

ಬೆಂಗಳೂರು: ಉಪೇಂದ್ರ ತಮ್ಮ 'ಎ' ಚಿತ್ರವನ್ನು ಒಬ್ಬ ಸಾಮಾನ್ಯ ಮನುಷ್ಯನಿಂದ ಲಾಂಚ್ ಮಾಡಿಸಿದ್ದರು. ಈಗ 'ರೂಪಾಯಿ' ಚಿತ್ರತಂಡ ಸಹ ಅಂಥದ್ದೇ ಒಂದು ಹೆಜ್ಜೆ ಇಟ್ಟಿದೆ. ವೀರೇಶ ಚಿತ್ರಮಂದಿರದಲ್ಲಿ ಚಿತ್ರರಂತಡದವರು ಆಟೋ, ಕ್ಯಾಬ್ ಚಾಲಕರು, ವಿಧ್ಯಾರ್ಥಿಗಳು ಹಾಗೂ ಹೋಟೆಲ್ ಮಾಣಿಗಳಿಂದ ಚಿತ್ರದ ಟ್ರೈಲರ್ ಬಿಡಗುಡೆ ಮಾಡಿಸಿದ್ದಾರೆ.
ವಿಜಯ್ ಜಗದಾಲ್ ನಾಯಕನಾಗಿ ನಟಿಸಿ, ನಿರ್ದೇಶಿಸಿರುವ 'ರೂಪಾಯಿ' ಚಿತ್ರದ ಟ್ರೇಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಕಲ್ ಇತ್ತೀಚೆಗೆ ಬಿಡುಗಡೆಯಾಗಿದೆ. ಯಾವುದೇ ಚಿತ್ರ ಬಿಡುಗಡೆಯಾದರೂ ಮೊದಲ ಸಾಲಿನಲ್ಲಿ ನಿಂತು ಟಿಕೆಟ್ ಪಡೆದು ತಮ್ಮ ಅಭಿಮಾನವನ್ನು ಪ್ರದರ್ಶಿಸುವ ಆಟೋ, ಕ್ಯಾಬ್ ಚಾಲಕರು, ವಿದ್ಯಾರ್ಥಿಗಳು ಹಾಗೂ ಹೋಟೆಲ್ ಮಾಣಿಗಳಿಗೆ "ರೂಪಾಯಿ" ತಂಡ ವಿಶೇಷ ಧನ್ಯವಾದ ತಿಳಿಸಿದೆ.
ವಿಜಯ್ ಜಗದಾಲ್, ಕೃಷಿ ತಾಪಂಡ, ಚಂದನ ರಾಘವೇಂದ್ರ, ಮೈತ್ರಿ ಜಗದೀಶ್, ರಾಮ್ ಚಂದನ್, ಪ್ರಮೋದ್ ಶೆಟ್ಟಿ, ಅನಿಲ್ ಕುಮಾರ್ ಮುಂತಾದವರು ಈ ಚಿತ್ರದಲ್ಲಿ ನಟಿಸಿದ್ದಾರೆ. ಕಾಮಿಡಿ, ಆಕ್ಷನ್, ಲವ್, ಸೆಂಟಿಮೆಂಟ್ ಸೇರಿದಂತೆ ಈ ಚಿತ್ರದಲ್ಲಿ ಎಲ್ಲ ಅಂಶಗಳೂ ಇವೆ.
'ರೂಪಾಯಿ' ಚಿತ್ರವು ಇದೇ ಫೆಬ್ರವರಿ 10 ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಖ್ಯಾತ ನಟ ಡಾಲಿ ಧನಂಜಯ ಇತ್ತೀಚೆಗೆ 'ರೂಪಾಯಿ' ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭ ಕೋರಿದ್ದಾರೆ.