ಒಂದು ಮುತ್ತಿನ ಕಥೆ!

NB 2
Published on

ಅದು 1986. ಕೆ. ಬಾಲಚಂದರ್ ನಿರ್ದೇಶನದಲ್ಲಿ ಕಮಲ್ ಹಾಸನ್ ನಾಯಕತ್ವದ ‘ಪುನ್ನಗಾಯ್ ಮನ್ನನ್’ ಸಿನಿಮಾ ಬಿಡುಗಡೆ ಆಗಿತ್ತು. ಅಂದಿನ ಆ ಸಿನಿಮಾ ಇದೀಗ ಮತ್ತೆ ಸುದ್ದಿಯಲ್ಲಿದೆ. ಸುದ್ದಿಯ ಜತೆಗೆ ಕಾಲಿವುಡ್​ನಲ್ಲಿ ದೊಡ್ಡ ಸದ್ದು ಮಾಡುತ್ತಿದೆ. ಅದೂ ಒಂದು ಮುತ್ತಿನ ವಿಚಾರಕ್ಕೆ! ಹೌದು, ಹಾಡೊಂದರಲ್ಲಿ ಕಮಲ್ ಹಾಸನ್, ತಮಿಳು ನಟಿ ರೇಖಾಗೆ ಚುಂಬಿಸಿದ್ದೇ ಇದೀಗ ಚರ್ಚೆಗೆ ಕಾರಣವಾಗಿದೆ.

ಅಂದಿನ ಆ ಪ್ರಸಂಗವನ್ನು 34 ವರ್ಷದ ಬಳಿಕ ನಟಿ ರೇಖಾ ಹೇಳಿಕೊಂಡಿದ್ದಾರೆ. ‘ಹಾಡೊಂದರ ಶೂಟಿಂಗ್ ವೇಳೆ ಕಮಲ್ ನನ್ನ ತುಟಿಗೆ ಚುಂಬಿಸಿದ್ದರು. ಅಂಥ ದೃಶ್ಯವಿದೆ ಎಂಬುದನ್ನು ಯಾರೂ ನನ್ನ ಗಮನಕ್ಕೆ ತಂದಿರಲಿಲ್ಲ. ಬಳಿಕ ಸಹಾಯಕ ನಿರ್ದೇಶಕರ ಬಳಿ ಕೇಳಿದಾಗ, ‘ಬಿಗ್ ಕಿಂಗ್ ಸಣ್ಣ ಮಗುವಿಗೆ ಮುತ್ತಿಕ್ಕಿದ್ದಾರೆ. ಆ ರೀತಿಯಲ್ಲಿ ಪರಿಗಣಿಸಿ’ ಎಂದು ನನಗೇ ಸಮಜಾಯಿಷಿ ನೀಡಿದ್ದರು. ತೆರೆಮೇಲೆ ಚುಂಬನದ ದೃಶ್ಯ ಕೆಟ್ಟದಾಗಿ ಬಂದಿರಲಿಲ್ಲ. ಆ ಸನ್ನಿವೇಶಕ್ಕೆ ಬೇಕಿತ್ತು. ಆದರೆ ಮುತ್ತು ಮುತ್ತೇ. ಅದನ್ನು ನನ್ನ ಗಮನಕ್ಕೆ ತಂದಿರಲಿಲ್ಲ ಅಷ್ಟೇ’ ಎಂದು ಹೇಳಿಕೊಂಡಿದ್ದಾರೆ ರೇಖಾ. ಆ ಸಿನಿಮಾ ಶೂಟಿಂಗ್ ವೇಳೆ ನಟಿ ರೇಖಾಗೆ ಕೇವಲ 16 ವರ್ಷ! -ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net