ಸೂಪರ್​ ಹಿಟ್​ ಬೇಬಿ ಚಿತ್ರದಲ್ಲಿ ವೈಷ್ಣವಿ ಫ್ರೆಂಡ್​ ಪಾತ್ರ ಮಾಡಿದ್ದ ಈಕೆ ಸಖತ್​ ಹಾಟ್​! ಫೋಟೋಸ್​ ವೈರಲ್​

Kusuma Degalamani
Published on

ಹೈದರಾಬಾದ್​: ಇತ್ತೀಚಿನ ದಿನಗಳಲ್ಲಿ ಸಣ್ಣ ಸಿನಿಮಾಗಳು ಕೂಡ ಪ್ರೇಕ್ಷಕರಿಂದ ಮೆಚ್ಚುಗೆಗೆ ಪಾತ್ರವಾಗುತ್ತಿರುವುದು ಎಲ್ಲರಿಗೂ ಗೊತ್ತೇ ಇದೆ. ಆ ಸಿನಿಮಾಗಳ ಜತೆಗೆ ನಾಯಕ, ನಾಯಕಿಯರು, ಸೈಡ್ ಕ್ಯಾರೆಕ್ಟರ್​ಗಳಿಗೂ ಅದೇ ಮಟ್ಟದಲ್ಲಿ ಒಳ್ಳೆಯ ಮನ್ನಣೆ ಸಿಗುತ್ತಿದೆ. ಚಿಕ್ಕ ಪಾತ್ರ ಮಾಡಿದವರಿಗೂ ಪ್ರೇಕ್ಷಕರಿಗೆ ನೆನಪಾಗುವ ರೀತಿಯಲ್ಲಿ ಕ್ರೇಜ್ ಸಿಗುತ್ತದೆ. ಆದರೆ, ತೆರೆಗೆ ಪರಿಚಯವಾಗುವ ಮುನ್ನ ಕೆಲವರು ಡಬ್ಬಿಂಗ್ ಕಲಾವಿದರಾಗಿ, ರೂಪದರ್ಶಿಗಳಾಗಿ ನಾನಾ ವೃತ್ತಿಗಳಲ್ಲಿ ತೊಡಗಿಸಿಕೊಂಡಿರುತ್ತಾರೆ.

ಹೌದು, ಈ ಮೇಲಿನ ಫೋಟೋದಲ್ಲಿ ಕಾಣುತ್ತಿರುವ ಈ ಯುವತಿ, ಸಾಯಿ ರಾಜೇಶ್ ನಿರ್ದೇಶನದ 'ಬೇಬಿ' ಚಿತ್ರದ ಮೂಲಕ ಪ್ರೇಕ್ಷಕರಿಗೆ ಪರಿಚಯವಾದಳು. ಅಂದಹಾಗೆ ಬೇಬಿ ಸಿನಿಮಾ 2023ರ ಜುಲೈ 14 ರಂದು ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು. ಆನಂದ್ ದೇವರಕೊಂಡ, ವೈಷ್ಣವಿ ಚೈತನ್ಯ ಮತ್ತು ವಿರಾಜ್ ಅಶ್ವಿನ್ ಈ ಸಿನಿಮಾದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾ ಸೂಪರ್ ಹಿಟ್ ಕೂಡ ಆಯಿತು. ಅಷ್ಟೇ ಅಲ್ಲ, ಸಿನಿಮಾ ಬಿಡುಗಡೆಯಾದ 11 ದಿನಗಳಲ್ಲೇ ಸುಮಾರು 70 ಕೋಟಿ ಕಲೆಕ್ಷನ್ ಮಾಡಿದ್ದು ಗೊತ್ತೇ ಇದೆ.

ಇನ್ನು ಈ ಸಿನಿಮಾದಲ್ಲಿ ವೈಷ್ಣವಿಯ ಗೆಳತಿ ಪಾತ್ರ ನಿಮಗೆ ನೆನಪಿರಬಹುದು. ಸ್ವಲ್ಪ ಸಮಯ ಮಾತ್ರ ಕಾಣಿಸಿಕೊಳ್ಳುವ ಈ ಯುವತಿ ತನ್ನ ಮುಗ್ಧ ನಟನೆಯಿಂದಲೇ ಎಲ್ಲರನ್ನು ಆಕರ್ಷಿಸಿದರು. ಬೇಬಿ ಸಿನಿಮಾದಲ್ಲಿ ಬಡ ಕಾಲೇಜು ವಿದ್ಯಾರ್ಥಿನಿ ಪಾತ್ರದಲ್ಲಿ ಕಾಣಿಸಿಕೊಂಡಿರುವ ಈ ಚೆಲುವೆ ನಿಜ ಜೀವನದಲ್ಲಿ ಹೇಗಿದ್ದಾಳೆ ಅಂತ ತಿಳಿದರೆ ನಿಜಕ್ಕೂ ಶಾಕ್ ಆಗುತ್ತೀರಿ. ಇದೀಗ ಅವರ ಗ್ಲಾಮರಸ್ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿವೆ.

ಬೇಬಿ ಸಿನಿಮಾದಲ್ಲಿ ವೈಷ್ಣವಿ ಸ್ಕೂಲ್ ಫ್ರೆಂಡ್ ಆಗಿ ಕಾಣಿಸಿಕೊಂಡಿದ್ದ ಈ ಯುವತಿ ಹಲವರಿಗೆ ನೆನಪಿರಬಹುದು. ಸಿನಿಮಾದ ಸೆಕೆಂಡ್ ಆಪ್​ನಲ್ಲಿ ವೈಷ್ಣವಿಯ ನಡವಳಿಕೆ ಇಷ್ಟವಾಗದೆ ಆಕೆಯನ್ನು ದೂರವಿಡುವ ಪಾತ್ರವಾಗಿ ತುಂಬಾ ಅದ್ಭುತವಾಗಿ ನಟಿಸಿದ್ದಾರೆ. ಈ ಯುವತಿಯ ನಿಜವಾದ ಹೆಸರು 'ಕುಸುಮಾ ದೇಗಲಮರಿ'. ಚಿತ್ರದಲ್ಲಿ ನಟಿಸುವ ಮೊದಲು, ಅವರು ವಾಯ್ಸ್ ಓವರ್ ಕಲಾವಿದೆ ಮತ್ತು ಮಾಡೆಲ್ ಆಗಿ ಕೆಲಸ ಮಾಡಿದ್ದಾರೆ. ಈ ಚಿತ್ರದಲ್ಲಿ ಡಿಗ್ಲಾಮರಸ್​ ಲುಕ್‌ನಲ್ಲಿ ಕಾಣಿಸಿಕೊಂಡಿರುವ ಈ ಚೆಲುವೆ ಹೊರನೋಟಕ್ಕೆ ತುಂಬಾ ಸುಂದರವಾಗಿದ್ದಾರೆ.

ಆಗಾಗ ತನ್ನ ಗ್ಲಾಮರಸ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುವ ಮೂಲಕ ಎಲ್ಲರನ್ನೂ ಆಕರ್ಷಿಸುತ್ತಾಳೆ. ಅಲ್ಲದೆ, ಸಾಮಾಜಿಕ ಜಾಲತಾಣಗಳಲ್ಲಿ ಆಕೆಯ ಅನೇಕ ವಿಡಿಯೋಗಳು ಮತ್ತು ಮನಮೋಹಕ ಫೋಟೋಗಳನ್ನು ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net