

ನವದೆಹಲಿ: ಅಮೆರಿಕದ ಪಾಪ್ ಗಾಯಕ ನಿಕ್ ಜೋನಸ್ ಜತೆ ಮದುವೆಯಾದ ಮೇಲೆ ಬಾಲಿವುಡ್ ನಟಿ ಪ್ರಿಯಾಂಕಾ ಚೋಪ್ರಾ ಹಾಲಿವುಡ್‌ನಲ್ಲಿ ಸಕತ್ ಬಿಜಿಯಾಗಿದ್ದಾರೆ. ಭಾರತಕ್ಕೆ ಬರುವುದು ಅವರು ಕಮ್ಮಿಯೇ. ಅಮೆರಿಕದಲ್ಲಿಯೇ ಕಾಯಂ ಸೆಟ್ಲ್ ಆಗಿದ್ದಾರೆ. ಆದಾಗ್ಯೂ ಭಾರತದ ಕೆಲವೊಂದು ಹಬ್ಬಗಳನ್ನು ಆಚರಿಸುವ ಮೂಲಕ ಅದರ ವಿಡಿಯೋ ಶೇರ್ ಮಾಡಿಕೊಂಡು ತಮ್ಮ ಅಭಿಮಾನಿಗಳನ್ನು ಖುಷಿಪಡಿಸುತ್ತಿದ್ದಾರೆ.
ಇದೀಗ ವಿಮಾನದಲ್ಲಿ ಅವರು ಕುಳಿತುಕೊಂಡಿರುವ ಭಂಗಿಯೊಂದು ಭಾರಿ ವೈರಲ್ ಆಗಿದ್ದು, ಮೆಚ್ಚುಗೆಗಳ ಮಹಾಪೂರವೇ ಹರಿದುಬಂದಿದೆ.
ಅಷ್ಟಕ್ಕೂ ಪ್ರಿಯಾಂಕಾ ಕುಳಿತುಕೊಂಡಿರುವುದು ಚಕ್ಕಳ ಮಕ್ಕಳ ಹಾಕಿಕೊಂಡು. ಸಾಮಾನ್ಯವಾಗಿ ಭಾರತೀಯರು (ಈಗ ಟೇಬಲ್ ಸಂಪ್ರದಾಯ ಬಂದಮೇಲೆ ಈ ಪದ್ಧತಿ ಹೆಚ್ಚಿನ ಕಡೆ ಬಿಟ್ಟುಹೋಗಿದೆಯೆನ್ನಿ) ಚಕ್ಕಳ ಮಕ್ಕಳ ಹಾಕಿಕೊಂಡು ಕುಳಿತುಕೊಳ್ಳುತ್ತಾರೆ. ಅದೇ ರೀತಿ ಪ್ರಿಯಾಂಕಾ ವಿಮಾನದಲ್ಲಿ ಕುಳಿತುಕೊಂಡಿದ್ದಾರೆ ಅಷ್ಟೇ.
ಅಭಿಮಾನಿಗಳಿಗೆ ಹಾಗೆ ತಾನೆ? ತಮ್ಮ ಸ್ಟಾರ್ ನಟ-ನಟಿಯರು ಏನೇ ಮಾಡಿದರೂ ಚೆನ್ನ. ಹಾಗೆಯೇ ಪ್ರಿಯಾಂಕಾಳನ್ನು ದೇಸಿ ಹುಡುಗಿ ಎಂದು ಬಣ್ಣಿಸಿ ಈ ಫೋಟೋ ವೈರಲ್ ಮಾಡಿದ್ದಾರೆ. ಇದಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಗಿದೆ.