ನಿಮಗ್ಯಾಕೆ ನಟಿಯರ ಸಂಭಾವನೆ?

thammana
Published on

ಟಾಲಿವುಡ್​ನಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿ ಯಾರು? ಗೊತ್ತಿಲ್ಲ. ಆದರೆ, ತಮನ್ನಾ ಭಾಟಿಯಾ ಮಾತ್ರ ರವಿತೇಜ ಅಭಿನಯದ ಚಿತ್ರವೊಂದರಲ್ಲಿ ನಟಿಸುವುದಕ್ಕೆ ಎರಡೂವರೆ ಕೋಟಿ ಸಂಭಾವನೆ ಕೇಳಿದ್ದಾರೆ ಎಂದು ಸುದ್ದಿಯಾಗಿಬಿಟ್ಟಿದೆ. ಅವರ ಈ ಸಂಭಾವನೆ ಕೇಳಿ ನಿರ್ವಪಕರು, ಸದ್ದಿಲ್ಲದೆ ಜಾಗ ಖಾಲಿ ಮಾಡಿದ್ದಾರೆ ಎಂದು ಹೇಳಲಾಗುತ್ತಿದೆ.

ಯಾವಾಗ ಈ ವಿಷಯ ಸಿಕ್ಕಾಪಟ್ಟೆ ಸುದ್ದಿಯಾಗುವುದಕ್ಕೆ ಪ್ರಾರಂಭವಾಯಿತೋ, ಇದೆಲ್ಲಕ್ಕೂ ಫುಲ್​ಸ್ಟಾಪ್ ಹಾಕುವುದಕ್ಕೆ ಅವರೇ ತೀರ್ವನಿಸಿದ್ದಾರೆ. ತಮ್ಮ ಸಂಭಾವನೆಯ ವಿಷಯದ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ.

ಇಷ್ಟಕ್ಕೂ ನಟಿಯರ ಸಂಭಾವನೆಯ ಬಗ್ಗೆ ಯಾಕೆ ಇಷ್ಟೊಂದು ಕುತೂಹಲ ಎನ್ನುವುದು ಅವರ ಪ್ರಶ್ನೆ. ‘ಸಂಭಾವನೆ ಎಷ್ಟು ಪಡೆಯಬೇಕು ಎನ್ನುವುದು ನನ್ನ ನಿರ್ಧಾರ. ಅಷ್ಟೊಂದು ಸಂಭಾವನೆಗೆ ನಾನು ಅರ್ಹಳಾ, ಅಲ್ಲವಾ ಎಂದು ಬೇರೆಯವರು ತೀರ್ವನಿಸುವುದಕ್ಕೆ ಹೇಗೆ ಸಾಧ್ಯ? ಇದೇ ಪ್ರಶ್ನೆಯನ್ನು ಹೀರೋಗಳಿಗೇಕೆ ಕೇಳುವುದಿಲ್ಲ? ಹೀರೋಗಳ ತರಹ ಹೀರೋಯಿನ್​ಗಳು ಸಹ ಬಹಳ ಕಷ್ಟಪಟ್ಟು ಮೇಲೆ ಬಂದಿರುತ್ತಾರೆ. ಹಾಗಿರುವಾಗ, ಅವರ್ಯಾಕೆ ಹೆಚ್ಚು ಸಂಭಾವನೆ ಪಡೆಯಬಾರು? ಹೈಯೆಸ್ಟ್ ಪೇಯ್್ಡ ಎನ್ನುವುದು ಬರೀ ಹೀರೋಗಳಿಗೆ ಮಾತ್ರ ಸಲ್ಲಬೇಕಾ?’ ಎಂದು ತಮನ್ನಾ ಪ್ರಶ್ನಿಸುತ್ತಾರೆ. ಇನ್ನು ಎರಡೂವರೆ ಕೋಟಿ ಸಂಭಾವನೆ ಕೇಳಿದ್ದರ ಬಗ್ಗೆ ಯಾವುದೇ ಸತ್ಯವಿಲ್ಲ ಎನ್ನುತ್ತಾರೆ ತಮನ್ನಾ. ‘ಇದರಲ್ಲಿ ಯಾವುದೇ ಸತ್ಯಾಂಶವಿಲ್ಲ. ನಿರ್ವಪಕರು ಈಗಲೂ ನನ್ನ ಜತೆಗೆ ಸಂಪರ್ಕದಲ್ಲಿದ್ದಾರೆ. ಲಾಕ್​ಡೌನ್ ಆಗದಿದ್ದರೆ, ಬಹುಶಃ ಎಲ್ಲವೂ ಒಂದು ಹಂತಕ್ಕೆ ಬರುತಿತ್ತೇನೋ. ಆದರೆ, ಮಾತುಕತೆ ಮುಗಿಯುವಷ್ಟರಲ್ಲಿ ಲಾಕ್​ಡೌನ್ ಪ್ರಾರಂಭವಾಯಿತು. ಹಾಗಾಗಿ ಇದು ಮುಗಿದ ಮೇಲೆ, ಚಿತ್ರದ ಬಗ್ಗೆ ಒಂದು ತೀರ್ಮಾನ ತೆಗೆದುಕೊಳ್ಳುವೆ’ ಎಂದು ತಮನ್ನಾ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net