

ಬೆಂಗಳೂರು: ‘ಚಾಲೆಂಜಿಂಗ್ ಸ್ಟಾರ್’ ದರ್ಶನ್ ಅಭಿನಯದ ಬಹುನಿರೀಕ್ಷಿತ ‘ರಾಬರ್ಟ್’ ಚಿತ್ರತಂಡ ಒಂದಾದ ಮೇಲೊಂದು ವಿಷಯಗಳನ್ನು ಬಿಟ್ಟುಕೊಡುತ್ತ, ಸಿನಿಮಾ ಕುರಿತ ಕುತೂಹಲವನ್ನು ಹೆಚ್ಚಿಸುತ್ತ ಹೋಗುತ್ತಿದೆ. ಇಲ್ಲಿಯವರೆಗೂ ಪೋಸ್ಟರ್, ಮೋಷನ್ ಪೋಸ್ಟರ್ಗಳ ಮೂಲಕ ಅಭಿಮಾನಿಗಳಿಗೆ ಹಬ್ಬದೂಟ ಹಾಕಿಸಿದ್ದ ‘ರಾಬರ್ಟ್’ ಬಳಗ, ಈಗ ಟೀಸರ್ ನೀಡಲು ಪ್ಲಾ್ಯನ್ ಮಾಡಿದೆ. ಫೆ.16ರರ ದರ್ಶನ್ ಜನ್ಮದಿನದ ಪ್ರಯುಕ್ತ ರಾತ್ರಿ 12ಕ್ಕೆ ಟೀಸರ್ ಬಿಡುಗಡೆ ಆಗಲಿದೆ. ಈಗಾಗಲೇ ಚಿತ್ರೀಕರಣ ಮುಗಿಸಿಕೊಂಡಿರುವ ‘ರಾಬರ್ಟ್’ ಸದ್ಯ ಪೋಸ್ಟ್ ಪ್ರೊಡಕ್ಷನ್ ಕೆಲಸಗಳಲ್ಲಿ ತೊಡಗಿಸಿಕೊಂಡಿದೆ. ಏ.9ಕ್ಕೆ ಚಿತ್ರ ಬಿಡುಗಡೆ ಆಗಲಿದೆ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ, ನಿರ್ದೇಶಕ ತರುಣ್ ಸುಧೀರ್ ಆ ಬಗ್ಗೆ ತುಟಿ ಬಿಚ್ಚಿಲ್ಲ. ಆಶಾ ಭಟ್ ನಾಯಕಿಯಾಗಿ ನಟಿಸಿದ್ದು, ಸೋನಲ್ ಮೊಂತೆರೊ, ತೇಜಸ್ವಿನಿ ಪ್ರಕಾಶ್, ಐಶ್ವರ್ಯಾ ಪ್ರಸಾದ್ ಸಹ ಪ್ರಮುಖ ಪಾತ್ರ ನಿಭಾಯಿಸಿದ್ದಾರೆ. ಇನ್ನುಳಿದಂತೆ ಖಳನಾಗಿ ಜಗಪತಿ ಬಾಬು ನಟಿಸಿದರೆ, ವಿನೋದ್ ಪ್ರಭಾಕರ್, ರವಿಶಂಕರ್, ರವಿಕಿಶನ್ ಮುಂತಾದವರೂ ಪಾತ್ರವರ್ಗದಲ್ಲಿದ್ದಾರೆ. ‘ಉಮಾಪತಿ ಫಿಲಮ್್ಸ’ ಬ್ಯಾನರ್ನಲ್ಲಿ ಉಮಾಪತಿ ಶ್ರೀನಿವಾಸ ಗೌಡ ಚಿತ್ರ ನಿರ್ಮಾಣ ಮಾಡುತ್ತಿದ್ದಾರೆ.