ಖಾಕಿ ಲುಕ್‌ನಲ್ಲಿ ರೂಪೇಶ್; ಭರದಿಂದ ಸಾಗಿದ ಅಧಿಪತ್ರ ಚಿತ್ರದ ಶೂಟಿಂಗ್

adhipatra
Published on

ಬೆಂಗಳೂರು: ‘ಬಿಗ್ ಬಾಸ್’ ವಿಜೇತ ರೂಪೇಶ್ ಶೆಟ್ಟಿ ‘ಸರ್ಕಸ್’,‘ಗಿರ್ಗಿಟ್’ ಸೇರಿ ಹಲವು ತುಳು ಸಿನಿಮಾಗಳಲ್ಲಿ ಹಾಗೂ ಕೆಲವು ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಚಯನ್ ಶೆಟ್ಟಿ ಚೊಚ್ಚಲ ಬಾರಿಗೆ ನಿರ್ದೇಶಿಸುತ್ತಿರುವ ‘ಅಧಿಪತ್ರ’ ಚಿತ್ರದಲ್ಲೂ ನಾಯಕರಾಗಿದ್ದಾರೆ.

ಇದೊಂದು ನೈಜ ಘಟನೆಯಿಂದ ಸ್ಫೂರ್ತಿ ಪಡೆದ ಸಸ್ಪೆನ್ಸ್ ಥ್ರಿಲ್ಲರ್ ಜಾನರ್‌ನ ಸಿನಿಮಾ. ಇತ್ತೀಚೆಗಷ್ಟೇ ಚಿತ್ರೀಕರಣ ಶುರು ಮಾಡಿದ್ದು, ಸದ್ಯ ಕುಂದಾಪುರದ ಕೆರಾಡಿಯಲ್ಲಿ ಚಿತ್ರೀಕರಣ ಭರದಿಂದ ಸಾಗಿದೆ. ಈ ಹಿಂದೆ ‘ಕಾಂತಾರ’ ಸಿನಿಮಾ ಕೂಡ ಇದೇ ಊರಲ್ಲಿ ಚಿತ್ರೀಕರಣ ನಡೆಸಿದ್ದು ವಿಶೇಷ.

ಈಗಾಗಲೇ ತುಳು ಸಿನಿಮಾಗಳಲ್ಲಿ ಕಾಮಿಡಿ ಹಾಗೂ ಭಿನ್ನ ಪಾತ್ರಗಳಲ್ಲಿ ಮಿಂಚಿರುವ ನಟ ಹಾಗೂ ನಿರ್ದೇಶಕ ರೂಪೇಶ್, ‘ಅಧಿಪತ್ರ’ದಲ್ಲಿ ಖಾಕಿ ಧರಿಸಿ ಪೊಲೀಸ್ ಪಾತ್ರದಲ್ಲಿ ಮಿಂಚಲು ರೆಡಿಯಾಗಿದ್ದಾರೆ. ರೂಪೇಶ್‌ಗೆ ಜೋಡಿಯಾಗಿ ಜಾಹ್ನವಿ ಅಭಿನಯಿಸಿದ್ದು ಈ ಮೂಲಕ ಸಿನಿಮಾ ರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net