ಜೂನಿಯರ್ ಎನ್ಟಿಆರ್ ಜನ್ಮದಿನಕ್ಕೆ RRR ಚಿತ್ರತಂಡದಿಂದ ಭರ್ಜರಿ ಗಿಫ್ಟ್

Junior NTR Final
Published on

ಹೈದರಾಬಾದ್; ಮುಂದಿನ ದೀಪಾವಳಿಗೆ ಬಿಡುಗಡೆಯಾಗಲು ಸಿದ್ದತೆ ಮಾಡಿಕೊಳ್ಳುತ್ತಿರುವ RRR ಸಿನಿಮಾ ಸಿನಿ ಪ್ರಿಯರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ. ಈಗಾಗಲೇ ಚಿತ್ರದ ನಟರ ಜನ್ಮದಿನದ ಪ್ರಯುಕ್ತ ಒಂದೊಂದು ಟ್ರೈಲರ್, ಪೋಸ್ಟರ್ ಬಿಡುಗಡೆ ಮಾಡುತ್ತಾ ಬಂದಿದ್ದ ಚಿತ್ರತಂಡ ಇದೀಗ ಸಿನಿಮಾದ ಮುಖ್ಯಭೂಮಿಕೆಯಲ್ಲಿ ನಟಿಸುತ್ತಿರುವ ಜೂನಿಯರ್ ಎನ್ ಟಿ ಆರ್ ಅವರ ಜನ್ಮದಿನದ ಪ್ರಯುಕ್ತ ಹೊಸ ಪೋಸ್ಟರ್ ಒಂದನ್ನು ಅನಾವರಣಗೊಳಿಸುತ್ತಿದೆ.

ಮೇ 20 ರಂದು ಜೂನಿಯರ್‌ ಎನ್ ಟಿ ಆರ್ ಅವರು ತಮ್ಮ 40 ನೇ ವರ್ಷದ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ.

ಅಲ್ಲದೇ ಮೈತ್ರಿ ಮೂವೀಸ್ ಬ್ಯಾನರ್ ಅಡಿ ಕೂಡ ಎನ್ಟಿಆರ್ ಹೊಸ ಸಿನಿಮಾದಲ್ಲಿ ನಟಿಸುತ್ತಿದ್ದು ಇವರೂ ಕೂಡ ಮೇ 20 ರಂದೇ ಚಿತ್ರದ ಶಿರ್ಷಿಕೆಯನ್ನು ಅನಾವರಣಗೊಳಿಸುತ್ತಿದ್ದಾರೆ. ಅಂದ ಹಾಗೇ ಈ ಸಿನಿಮಾವನ್ನು ಕೆಜಿಎಫ್ ಖ್ಯಾತಿಯ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿದ್ದಾರೆ.

ಇನ್ನು RRR ಸಿನಿಮಾವನ್ನು ಎಸ್ ಎಸ್ ರಾಜಮೌಳಿ ನಿರ್ದೇಶಿಸುತ್ತಿದ್ದು ರಾಮ್ ಚರಣ್, ಜೂ ಎನ್ಟಿಅರ್, ಅಜಯ್ ದೇವಗನ್, ಆಲಿಯಾ ಭಟ್ ಸೇರಿದಂತೆ ಅನೇಕ ದಿಗ್ಗಜರು ನಟಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net