ಶಾಲಾ ಮಕ್ಕಳಿಗೆ 'ವಿಕ್ರಾಂತ್ ರೋಣ' ಪೈರಸಿ ಸಿನಿಮಾ ತೋರಿಸಿದ್ರು​; ನಿರ್ಮಾಪಕರಿಂದ ಪೊಲೀಸರಿಗೆ ದೂರು..

Vikrant Rona
Published on

ಬೆಂಗಳೂರು: ಕನ್ನಡದಲ್ಲಿ ಹೊಸ ಸಿನಿಮಾ ರಿಲೀಸ್ ಆದಾಗೆಲ್ಲ ಸಾಮಾನ್ಯವಾಗಿ ಕಾಡುವಂಥ ದೊಡ್ಡ ಸಮಸ್ಯೆ ಎಂದರೆ ಪೈರಸಿಯದ್ದು. ಇದು ಈಗ 'ವಿಕ್ರಾಂತ್ ರೋಣ' ಸಿನಿಮಾಗೂ ಕಾಡಿದ್ದು, ವಾರ್ಡನ್​ ಒಬ್ಬರು ಶಾಲಾ ಮಕ್ಕಳಿಗೆ ಪೈರಸಿ ಕಾಪಿ ತೋರಿಸಿದ ಪ್ರಕರಣವೂ ನಡೆದಿದೆ.

ಚಿತ್ರದ ಯಶಸ್ಸಿನ ಕುರಿತು ಮಾತನಾಡಿದ ನಿರ್ಮಾಪಕ ಜಾಕ್​ ಮಂಜು, 'ವಿಕ್ರಾಂತ್ ರೋಣ' ಸಿನಿಮಾಗೆ ಸಂಬಂಧಿಸಿದ ಕೆಲವು ವಿಚಾರಗಳ ಕುರಿತಾಗಿ ಹೇಳಿಕೊಂಡಿದ್ದಾರೆ. ಕೆಲವರು ವಿಕ್ರಾಂತ್ ರೋಣ ಸಿನಿಮಾ ವಿರುದ್ಧ ನಕಾರಾತ್ಮಕ ವಿಷಯಗಳನ್ನು ಹರಿಬಿಡುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ, ಅವರು ಹಾಗೆ ನಕಾರಾತ್ಮಕ ಸಂದೇಶಗಳನ್ನು ಪ್ರಸಾರ ಮಾಡುತ್ತಿರುವವರು ಹಾಳು ಮಾಡುತ್ತಿರುವುದು ನನ್ನನ್ನಲ್ಲ, ಕನ್ನಡ ಸಿನಿಮಾವನ್ನು ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅದಾಗ್ಯೂ ಸಿನಿಮಾ ಕಿಕ್ಕಿರಿದು ಪ್ರದರ್ಶನ ಕಾಣುತ್ತಿದ್ದು, ಇದು ನಕಾರಾತ್ಮಕ ಸಂದೇಶ ಹರಿಬಿಡುತ್ತಿರುವವರಿಗೆ ಜನರು ಕೊಟ್ಟ ಉತ್ತರ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಅಲ್ಲದೆ ಪೈರಸಿ ಕುರಿತಾಗಿ ಮಾತನಾಡಿರುವ ನಿರ್ಮಾಪಕ, ಮುಳಬಾಗಿಲು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಗೆ ವಿಕ್ರಾಂತ್ ರೋಣ ಚಿತ್ರದ ಪೈರಸಿ ಕಾಪಿ ತೋರಿಸಿದ್ದನ್ನು ತಿಳಿಸಿದ್ದಾರೆ. ಶಾಲೆಯವರು ಪೈರಸಿ ಸಿನಿಮಾ ತೋರಿಸುವ ಮೂಲಕ ನನ್ನ ಹೊಟ್ಟೆಯ ಮೇಲೆ ಹೊಡೆದಿರುವುದಲ್ಲದೆ ಮಕ್ಕಳ ಭವಿಷ್ಯವನ್ನು ಹಾಳು ಮಾಡುವ ಕೆಲಸ ಮಾಡಿದ್ದಾರೆ. ಆ ಕುರಿತು ದಾಖಲೆಗಳ ಸಹಿತ ಕೋಲಾರ ಎಸ್​ಪಿಗೆ ದೂರು ನೀಡಿದ್ದಾಗಿ ಅವರು ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net