

ಆ್ಯಪ್ನಲ್ಲಿ ಬಿಡುಗಡೆಯಾಗಬೇಕಿದ್ದ ಆರ್ಜಿವಿ ನಿರ್ದೇಶನದ ಪವರ್ಸ್ಟಾರ್ ಚಿತ್ರದ ಟ್ರೇಲರ್, ಬಿಡುಗಡೆಗೂ ಮುನ್ನವೇ ಲೀಕ್ ಆಗಿದ್ದರ ಹಿನ್ನೆಲೆಯಲ್ಲಿ ಯೂಟ್ಯೂಬ್ನಲ್ಲಿ ಸ್ವತಃ ಆರ್ಜಿವಿ ಶೇರ್ ಮಾಡಿಕೊಂಡರು. ಇದೀಗ ಅಚ್ಚರಿ ವಿಚಾರ ಏನೆಂದರೆ ‘ಪರಂಜೀವಿ’ ಶೀರ್ಷಿಕೆಯ ಹೊಸ ಚಿತ್ರದ ಪೋಸ್ಟರ್ವೊಂದು ಬಿಡುಗಡೆಯಾಗಿ ಭಾರೀ ಸದ್ದು ಮಾಡುತ್ತಿದೆ.
‘ಪರಂಜೀವಿ’ ಚಿತ್ರದಲ್ಲಿ ಆರ್ಜಿವಿ ಮುಖ್ಯಭೂಮಿಕೆ ನಿಭಾಯಿಸಲಿದ್ದಾರೆ. ಹಾಗಂತ ರಾಮ್ಗೋಪಾಲ್ ವರ್ಮಾ ನಟಿಸುತ್ತಿದ್ದಾರೆ ಎಂದಲ್ಲ. ಬದಲಿಗೆ ಹೊಸ ನಿರ್ದೇಶಕರೊಬ್ಬರು ಆರ್ಜಿವಿಗೆ ಟಾಂಗ್ ಕೊಡಲೆಂದೇ, ಪರಂಜೀವಿ ಚಿತ್ರ ನಿರ್ದೇಶನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಇದೇ ಜುಲೈ 25ರ ಶನಿವಾರ ಬೆಳಗ್ಗೆ 11 ಗಂಟೆಗೆ ಶ್ರೇಯಸ್ ಇಟಿ ಯಲ್ಲಿ ಈ ಚಿತ್ರ ಪ್ರಸಾರವಾಗಲಿದೆ.
ಇದನ್ನೂ ಓದಿ: ಕೆಲಸ ಇಲ್ಲದೆ ರಾಖಿ ಮಾಡಿ ಮಾರುತ್ತಿರುವ ಸೀರಿಯಲ್ ನಟಿ
ಈಗಾಗಲೇ ಬಿಗ್ಬಾಸ್ ಸೀಸನ್ 2ರಲ್ಲಿ ಸ್ಪರ್ಧಿಯಾಗಿದ್ದ ನೂತನ್ ನಾಯ್ಡು ನಿರ್ದೇಶನ ಮಾಡಲಿರುವ ಈ ಚಿತ್ರದಲ್ಲಿ ಆರ್ಜಿವಿಯ ಇನ್ನೊಂದು ಮುಖವನ್ನು ಬಹಿರಂಗ ಮಾಡಲಿದ್ದಾರಂತೆ. ಸದ್ಯ ಒಂದು ಕಡೆ ಪವನ್ ಕಲ್ಯಾಣ್ ಟ್ರೇಲರ್ ಮತ್ತೊಂದು ಕಡೆ ಪರಂಜೀವಿ ಪೋಸ್ಟರ್.. ಸದ್ಯ ತೆಲುಗು ನಾಡಲ್ಲಿ ಈ ಎರಡು ವಿಚಾರಗಳು ಸದ್ದು ಮಾಡುತ್ತಿದ್ದು, ಸಿನಿಮಾಸ್ತಕರಲ್ಲಿ ಕುತೂಹಲ ಸೃಷ್ಟಿಸಿವೆ. (ಏಜೆನ್ಸೀಸ್