ಪಾಯಲ್​ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲು ಮುಂದಾದ ರಿಚಾ ...

Richa - Payal
Published on

ಮುಂಬೈ: ಬಾಲಿವುಡ್​ ನಿರ್ದೇಶಕ ಅನುರಾಗ್​ ಕಶ್ಯಪ್​ ಮೇಲೆ ನಟಿ ಪಾಯಲ್​ ಘೋಶ್​ ಮೀಟೂ ಆರೋಪ ಹೊರಿಸಿರುವ ಪ್ರಕರಣ ಈಗ ಇನ್ನೊಂದು ತಿರುವು ಪಡೆದಿದೆ. ಈಗ ಪಾಯಲ್​ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲು ಮತ್ತೊಬ್ಬ ನಟಿ ರಿಚಾ ಚಡ್ಢಾ ಮುಂದಾಗಿದ್ದಾರೆ.

ಇಷ್ಟಕ್ಕೂ ರಿಚಾಗೂ ಈ ಪ್ರಕರಣಕ್ಕೂ ಏನು ಸಂಬಂಧ ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ವಿಷಯ ಏನೆಂದರೆ, ಅನುರಾಗ್​ ಕಶ್ಯಪ್​ ಜತೆಗೆ ನಟಿಯರಾದ ರಿಚಾ ಚಡ್ಢಾ, ಮಾಹಿ ಗಿಲ್​ ಮತ್ತು ಹ್ಯೂಮಾ ಖುರೇಷಿ ಮುಂತಾದವರು ಸಹಕರಿಸಿದ್ದರಂತೆ. ಹಾಗಂತ ಖುದ್ದು ಅನುರಾಗ್​ ಕಶ್ಯಪ್​ ತಮಗೆ ಹೇಳಿದ್ದರು ಎಂದು ಪಾಯಲ್​ ಸೋಷಿಯಲ್​ ಮೀಡಿಯಾದಲ್ಲಿ ಬರೆದುಕೊಂಡಿದ್ದರು.

ತಮ್ಮ ಹೆಸರನ್ನು ಈ ವಿಷಯದಲ್ಲಿ ಅನಾವಶ್ಯಕವಾಗಿ ಎಳೆದು ತಂದಿರುವ ಪಾಯಲ್​ ಮೇಲೆ ಇದೀಗ ಕಾನೂನು ಕ್ರಮ ಕೈಗೊಳ್ಳುವುದಕ್ಕೆ ರಿಚಾ ಚಡ್ಢಾ ಮುಂದಾಗಿದ್ದಾರೆ. ಈ ಕುರಿತು, ಪತ್ರಿಕಾ ಪ್ರಕಟಣೆ ಹೊರಡಿಸಿರುವ ರಿಚಾ, ಅದನ್ನು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್​ ಮಾಡಿದ್ದಾರೆ.

'ದೌರ್ಜನ್ಯಕ್ಕೆ ಒಳಗಾಗಿರುವ ಮಹಿಳೆಯರಿಗೆ ನ್ಯಾಯ ಸಿಗಬೇಕು ಎನ್ನುವುದು ನಿಜವಾದರೂ, ಹಾಗಂತ ಯಾರೂ ಕಾನೂನುಗಳನ್ನು ದುರಪಯೋಗ ಪಡಿಸಿಕೊಳ್ಳಬಾರದು. ಅದರಿಂದ ಬೇರೆಯವರ ಹೆಸರಿಗೆ ಮಸಿ ಬಳಿಯಬಾರದು. ಈ ಪ್ರಕರಣದಲ್ಲಿ ಅನಾವಶ್ಯಕವಾಗಿ ತಮ್ಮ ಹೆಸರನ್ನು ಎಳೆದು ತಂದಿರುವ ಪಾಯಲ್​ ವಿರುದ್ಧ ಕಾನೂನು ರೀತಿಯಲ್ಲಿ ಹೋರಾಟ ನಡೆಸುವುದಕ್ಕೆ ಮುಂದಾಗಬೇಕಾಗುತ್ತದೆ' ಎಂದು ರಿಚಾ ಪೋಸ್ಟ್​ ಮಾಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net