ್ದು ನಕ್ಕರೇ ವಿನಾ ಉತ್ತರ ಕೊಟ್ಟಿರಲಿಲ್ಲ. ಇದರ ವಿಡಿಯೋ ಕೂಡ ಈಗ ಸಕತ್‌ ವೈರಲ್‌ ಆಗಿದೆ.

ಇಲ್ಲಿದೆ ನೋಡಿ ವಿಡಿಯೋ:

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net