'ಕರ್ನಾಟಕದ ಅಳಿಯ'ನ ಜತೆ ರಾಘವೇಂದ್ರ ರಾಜ್​ಕುಮಾರ್ ಬ್ಯಾಟಿಂಗ್; ಚೇತರಿಸಿಕೊಂಡು ಫೀಲ್ಡ್​ಗಿಳಿದರು ರಾಘಣ್ಣ

Feature
Published on

ಬೆಂಗಳೂರು: ಹಿರಿಯ ನಟ ರಾಘವೇಂದ್ರ ರಾಜ್​ಕುಮಾರ್ ಇತ್ತೀಚೆಗೆ 'ಕರ್ನಾಟಕದ ಅಳಿಯ'ನ ಜತೆಗೆ ಫೀಲ್ಡ್​ಗೆ ಇಳಿದಿದ್ದಷ್ಟೇ ಅಲ್ಲ, ಅನಾರೋಗ್ಯದಿಂದ ಚೇತರಿಸಿಕೊಂಡ ಬಳಿಕ ಉತ್ಸಾಹದಿಂದ ಬ್ಯಾಟಿಂಗ್ ಕೂಡ ಮಾಡಿದ್ದಾರೆ.

ಹೌದು.. ಕೆಲವು ದಿನಗಳ ಹಿಂದೆ ಕಾರ್ಯದೊತ್ತಡದಿಂದ ಒಂದಷ್ಟು ಅಸ್ವಸ್ಥಗೊಂಡಿದ್ದ ಅವರು ಶೂಟಿಂಗ್​ನಿಂದ ಬಿಡುವು ಪಡೆದಿದ್ದರು. ಆದರೆ ಕ್ಷಿಪ್ರಗತಿಯಲ್ಲಿ ಚೇತರಿಸಿಕೊಂಡು ಮತ್ತೆ ಶೂಟಿಂಗ್​ನಲ್ಲಿ ಭಾಗವಹಿಸಿದ್ದಾರೆ. 'ಬಿಗ್​ಬಾಸ್'​ ಖ್ಯಾತಿ ಪ್ರಥಮ್ ಅಭಿನಯದ 'ಕರ್ನಾಟಕದ ಅಳಿಯ' ಸಿನಿಮಾದ ಚಿತ್ರೀಕರಣದಲ್ಲಿ ನಾಲ್ಕೈದು ದಿನಗಳಿಂದ ತೊಡಗಿಕೊಂಡಿದ್ದಾರೆ.

'ಸತತ ಏಳು ಸಿನಿಮಾಗಳಲ್ಲಿ ತೊಡಗಿಸಿಕೊಂಡಿರುವುದರಿಂದ ಹಾಗೂ ಇತರ ಕಾರ್ಯದೊತ್ತಡದಿಂದ ರಾಘಣ್ಣ ಅವರು ಸ್ವಲ್ಪ ಅನಾರೋಗ್ಯಕ್ಕೆ ಒಳಗಾಗಿದ್ದರು. ಆದರೆ ಕೂಡಲೇ ಚೇತರಿಸಿಕೊಂಡು ನನ್ನ ಸಿನಿಮಾದ ಶೂಟಿಂಗ್​ನಲ್ಲಿ ಪಾಲ್ಗೊಂಡಿದ್ದಾರೆ. ತಂದೆಯ ಪಾತ್ರದಲ್ಲಿ ಅಭಿನಯಿಸುತ್ತಿರುವ ಅವರು ಕ್ರಿಕೆಟ್ ಆಡುವ ದೃಶ್ಯಗಳಲ್ಲಿ ಪಾಲ್ಗೊಂಡಿದ್ದಾರೆ. ಸೆಟ್​ನಲ್ಲಿ ಹುರುಪಿನಿಂದಲೇ ಅವರು ತೊಡಗಿಸಿಕೊಂಡಿದ್ದು, ಅವರ ಆರೋಗ್ಯದ ಬಗ್ಗೆ ಪುನೀತ್ ರಾಜ್​ಕುಮಾರ್ ಅವರು ಆಗಾಗ ಕರೆ ಮಾಡಿ ವಿಚಾರಿಸಿಕೊಳ್ಳುತ್ತಿದ್ದಾರೆ' ಎಂದು ಪ್ರಥಮ್ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net