ಹೌದು ನಾನು ಡ್ರಗ್​ ಸೇವಿಸುತ್ತೇನೆ, ಏನೀಗ?; ಎನ್​ಸಿಬಿ ಮುಂದೆ ರಿಯಾ ತಪ್ಪೊಪ್ಪಿಗೆ

rhea
Published on

ಮುಂಬೈ: ಬಾಲಿವುಡ್​ನಲ್ಲಿ ಸುಶಾಂತ್​ ಸಿಂಗ್ ಪ್ರಕರಣವನ್ನು ಬೇರೆ ಬೇರೆ ರೀತಿಯಲ್ಲಿ ತನಿಖೆ ಮಾಡಲಾಗುತ್ತಿದೆ. ಒಂದೆಡೆ ಸುಶಾಂತ್​ ಸಾವಿನ ಹಿನ್ನೆಲೆ ಏನೆಂಬುದರ ಬಗ್ಗೆ ತನಿಖೆ ನಡೆಯುತ್ತಿದ್ದರೆ, ಇತ್ತ ಡ್ರಗ್​ ಮಾಫಿಯಾ ಇಡೀ ಬಾಲಿವುಡ್​ ಅನ್ನೇ ನಡುಗಿಸುತ್ತಿದೆ. ಈಗಾಗಲೇ ಡ್ರಗ್​ ಮಾಫಿಯಾಕ್ಕೆ ಸಂಬಂಧಿಸಿದಂತೆ ಬಂಧಿತಳಾಗಿರುವ ನಟಿ ರಿಯಾ, ತಾನು ಡ್ರಗ್​ ಸೇವಿಸುತ್ತೇನೆ ಎಂಬ ಸತ್ಯವನ್ನು ಬಾಯ್ಬಿಟ್ಟಿದ್ದಾರೆ.

ಹೌದು, ಇತ್ತೀಚಿನ ಮಾಹಿತಿ ಪ್ರಕಾರ, ನಟಿ ರಿಯಾ ಅವರನ್ನು ಎನ್​ಸಿಬಿ ಪುನಃ ವಿಚಾರಣೆಗೆ ಆಹ್ವಾನಿಸಿತ್ತು. ಆಗ ಡ್ರಗ್​ ಸೇವನೆಯ ಅಸಲಿಯತ್ತನ್ನು ಹೇಳಿಕೊಂಡಿದ್ದಾರೆ. ವಿಚಾರಣೆ ವೇಳೆ ಡ್ರಗ್​ ಸೇವಿಸುವುದಕ್ಕಿಂತ ಪೆಡ್ಲರ್​ ಆಗಿ ಕೆಲಸ ಮಾಡುವುದು ಡ್ರಗ್​ ಸೇವಿಸುವುದಕ್ಕಿಂತ ದೊಡ್ಡ ತಪ್ಪು. ಹಾಗಾಗಿ ಇವೆರಡರಲ್ಲಿ ನೀವೇನು ಎಂದು ಪ್ರಶ್ನಿಸಲಾಗಿತ್ತು. ಅದಕ್ಕೆ ಪ್ರತಿಯಾಗಿ, ನಾನು ಡ್ರಗ್​ ಸೇವಿಸುತ್ತಿದ್ದೆ ಎಂದು ಉತ್ತರ ನೀಡಿದ್ದಾರೆ ರಿಯಾ.

ಈ ಹಿಂದೆ ಎಷ್ಟೇ ಕೇಳಿದರೂ ಉತ್ತರ ನೀಡದ ರಿಯಾ, ಇದೀಗ ಡ್ರಗ್​ ಸೇವಿಸುವು ಬಗ್ಗೆ ಎನ್​ಸಿಬಿ ತಂಡದ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾರೆ. ಇನ್ನು ರಿಯಾ ಜತೆ ಸಹೋದರ ಶೋವಿಕ್​ ಚಕ್ರವರ್ತಿ, ಸ್ಯಾಮ್ಯೂಲ್​ ಮಿರಂಡಾ ಸೇರಿ ಹಲವರನ್ನು ಎನ್​ಸಿಬಿ ಬಂಧಿಸಿ ವಿಚಾರಣೆ ಮುಂದುವರಿಸಿದೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net