‘ರಾಬರ್ಟ್’ ಚಿತ್ರತಂಡದಿಂದ ಶುಭ ಶುಕ್ರವಾರ ಸಿಗಲಿದೆ ಸಿಹಿ ಸುದ್ದಿ

WhatsApp Image 2020-04-29 at 12.46.59 PM
Published on

ಬೆಂಗಳೂರು: ಎಲ್ಲ ಅಂದುಕೊಂಡಂತೆ ನಡೆದಿದ್ದರೆ ಏ.4ರಂದು ರಾಬರ್ಟ್​ ಸಿನಿಮಾ ಬಿಡುಗಡೆ ಆಗಿರಬೇಕಿತ್ತು. ಆದರೆ, ಕರೊನಾದಿಂದ ಅದು ಮುಂದೂಡುತ್ತಲೇ ಬಂತು. ಆದರೆ, ಅಭಿಮಾನಿಗಳಿಗೆ ಚಿತ್ರತಂಡ ನಿರಾಸೆ ಮಾಡಲಿಲ್ಲ. ಚಿತ್ರದ ಬಗ್ಗೆ ಒಂದಿಲ್ಲೊಂದು ಅಪ್​ಡೇಟ್​ ಮಾಹಿತಿ ನೀಡುತ್ತಲೇ ಬಂದಿತ್ತು. ಇದೀಗ ಇನ್ನೊಂದು ಸುದ್ದಿಯ ಜತೆಗೆ ಸದ್ದು ಮಾಡುತ್ತ ಆಗಮಿಸಿದೆ.
ಹೌದು, ಮೇ 1ರ ಕಾರ್ಮಿಕರ ದಿನಾಚರಣೆ ಪ್ರಯುಕ್ತ ರಾಬರ್ಟ್​ ತಂಡ ಸಣ್ಣ ವಿಡಿಯೋ ತುಣುಕೊಂದನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಸಿನಿಮಾದ ತೆರೆಹಿಂದೆ ದುಡಿದ ಕಾರ್ಮಿಕರಿಗೆ ಗೌರವ ಅರ್ಪಿಸುವ ಕೆಲಸ ಈ ವಿಡಿಯೋ ಮೂಲಕ ಆಗಿದೆಯಂತೆ. ಕಾರ್ಮಿಕರನ್ನು ವಾರಿಯರ್ಸ್​ ಎಂದು ಹೇಳಿಕೊಂಡಿರುವ ಚಿತ್ರದ ನಿರ್ದೇಶಕ ತರುಣ್​ ಸುದೀರ್​, ಆ ವಿಡಿಯೋವನ್ನು ನಿರ್ಮಾಪಕ ಉಮಾಪತಿ ಶ್ರೀನಿವಾಸ್​ ಯೂಟ್ಯೂಬ್​ ಚಾನೆಲ್​ನಲ್ಲಿ ಬೆಳಗ್ಗೆ 10.05 ಕ್ಕೆ ಬಿಡುಗಡೆ ಮಾಡುತ್ತಿದ್ದಾರೆ.
ಇನ್ನು ಸಿನಿಮಾ ವಿಚಾರಕ್ಕೆ ಬರುವುದಾದರೆ, ಸದ್ಯ ಬಹುತೇಕ ಎಲ್ಲ ಕೆಲಸಗಳನ್ನು ಮುಗಿಸಿಕೊಂಡಿರುವ ರಾಬರ್ಟ್​, ಲಾಕ್​ಡೌನ್​ ತೆರವಾಗುತ್ತಿದ್ದಂತೆ ತೆರೆಗೆ ಬರಲು ಸಜ್ಜಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net