ನೀವು ಕೂಡ ಒಂದು ಹೆಣ್ಣಿಗೆ ಹುಟ್ಟಿದವರಲ್ಲವೇ? ಅಭಿಮಾನಿ ಕಾಮೆಂಟ್​ಗೆ ಪವನ್ ಕಲ್ಯಾಣ್​ ಮಾಜಿ ಪತ್ನಿ ಕಣ್ಣೀರು

Renu Desai
Published on

ಹೈದರಾಬಾದ್​: ನಟಿ ಹಾಗೂ ಪವನ್​ ಕಲ್ಯಾಣ್​ ಅವರ ಮಾಜಿ ಪತ್ನಿ ರೇಣು ದೇಸಾಯಿ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. ರೇಣು ಅವರು ಯಾವುದೇ ಪೋಸ್ಟ್​ ಹಾಕಿದರೂ ಪವನ್​ ಕಲ್ಯಾಣ್​ ಅವರ ಅಭಿಮಾನಿಗಳು ಕಾಲೆಳೆಯುವಂತಹ ಕಾಮೆಂಟ್​ಗಳನ್ನು ಮಾಡುತ್ತಿರುತ್ತಾರೆ. ಇಷ್ಟುದಿನ ಅವರ ಕಾಮೆಂಟ್​ಗಳಿಗೆ ಪ್ರತಿಕ್ರಿಯಿಸದೇ ಸುಮ್ಮನಿರುತ್ತಿದ್ದ ರೇಣು, ಈ ಬಾರಿ ಪ್ರತಿಕ್ರಿಯೆ ನೀಡುವ ಮೂಲಕ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಅಕಿರ ನಂದನ್​ ಹುಟ್ಟುಹಬ್ಬ

ನಿನ್ನೆ (ಏ.8) ರೇಣು ಅವರ ಪುತ್ರ ಅಕಿರ ನಂದನ್​ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ನಟ ನಾಗಬಾಬು, ಸಾಯಿಧರಮ್ ತೇಜ್, ವರುಣ್ ತೇಜ್ ಸೇರಿದಂತೆ ಪವನ್ ಅಭಿಮಾನಿಗಳು ಕೂಡ ಸಾಮಾಜಿಕ ಜಾಲತಾಣಗಳ ಮೂಲಕ ಹುಟ್ಟುಹಬ್ಬದ ಶುಭಾಶಯಗಳನ್ನು ಹಂಚಿಕೊಂಡಿದ್ದಾರೆ. ಆದರೆ, ಕೆಲ ಅಭಿಮಾನಿಗಳು ಮಾಡಿರುವ ಕಾಮೆಂಟ್​ ರೇಣು ಅವರ ಮನಸ್ಸನ್ನು ಘಾಸಿಗೊಳಸಿವೆ.

ಅಭಿಮಾನಿ ಕಾಮೆಂಟ್​

ಮೇಡಂ ಇದು ಅತಿಯಾಯಿತು. ಒಂದು ಬಾರಿಯಾದರೂ ಅಕಿರ ನಂದನ್​ ಅವರು ನಮಗೆ ತೋರಿಸಿ. ಪವನ್​ ಅಣ್ಣ ಅವರ ಮಗನನ್ನು ನೋಡುವ ಆಸೆ ನಮಗೂ ಇದೆ. ಆಗಾಗ ಅಕಿರ ಅವರ ವಿಡಿಯೋವನ್ನು ಪೋಸ್ಟ್​ ಮಾಡುತ್ತಿರಿ ಎಂದು ತೆಲುಗಿನಲ್ಲಿ ಪವನ್ ಕಲ್ಯಾಣ್​ ಅಭಿಮಾನಿಯೊಬ್ಬ ಕಾಮೆಂಟ್​ ಮಾಡಿದ್ದಾರೆ.

ರೇಣು ಅಸಮಾಧಾನ

ಈ ಕಾಮೆಂಟ್​ಗೆ ಅಸಮಾಧಾನಗೊಂಡಿರುವ ರೇಣು, ಅಕಿರ ನಿನ್ನ ಅಣ್ಣ (ಪವನ್​ ಕಲ್ಯಾಣ್​)ನ ಮಗನಾ? ಅಕಿರ ನನ್ನ ಪುತ್ರ. ನೀವು ಕೂಡ ಒಬ್ಬ ತಾಯಿಗೆ ಹುಟ್ಟಿದವರಲ್ಲವೇ? ನೀವು ಅವರ ಹಾರ್ಡ್‌ಕೋರ್ ಅಭಿಮಾನಿಗಳು ಎಂದು ನಾನು ಅರ್ಥಮಾಡಿಕೊಂಡಿದ್ದೇನೆ. ಆದರೆ ನೀವು ನಂಬಿಕೆಗಿಂತ ಹೆಚ್ಚು ಸಂವೇದನಾಶೀಲರಾಗಿದ್ದೀರಿ. ನಾನು ಈ ರೀತಿಯ ಕಾಮೆಂಟ್‌ಗಳನ್ನು ನಿರ್ಲಕ್ಷಿಸುತ್ತಿರುತ್ತೇನೆ ಮತ್ತು ಅಳಿಸುತ್ತಿರುತ್ತೇನೆ ಮತ್ತು ನಿರ್ಬಂಧಿಸುತ್ತಿರುತ್ತೇನೆ ಆದರೆ ಇಂದು ನನ್ನ ಮಗನ ಹುಟ್ಟುಹಬ್ಬವಾದ್ದರಿಂದ ಈ ಸೂಕ್ಷ್ಮವಲ್ಲದ ಕಾಮೆಂಟ್ ಅನ್ನು ಓದಿದೆ ಮತ್ತು ನನಗೆ ನೋವುಂಟಾಯಿತು ಎಂದು ರೇಣು ದೇಸಾಯಿ ತಮ್ಮ ಇನ್​ಸ್ಟಾಗ್ರಾಂನಲ್ಲಿ ಹೇಳಿದ್ದಾರೆ. (ಏಜೆನ್ಸೀಸ್​)

Renu Desai 1
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net