ಕರೊನಾವನ್ನು ಮಣಿಸಿದ ಗಾಯಕ ಎಸ್​. ಪಿ.ಬಾಲಸುಬ್ರಹ್ಮಣ್ಯಂ; ವರದಿ ನೆಗೆಟಿವ್​

SPB
Published on

ಖ್ಯಾತ ಗಾಯಕ ಎಸ್​ಪಿ ಬಾಲಸುಬ್ರಹ್ಮಣ್ಯಂ ಅವರು ಕರೊನಾದಿಂದ ಪಾರಾಗಿದ್ದಾರೆ. ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಎಸ್​ಪಿಬಿ ಅವರಿಗೆ ಇಂದು ಕರೊನಾ ಟೆಸ್ಟ್ ಮಾಡಲಾಗಿತ್ತು. ವರದಿ ನೆಗೆಟಿವ್​ ಬಂದಿದೆ.

ಸದ್ಯ ಎಸ್​.ಪಿ.ಬಾಲಸುಬ್ರಹ್ಮಣ್ಯ ಅವರು ವೆಂಟಿಲೇಟರ್​ನಲ್ಲೇ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂದು ಅವರ ಆರೋಗ್ಯದಲ್ಲಿ ಸ್ವಲ್ಪ ಚೇತರಿಕೆ ಕಂಡು ಬಂದಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ

ಆಗಸ್ಟ್​ 5ರಂದು ಎಸ್​ಪಿಬಿ ಅವರಲ್ಲಿ ಕರೊನಾ ದೃಢಪಟ್ಟಿತ್ತು. ಅಂದಿನಿಂದಲೂ ಚೆನ್ನೈನ ಎಂಜಿಎಂ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಕಳೆದ ಕೆಲವು ದಿನಗಳಿಂದ ಆರೋಗ್ಯ ಸ್ಥಿತಿ ಗಂಭೀರವಾಗಿದ್ದ ಕಾರಣ ಐಸಿಯುವಿನಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿತ್ತು. ಅವರ ಅಸಂಖ್ಯಾತ ಅಭಿಮಾನಿಗಳು ನೆಚ್ಚಿನ ಗಾಯಕನ ಆರೋಗ್ಯಕ್ಕಾಗಿ ಪ್ರತಿದಿನ ಪ್ರಾರ್ಥಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net