ರಾಕೆಟ್ರಿ ಮೆಚ್ಚಿದ ರಜಿನಿಕಾಂತ್

Rocketry
Published on

ಮಾಧವನ್ ಮೊದಲ ಬಾರಿಗೆ ಆಕ್ಷನ್-ಕಟ್ ಹೇಳಿರುವ ಚಿತ್ರ ‘ರಾಕೆಟ್ರಿ - ದಿ ನಂಬಿ ಎಫೆಕ್ಟ್’. ಇಸ್ರೋ ವಿಜ್ಞಾನಿ ನಂಬಿ ನಾರಾಯಣ್ ಅವರ ಜೀವನಾಧಾರಿತ ಚಿತ್ರ ಕಳೆದ ಜುಲೈ 1ರಂದು ರಿಲೀಸ್ ಆಗಿತ್ತು. ಚಿತ್ರಕ್ಕೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಸದ್ಯ ಓಟಿಟಿಯಲ್ಲೂ ಬಿಡುಗಡೆಯಾಗಿದೆ. ಇತ್ತೀಚೆಗಷ್ಟೇ ಚಿತ್ರ ನೋಡಿದ ರಜಿನಿಕಾಂತ್, ಮಾಧವನ್ ಮತ್ತು ನಂಬಿ ನಾರಾಯಣ್ ಇಬ್ಬರನ್ನೂ ತಮ್ಮ ಮನೆಗೆ ಆಮಂತ್ರಿಸಿ ಸನ್ಮಾನ ಮಾಡಿದ್ದಾರೆ. ಮಾಧವನ್, ರಜಿನಿ ಕಾಲಿಗೆ ನಮಸ್ಕರಿಸಿ ಆಶೀರ್ವಾದ ಪಡೆದಿದ್ದಾರೆ.

ಈ ಕುರಿತು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಆರ್. ಮಾಧವನ್, ‘ರಜಿನಿಕಾಂತ್ ಅವರೇ ಒಂದು ಚಿತ್ರರಂಗವಿದ್ದಂತೆ. ನಂಬಿ ನಾರಾಯಣ್ ರಂತಹ ಲೆಜೆಂಡ್ ಸಮ್ಮುಖದಲ್ಲಿ ಮತ್ತೊಬ್ಬ ಲೆಜೆಂಡ್ ರಜಿನಿ ಸರ್ ಆಶೀರ್ವಾದ ಪಡೆದ ನಾನೇ ಧನ್ಯ. ನಿಮ್ಮ ಪ್ರೀತಿ ನಮಗೆ ಮತ್ತಷ್ಟು ಪ್ರೇರೇಪಣೆ ನೀಡಿದೆ. ಧನ್ಯವಾದಗಳು ರಜಿನಿ ಸರ್’ ಎಂದು ಬರೆದು ಶೇರ್ ಮಾಡಿದ್ದಾರೆ. ಸದ್ಯ ಅವರ ಈ ಪೋಸ್ಟ್ ಸೋಷಿಯಲ್ ಮೀಡಿಯಾಗಳಲ್ಲಿ ಸಾಕಷ್ಟು ವೈರಲ್ ಆಗಿದೆ. -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net