ಗಂಡನೂ ಜತೆಗಿಲ್ಲ… ಈ ಒಂದು ಸಂಬಂಧದಿಂದ ಸುಂದರ ಜೀವನವನ್ನೇ ಹಾಳುಮಾಡಿಕೊಂಡ ನಟಿ ಮೀರಾ ಜಾಸ್ಮಿನ್​!

Meera Jasmine
Published on

ಕೊಚ್ಚಿ: ಮಲಯಾಳಂ ಬ್ಯೂಟಿ ಮೀರಾ ಜಾಸ್ಮಿನ್​ ಯಾರಿಗೆ ತಾನೇ ಗೊತ್ತಿಲ್ಲ. ಒಂದು ಕಾಲದಲ್ಲಿ ಬಹುಭಾಷೆಯ, ಬಹುಬೇಡಿಕೆಯ ನಟಿಯಾಗಿದ್ದ ಜಾಸ್ಮಿನ್,​ ಕಾಲಾನಂತರದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ ಸಿನಿಮಾದಿಂದ ಕಣ್ಮರೆಯಾಗಿದ್ದರು. ಸಾಮಾಜಿಕ ಜಾಲತಾಣದಲ್ಲಿಯೂ ಅವರ ಉಪಸ್ಥಿತಿ ಇರಲಿಲ್ಲ. ಜಾಸ್ಮಿನ್​ ಎಲ್ಲಿ ಹೋದರು ಎಂದು ಬಹುತೇಕರು ಹುಡುಕಾಟ ನಡೆಸುತ್ತಿದ್ದರು. ವೈವಾಹಿಕ ಜೀವನದಲ್ಲಿ ಬಿರುಗಾಳಿ ಎದ್ದು, ಗಂಡನಿಂದ ದೂರಾಗಿರುವ ಜಾಸ್ಮಿನ್​ ಇದೀಗ ಮಲಯಾಳಂ ಸಿನಿ ರಂಗದಲ್ಲಿ ಎರಡನೇ ಇನ್ನಿಂಗ್ಸ್​ ಆರಂಭಿಸಿದ್ದಾರೆ.

2014ರ ಫೆಬ್ರವರಿ 9ರಂದು ದುಬೈನಲ್ಲಿ ಇಂಜಿನಿಯರ್​ ಆಗಿ ಕೆಲಸ ಮಾಡುತ್ತಿದ್ದ ಅನಿಲ್​ ಜಾನ್​ ಟೈಟಸ್​ ಎಂಬುವರನ್ನು ಮದುವೆಯಾಗಿದ್ದ ಮೀರಾ, ಎರಡೇ ವರ್ಷದಲ್ಲಿ ಅಂದರೆ 2016ರಲ್ಲಿ ಡಿವೋರ್ಸ್​ ಪಡೆದುಕೊಂಡರು. ಡಿವೋರ್ಸ್​ ಬಳಿಕ ಕೆಲ ಕಾಲ ಕಣ್ಮರೆಯಾಗಿದ್ದ ಮೀರಾ ಇದೀಗ ಸಿನಿ ಇಂಡಸ್ಟ್ರಿಯಲ್ಲಿ ಮತ್ತೆ ಸೆಕೆಂಡ್​ ಇನ್ನಿಂಗ್ಸ್ ಆರಂಭಿಸಿದ್ದಾರೆ. ಸ್ವತಃ ಮೀರಾ ಅವರೇ ಕೆಲ ನಿರ್ದೇಶಕರ ಬಳಿ ತೆರಳಿ, ಮತ್ತೆ ನಟಿಸುವ ಆಸೆಯನ್ನು ವ್ಯಕ್ತಪಡಿಸಿದ ಬಳಿಕ ಅವಕಾಶ ಸಿಕ್ಕಿದೆ ಎಂದು ಹೇಳಲಾಗುತ್ತಿದೆ.

ತಾಜಾ ಸಂಗತಿ ಏನೆಂದರೆ, ಹಿರಿಯ ಪತ್ರಕರ್ತ ಚೆಯ್ಯರು ಬಾಲು ಅವರು ಮೀರಾ ಜಾಸ್ಮಿನ್​ ಬಗ್ಗೆ ಸಂದರ್ಶನವೊಂದರಲ್ಲಿ ಹೇಳಿರುವ ಮಾತುಗಳು ಮಾಲಿವುಡ್​ ಮತ್ತು ಕಾಲಿವುಡ್​ ಗಲ್ಲಿಯೊಳಗೆ ಸಂಚಲನ ಸೃಷ್ಟಿಸಿದೆ. ಮದುವೆಗೂ ಮುನ್ನ ಮ್ಯೂಸಿಕ್​ ಕಂಪೋಸರ್​ ಒಬ್ಬರ ಮೇಲೆ ಮೀರಾಗೆ ಲವ್​ ಆಗಿತ್ತು. ಸಂಗೀತ ನಿರ್ದೇಶಕನ ಸಂಗೀತಕ್ಕೆ ಮನಸೋತು ತನ್ನನ್ನು ತಾನೇ ಮರೆತಿದ್ದಳು. ಆದರೆ, ಕೆಲವೊಂದು ಭಿನ್ನಾಭಿಪ್ರಾಯಗಳಿಂದಾಗಿ ಇಬ್ಬರ ಸಂಬಂಧ ಮುರಿದುಬಿದ್ದಿತು. ಬಳಿಕ ಬೇರೊಬ್ಬನನ್ನು ಮೀರಾ ಮದುವೆಯಾದರು. ಆ ಬಳಿಕ ಅವರ ಸಿನಿಮಾ ವೃತ್ತಿಜೀವನದಲ್ಲಿ ಬಿರುಗಾಳಿ ಎಬ್ಬಿತು ಎಂದು ಚೆಯ್ಯರು ಬಾಲು ಹೇಳಿದರು.

ಮ್ಯೂಸಿಕ್​ ಕಂಪೋಸರ್​ ಜತೆಗಿನ ಸಂಬಂಧ ಮತ್ತು ಗಂಡನಿಂದ ದೂರಾಗಿದ್ದೆ ಮೀರಾ ಜಾಸ್ಮಿನ್​ ಜೀವನದ ದೊಡ್ಡ ನಷ್ಟಕ್ಕೆ ಕಾರಣ ಎಂದು ಚೆಯ್ಯರು ಬಾಲು ಹೇಳಿದ್ದಾರೆ. ಒಂದು ಕಡೆ ಪ್ರೀತಿಯು ಸಿಗಲಿಲ್ಲ, ಮತ್ತೊಂದು ಕಡೆ ಕಟ್ಟಿಕೊಂಡ ಗಂಡನು ಜತೆಗುಳಿಯಲಿಲ್ಲ ಮತ್ತು ಇನ್ನೊಂದೆಡೆ ಸಿನಿಮಾಗಳೂ ಕೈಹಿಡಿಯಲಿಲ್ಲ. ಇದೀಗ ಸಂಕಷ್ಟದಲ್ಲಿರುವ ಮೀರಾ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದು, ಇನ್ನು ನಿರೀಕ್ಷಿತ ಯಶಸ್ಸು ಸಿಕ್ಕಿಲ್ಲ. ಒಮ್ಮೆಯಾದರೂ ಗೆಲ್ಲುತ್ತಾರಾ ಎಂಬುದನ್ನು ಕಾದುನೋಡಬೇಕಿದೆ.

ಜಾಸ್ಮಿನ್​ ಕನ್ನಡಿಗರಿಗೂ ಚಿರಪರಿಚಿತರು. ಏಕೆಂದರೆ, ಸಾಕಷ್ಟು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಅದರಲ್ಲೂ ದಿವಂಗತ ನಟ ಪುನೀತ್​ ಜತೆ ಮೌರ್ಯ ಮತ್ತು ಅರಸು ಚಿತ್ರಗಳಲ್ಲಿ ನಟಿಸಿದ್ದಾರೆ. ಅಲ್ಲದೆ, ಶಿವಣ್ಣನ ಜತೆ ದೇವರ ಕೊಟ್ಟ ತಂಗಿ ಚಿತ್ರ ಮತ್ತು ರವಿಚಂದ್ರನ್​ ಜತೆ ಹೂ ಸಿನಿಮಾಗಳಲ್ಲಿ ಅಭಿನಯಿಸುವ ಮೂಲಕ ಕನ್ನಡಿಗರ ಮನದಲ್ಲೂ ಜಾಸ್ಮಿನ್​ ಮನೆ ಮಾಡಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net