ಸುಶಾಂತ್​ ಆತ್ಮಹತ್ಯೆ ಪ್ರಕರಣ; ಕ್ರಿಮಿನಲ್​ ಲಾಯರ್ ನಿಯೋಜಿಸಿ ರಿಯಾ ಚಕ್ರವರ್ತಿ ಕಣ್ಮರೆ!

coorg
Published on

ಸುಶಾಂತ್​ ಸಿಂಗ್​ ಆತ್ಮಹತ್ಯೆ ಪ್ರಕರಣ ದಿನದಿಂದ ದಿನಕ್ಕೆ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಬಾಲಿವುಡ್​ನ ಘಟಾನುಘಟಿಗಳ ವಿಚಾರಣೆ ಒಂದೆಡೆ ನಡೆದರೆ, ಮಂಗಳವಾರವಷ್ಟೇ ಸುಶಾಂತ್​ ಪ್ರೇಯಸಿ ರಿಯಾ ಚಕ್ರವರ್ತಿ ವಿರುದ್ಧ ಪಾಟ್ನಾದಲ್ಲಿ ಎಫ್​ಐಆರ್ ದಾಖಲಾಗಿತ್ತು. ಇದೀಗ ಅದೇ ರಿಯಾಗಾಗಿ ಹುಡುಕಾಟ ನಡೆದಿದೆ.

ಹೌದು, ಪಾಟ್ನಾದ ರಾಜೀವ್​ ನಗರ ಪೊಲೀಸ್ ಠಾಣೆಯಲ್ಲಿ ಸುಶಾಂತ್​ ತಂದೆ ಕೆಕೆ ಸಿಂಗ್​, ರಿಯಾ ವಿರುದ್ಧ ದೂರು ನೀಡುತ್ತಿದ್ದಂತೆ, ಇತ್ತ ರಿಯಾ ಸಹ ಕ್ರಿಮಿನಲ್ ಲಾಯರ್ ಮೊರೆ ಹೋಗಿದ್ದಾರೆ. ಖ್ಯಾತ ವಕೀಲ ಸತೀಶ್ ಮನೆಶಿಂಧೆ ಅವರನ್ನು ನೇಮಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಪಾಟ್ನಾದಲ್ಲಿನ ಪ್ರಕರಣವನ್ನು ಮುಂಬೈಗೆ ವರ್ಗಾವಣೆ ಮಾಡುವಂತೆ ಕೋರಿ ಸುಪ್ರೀಂ ಕೋರ್ಟ್​ಗೆ ಅರ್ಜಿಯನ್ನೂ ಸಲ್ಲಿಸಿದ್ದಾರೆ.

ಇನ್ನು ಈ ನಡುವೆ ರಿಯಾ ಚಕ್ರವರ್ತಿ ಅವರ ನಿವಾಸದಿಂದ ಕಾಣೆಯಾಗಿದ್ದಾರೆ. ಯಾರ ಕಣ್ಣಿಗೆ ಬಿದ್ದಿಲ್ಲ ಎಂಬ ಸುದ್ದಿ ಹರಿದಾಡುತ್ತಿದ್ದಂತೆ. ಮುಂಬೈ ಪೊಲೀಸ್ ರಿಯಾ ಅವರಿಗಾಗಿ ಹುಡುಕಾಟ ನಡೆಸಿದೆ. ಇತ್ತ ಪಾಟ್ನಾದ ನಾಲ್ವರು ಪೊಲೀಸರ ತಂಡ ಮುಂಬೈಗೆ ಆಗಮಿಸಿದ್ದು, ಕೆಕೆ ಸಿಂಗ್​ ನೀಡಿದ ದೂರಿನನ್ವಯ ವಿಚಾರಣೆಗೆ ಮುಂದಾಗಿದ್ದಾರೆ. ಈ ವೇಳೆ ರಿಯಾ ಮನೆಗೂ ಭೇಟಿ ನೀಡಿದ್ದಾರೆ. ಆದರೆ, ರಿಯಾ ಮಾತ್ರ ಮನೆಯಲ್ಲೂ ಕಾಣದೆ, ವಿಚಾರಣೆಗೆ ಲಭ್ಯರಾಗಲಿಲ್ಲ ಎಂದು ಮುಂಬೈ ಪೊಲೀಸ್​ ಇಲಾಖೆ ತಿಳಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net