VIDEO | ಮತ್ತೊಂದು ಐಷಾರಾಮಿ ಕಾರು ಖರೀದಿಸಿದ ರಾಕಿ ಭಾಯ್; ಎಷ್ಟಿದರ ಬೆಲೆ?

Yash
Published on

ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಬೆಲೆ ಬಾಳುವ ಕಾರುಗಳ ಒಡೆಯ. ಇದೀಗ ಮತ್ತೊಂದು ಐಷಾರಾಮಿ ಕಾರು ಖರೀದಿಸಿದ್ದು, ಕಪ್ಪು ಬಣ್ಣದ ರೇಂಜ್​ ರೋವರ್​ ಕಾರಿನಲ್ಲಿ ಪತ್ನಿ, ಮಕ್ಕಳೊಂದಿಗೆ ಒಂದು ರೌಂಡ್ ಸುತ್ತಾಡಿ ಬಂದಿದ್ದಾರೆ. ಇದೀಗ ಈ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.

ಹೊಸ ಕಾರು ಖರೀದಿಸಿರುವ ಯಶ್​ಗೆ ಅಭಿಮಾನಿಗಳು ಶುಭಾಶಯ ತಿಳಿಸುತ್ತಿದ್ದಾರೆ. ಜತೆಗೆ ರೇಜ್ ರೋವರ್ ಐಷಾರಾಮಿ ಕಾರಿನ ಬೆಲೆ ಎಷ್ಟಿರಬಹುದು ಎಂದು ಫ್ಯಾನ್ಸ್ ಲೆಕ್ಕ ಹಾಕುತ್ತಿದ್ದಾರೆ. ರಾಕಿಂಗ್ ಸ್ಟಾರ್ ಖರೀದಿಸಿರುವ ಹೊಸ ಕಾರಿನ ಬೆಲೆ ಬರೋಬ್ಬರಿ 4 ಕೋಟಿ ರೂಪಾಯಿ ಎಂದು ಹೇಳುಲಾಗುತ್ತಿದೆ. ಹೊಸ ರೇಂಜ್ ರೋವರ್ ಕಾರಲ್ಲದೆ, ಆಡಿ Q7, BMW 5, ಮರ್ಸಿಡೆಸ್ ಬೆಂಜ್, ಫಾರ್ಚ್ಯೂನರ್ ಕಾರುಗಳನ್ನು ಹೊಂದಿದ್ದಾರೆ.

ಯಶ್ ಖರೀದಿ ಮಾಡಿರುವ ರೇಂಜ್ ರೋವರ್ ದುಬಾರಿ ಕಾರುಗಳಲ್ಲಿ ಒಂದಾಗಿದೆ. ಈ ಕಾರನ್ನು ವಿಶೇಷವಾಗಿ ರಾಜಕಾರಣಿಗಳು, ಸಿನಿಮಾ ತಾರೆಯರು ಹೆಚ್ಚಾಗಿ ಖರೀದಿಸುತ್ತಾರೆ. ಇದೀಗ ಹೊಸ ಕಾರಿನೊಂದಿಗೆ, ಯಶ್ ಹಾಗೂ ರಾಧಿಕಾ ಪಂಡಿತ್ ತಮ್ಮ ಮಕ್ಕಳೊಂದಿಗೆ ಕ್ಯಾಮರಾಗೆ ಫೋಸ್ ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net