ರತ್ನನ ಪ್ರಪಂಚಕ್ಕೆ ರೆಬಾ ಎಂಟ್ರಿ: ಮೊದಲ ಬಾರಿಗೆ ಕನ್ನಡ ಚಿತ್ರದಲ್ಲಿ ...

Reba Monica (9)
Published on

ಬೆಂಗಳೂರು: ಕನ್ನಡ ಚಿತ್ರರಂಗಕ್ಕೆ ಅದೆಷ್ಟು ಮಲಯಾಳಿ ಚೆಲುವೆಯರು ಎಂಟ್ರಿ ಕೊಟ್ಟಿದ್ದಾರೋ, ಅದೆಷ್ಟು ಚಿತ್ರಗಳಲ್ಲಿ ನಟಿಸಿದ್ದಾರೋ ಎಂಬುದನ್ನು ಲೆಕ್ಕ ಇಟ್ಟವರಿಲ್ಲ. ಈಗ ಆ ಪಟ್ಟಿಗೆ ಮತ್ತೊಬ್ಬ ನಟಿಯ ಆಗಮನವಾಗಿದೆ. ಈ ಬಾರಿ ಕನ್ನಡಕ್ಕೆ ಬಂದವರ ಹೆಸರು ರೆಬಾ ಮೋನಿಕಾ ಜಾನ್.

ಧನಂಜಯ್ ಅಭಿನಯದ ‘ರತ್ನನ್ ಪ್ರಪಂಚ’ ಚಿತ್ರಕ್ಕೆ ಸೂಕ್ತ ನಾಯಕಿಯ ಹುಡುಕಾಟದಲ್ಲಿದ್ದ ಚಿತ್ರತಂಡದವರ ಕಣ್ಣಿಗೆ ಬಿದ್ದಿದ್ದು, ರೆಬಾ. ಈ ಹಿಂದೆ ತಮಿಳಿನ ‘ಬಿಜಿಲ್’ ಸೇರಿದಂತೆ ಕೆಲವು ಚಿತ್ರಗಳಲ್ಲಿ ನಟಿಸಿದ್ದ ರೆಬಾ, ಇದೇ ಮೊದಲ ಬಾರಿಗೆ ಕನ್ನಡ ಚಿತ್ರರಂಗಕ್ಕೆ ಬಂದಿದ್ದಾರೆ. ‘ರತ್ನನ್ ಪ್ರಪಂಚ’ ಎಂಬ ಹೆಸರು ಕೇಳಿದರೆ, ಜಿ.ಪಿ. ರಾಜರತ್ನಂ ಅವರ ‘ರತ್ನನ್ ಪರ್ಪಂಚ’ಕ್ಕೂ, ಚಿತ್ರಕ್ಕೂ ಏನೋ ಸಂಬಂಧವಿರಬಹುದು ಎಂದನಿಸಬಹುದು. ಆದರೆ, ಹಾಗೇನಿಲ್ಲ. ಇದು ರತ್ನಾಕರ ಎಂಬುವವನ ಸುತ್ತ ನಡೆಯುವ ಕಥೆಯಾದ್ದರಿಂದ ಚಿತ್ರಕ್ಕೆ ‘ರತ್ನನ್ ಪ್ರಪಂಚ’ ಎಂಬ ಹೆಸರನ್ನು ಇಡಲಾಗಿದೆ.

ಈ ಚಿತ್ರಕ್ಕೆ ಕಥೆ ಬರೆಯುವುದರ ಜತೆಗೆ ನಿರ್ದೇಶನ ಮಾಡುತ್ತಿದ್ದಾರೆ ರೋಹಿತ್ ಪದಕಿ. ಈ ಹಿಂದೆ ‘ದಯವಿಟ್ಟು ಗಮನಿಸಿ’ ಚಿತ್ರವನ್ನು ನಿರ್ದೇಶಿಸಿದ್ದ ರೋಹಿತ್​ಗೆ ಇದು ಎರಡನೆಯ ಚಿತ್ರ. ಇನ್ನು ‘ಕೆಜಿಎಫ್’ಗೆ ಕಾರ್ಯಕಾರಿ ನಿರ್ವಪಕರಾಗಿರುವ ಕಾರ್ತಿಕ್ ಗೌಡ, ಈ ಚಿತ್ರವನ್ನು ಯೋಗಿ ಜಿ ರಾಜ್ ಜತೆಗೆ ಸೇರಿ ನಿರ್ವಿುಸುತ್ತಿದ್ದಾರೆ. ಈಗಾಗಲೇ ಚಿತ್ರದ ಸ್ಕ್ರಿಪ್ಟ್​ಪೂಜೆಯಾಗಿದ್ದು, ಸೆಪ್ಟೆಂಬರ್​ನಲ್ಲಿ ಚಿತ್ರೀಕರಣ ಪ್ರಾರಂಭವಾಗಲಿದೆ. ಅಜನೀಶ್ ಲೋಕನಾಥ್ ಈ ಚಿತ್ರಕ್ಕೆ ಸಂಗೀತ ಸಂಯೋಜಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net