

ಬಾಲಿವುಡ್ ನಟ ಇರ್ಫಾನ್ ಖಾನ್ ಬುಧವಾರ ನಿಧನರಾದ ಬೆನ್ನಲ್ಲೆ, ಇಡೀ ಭಾರತೀಯ ಚಿತ್ರರಂಗ ಕಂಬನಿ ಮಿಡಿದಿದೆ. ಸಾಮಾಜಿಕ ಜಾಲತಾಣದಲ್ಲಿ ನೆಚ್ಚಿನ ನಟನ ಫೋಟೋ ಶೇರ್ ಮಾಡಿಕೊಂಡು, ಇರ್ಫಾನ್ ಅವರೊಂದಿಗೆ ಕಳೆದ ನೆನಪುಗಳನ್ನು ನೆನಪಿಸಿಕೊಂಡು, ಅಂತಿಮ ನಮನ ಸಲ್ಲಿಸಿದ್ದಾರೆ.
ಅಮಿತಾಬ್ ಬಚ್ಚನ್ ಟ್ವೀಟ್ ಮಾಡಿ, ‘ನನ್ನನ್ನು ತುಂಬ ಕಾಡಿದ ಸುದ್ದಿ ಇರ್ಫಾನ್ ಇಲ್ಲ ಎಂಬುದು. ಅಸಾಮಾನ್ಯ ಪ್ರತಿಭೆ. ಅದ್ಬುತ ಪ್ರತಿಭೆ, ವಿಶ್ವ ಸಿನಿಮಾಕ್ಕೆ ಅತ್ಯದ್ಬುತ ಕೊಡುಗೆ ನೀಡಿದಾತ. ನಮ್ಮನ್ನೆಲ್ಲ ಬಿ್ಟು ತುಂಬ ಬೇಗ ಹೋಗಿಬಿಟ್ಟ. ನಿಮ್ಮ ಆತ್ಮಕ್ಕೆ ಶಾಂತಿ ಸಿಗಲಿ’ ಎಂದಿದ್ದಾರೆ.
ನಟಿ ನಯನತಾರಾ, ಮಲಯಾಳಂ ನಟ ಪೃಥ್ವಿರಾಜ್ ಸುಕುಮಾರನ್, ನಿರ್ದೇಶಕ ಸೂಜಿತ್ ಸಿರ್ಕಾರ್, ಕ್ರಿಕೆಟಿಗ ಸುರೇಶ್ ರೈನಾ, ರಾಜಲಕಾರಣಿ ಶೋಭಾ ಕರಂದ್ಲಾಜೆ, ವಿವೇಕ್ ಓಬೇರಾಯ್, ಕನ್ನಡದ ನಟಿ ಸಂಯುಕ್ತಾ ಹೊರನಾಡು, ತೆಲುಗು ನಟ ನಾನಿ, ಟೈಗರ್ ಶ್ರಾಫ್, ಕ್ರಿಕೆಟಿಗ ಅನಿಲ್ ಕುಂಬ್ಳೆ, ವಿರೇಂದ್ರ ಸೆಹ್ವಾಗ್, ಅಕ್ಷಯ್ ಕುಮಾರ್, ಸುನೀಲ್ ಶೆಟ್ಟಿ, ಅಜಯ್ ದೇವಗನ್, ಲತಾ ಮಂಗೇಶ್ವಕರ್ ಸೇರಿ ಇಡೀ ಭಾರತೀಯ ಚಿತ್ರರಂಗ ಇರ್ಫಾನ್ ಸಾವಿಗೆ ಕಂಬನಿ ಮಿಡಿದಿದೆ.