R&AW ಮಾಸ್ಟರ್‌ಮೈಂಡ್ R N Kao ಜೀವನಕ್ಕೆ ಸಿನಿಮಾ ರೂಪ: ಗುಪ್ತಚರ ಜಗತ್ತಿನ ದಂತಕಥೆ ಹೇಳ ಹೊರಟಿರುವ ಕರಣ್ ಜೋಹರ್! R N Kao

ಕರಣ್ ಜೋಹರ್ ಮತ್ತು ಧರ್ಮ ಪ್ರೊಡಕ್ಷನ್ಸ್‌ನಿಂದ ಭಾರತದ ಹೆಮ್ಮೆಯ ಗುಪ್ತಚರ ಸಂಸ್ಥೆ R&AW ಸ್ಥಾಪಕ R.N. Kao ಜೀವನ ಆಧರಿಸಿದ ಹೊಸ ಸಿನಿಮಾದ ಘೋಷಣೆ! ಬಿಡುಗಡೆ ಯಾವಾಗ? ಸಂಪೂರ್ಣ ಮಾಹಿತಿ ಇಲ್ಲಿದೆ.
Karan Johar announces biopic on R&AW founder R.N. Kao.
ಕರಣ್ ಜೋಹರ್ ಘೋಷಿಸಿದ R&AW ಸ್ಥಾಪಕ R.N. Kao ಬಯೋಪಿಕ್ ಸಿನಿಮಾ
Published on

ಮುಂಬೈ: ಧರ್ಮಾ ಪ್ರೊಡಕ್ಷನ್ಸ್ ಮುಖ್ಯಸ್ಥ ಕರಣ್ ಜೋಹರ್ ಮತ್ತೊಮ್ಮೆ ಬಾಕ್ಸ್‌ ಆಫೀಸ್‌ನಲ್ಲಿ ಸಂಚಲನ ಸೃಷ್ಟಿಸಲು ಸಜ್ಜಾಗಿದ್ದಾರೆ. 'ಕೇಸರಿ', 'ರಾಜಿ' ಮತ್ತು 'ಶೇರ್‌ಶಾ'ದಂತಹ ಸೂಪರ್‌ಹಿಟ್ ಸಿನಿಮಾಗಳನ್ನು ನೀಡಿದ ಬಳಿಕ, ಕರಣ್ ಜೋಹರ್ ಈಗ ಭಾರತದ ಅಪ್ರತಿಮ ಗುಪ್ತಚರ ಸಾಧಕನೊಬ್ಬರ ರೋಚಕ ಕಥೆಯನ್ನು ದೊಡ್ಡ ಪರದೆಗೆ ತರಲು ಮುಂದಾಗಿದ್ದಾರೆ.

1968ರಲ್ಲಿ ಭಾರತದ ಗುಪ್ತಚರ ಸಂಸ್ಥೆಯಾದ 'ರಾ' (R&AW) ಅನ್ನು ಸ್ಥಾಪಿಸಿದ ಮಾಸ್ಟರ್‌ಮೈಂಡ್ ರಮೇಶ್ವರ್ ನಾಥ್ ಕಾಓ (R N Kao) ಅವರ ಜೀವನ ಆಧರಿಸಿದ ಸಿನಿಮಾವನ್ನು ಕರಣ್ ಜೋಹರ್ ಘೋಷಿಸಿದ್ದಾರೆ. 'ಲಿಯೋ ಮೀಡಿಯಾ ಕಲೆಕ್ಟಿವ್' ಜೊತೆ ಕೈಜೋಡಿಸಿರುವ ಧರ್ಮಾ ಪ್ರೊಡಕ್ಷನ್ಸ್, ಈ ಬಿಗ್ ಬಜೆಟ್ ಸಿನಿಮಾಗೆ ಬಂಡವಾಳ ಹೂಡಲು ಮುಂದಾಗಿದೆ.

Also Read
ಜಿಮ್‌ನಲ್ಲೂ ತಾಲಿಬಾನ್ ಸಂಸ್ಕೃತಿ? ಹಿಜಾಬ್ ಕಡ್ಡಾಯ, ಮ್ಯೂಸಿಕ್ ಬ್ಯಾನ್.. ಕೇರಳದ ಮಾಲೀಕನ ನಿಯಮಗಳಿಗೆ ನೆಟ್ಟಿಗರ ಆಕ್ರೋಶ! Kerala Gym Controversy
Karan Johar announces biopic on R&AW founder R.N. Kao.

'ರಾ' ಸಂಸ್ಥೆಯ 58ನೇ ಸಂಭ್ರಮಕ್ಕೆ ಸ್ಪೆಷಲ್ ಗಿಫ್ಟ್!

ಸೆಪ್ಟೆಂಬರ್​ 21 ರಂದು 'ರಾ' ಗುಪ್ತಚರ ಸಂಸ್ಥೆ ತನ್ನ ಸ್ಥಾಪನೆಯ 58ನೇ ವರ್ಷಾಚರನೆಯನ್ನು ಆಚರಿಸಿಕೊಳ್ಳುತ್ತಿದೆ. ಈ ವಿಶೇಷ ದಿನದಂದೇ ಚಿತ್ರತಂಡ ಈ ಮೆಗಾ ಪ್ರಾಜೆಕ್ಟ್ ಅನ್ನು ಘೋಷಿಸಿದೆ. ಭಾರತದ ಗೂಢಚರ್ಯೆ ಇತಿಹಾಸದ 60 ವರ್ಷಗಳ ಸುದೀರ್ಘ ಸಾಧನೆಗೆ ಗೌರವ ಸಲ್ಲಿಸುವ ಉದ್ದೇಶದಿಂದ, ಈ ಸಿನಿಮಾವನ್ನು 2028ರ ಆಗಸ್ಟ್ 11ರ ಸ್ವಾತಂತ್ರ್ಯ ದಿನಾಚರಣೆಯ ವಾರಾಂತ್ಯದಲ್ಲಿ ರಿಲೀಸ್ ಮಾಡಲು ಯೋಜನೆ ರೂಪಿಸಲಾಗಿದೆ.

ಕಳೆದ ಎರಡು ವರ್ಷಗಳಿಂದ ಗುಪ್ತವಾಗಿ ನಡೆದ ಸಿದ್ಧತೆ

ಈ ಚಿತ್ರದ ಬಗ್ಗೆ ಮಾತನಾಡಿರುವ ಕರಣ್ ಜೋಹರ್, ಕಳೆದ ಎರಡು ವರ್ಷಗಳಿಂದ ಲಿಯೋ ಮೀಡಿಯಾ ತಂಡವು ಈ ಕಥೆಯ ಹಿಂದೆ ಬಿದ್ದು, ಅತ್ಯಂತ ನಿಖರವಾಗಿ ಸಂಶೋಧನೆ ನಡೆಸಿದೆ. ಇದನ್ನು ಕೇವಲ ಒಂದು ಸಿನಿಮಾ ಮಾಡುವುದಕ್ಕಿಂತ ಹೆಚ್ಚಾಗಿ, 'ರಾ' ಸಂಸ್ಥೆಗೆ ಸಲ್ಲಿಸುವ ಗೌರವವಾಗಿ ರೂಪಿಸಲು ಹೊರಟಿದ್ದೇವೆ. ನೈಜ ಘಟನೆಗಳ ರೋಚಕತೆಯುಳ್ಳ ಈ ಪ್ರಾಜೆಕ್ಟ್ ಆರಂಭಿಸಲು ನಮ್ಮ ತಂಡ ಕಾಯುತ್ತಿದೆ ಎಂದಿದ್ದಾರೆ.

ಪ್ರಸಿದ್ಧ ಲೇಖಕ ನಿತಿನ್ ಗೋಖಲೆ ಬರೆದಿರುವ 'ಜೆಂಟಲ್‌ಮ್ಯಾನ್ ಸ್ಪೈಮಾಸ್ಟರ್' ಪುಸ್ತಕವೇ ಈ ಸಿನಿಮಾಗೆ ಅಡಿಪಾಯವಾಗಿದ್ದು 2026ರ ಮಧ್ಯಭಾಗದಲ್ಲಿ ಈ ಚಿತ್ರದ ಶೂಟಿಂಗ್ ಶುರುವಾಗಲಿದೆ. ಸದ್ಯಕ್ಕೆ ಸಿನಿಮಾದ ಹೆಸರು, ನಿರ್ದೇಶಕರು ಯಾರು ಮತ್ತು ಯಾವ ಸ್ಟಾರ್ ನಟ ಆರ್.ಎನ್. ಕಾಓ ಪಾತ್ರ ಮಾಡಲಿದ್ದಾರೆ ಎಂಬ ಗುಟ್ಟನ್ನು ಚಿತ್ರತಂಡ ಬಿಟ್ಟುಕೊಟ್ಟಿಲ್ಲ. ಆದರೂ ಬಾಲಿವುಡ್‌ನ ಟಾಪ್ ಎ-ಲಿಸ್ಟ್ ನಟನೊಬ್ಬ ಈ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ ಎಂದು ಬಲ್ಲ ಮೂಲಗಳಿಂದ ಖಚಿತವಾಗಿದೆ.

1955ರಿಂದ 1971ರ ರೋಚಕ ಕಥಾನಕ

ಈ ಸಿನಿಮಾದಲ್ಲಿ 1955 ರಿಂದ 1971 ರ ವರೆಗಿನ ಭಾರತದ ರಾಜಕೀಯ ಮತ್ತು ಗುಪ್ತಚರ ಇತಿಹಾಸದ ಕರಾಳ ಹಾಗೂ ರೋಚಕ ಪುಟಗಳು ತೆರೆದುಕೊಳ್ಳಲಿವೆ. 'ರಾ' ಸಂಸ್ಥೆಯ ಅವಶ್ಯಕತೆ ಏನಿತ್ತು? ಅದು ಹೇಗೆ ಹುಟ್ಟಿಕೊಂಡಿತು? ಮತ್ತು 1971 ರ ಪಾಕಿಸ್ತಾನದ ವಿರುದ್ಧದ ಯುದ್ಧದಲ್ಲಿ ಸಂಸ್ಥೆ ನಡೆಸಿದ ಮೊದಲ ಕಾರ್ಯಾಚರಣೆ ಹೇಗಿತ್ತು ಎಂಬುದನ್ನು ಈ ಸಿನಿಮಾದಲ್ಲಿ ಕಣ್ಣಿಗೆ ಕಟ್ಟುವಂತೆ ತೋರಿಸಲಿದ್ದಾರೆ.

ಗಂಡೆದೆಗಿನ ಧೈರ್ಯ ಹಾಗೂ ತಂತ್ರಗಾರಿಕೆಗೆ ಹೆಸರಾದ ಆರ್.ಎನ್. ಕಾಓ ಜಾಗತಿಕ ಗೂಢಚರ್ಯೆ ಜಗತ್ತಿನಲ್ಲಿ ದಂತಕಥೆ ಎನಿಸಿಕೊಂಡವರು. ಭಾರತದ ಗುಪ್ತಚರ ವ್ಯವಸ್ಥೆಯನ್ನು ಜಾಗತಿಕ ಮಟ್ಟಕ್ಕೆ ತೆಗೆದುಕೊಂಡು ಹೋದ ಇವರ ಬಗ್ಗೆ ಅನೇಕ ಕುತೂಹಲಕಾರಿ ವಿಚಾರಗಳು ಈ ಸಿನಿಮಾದಲ್ಲಿರಲಿವೆ ಎನ್ನಲಾಗುತ್ತಿದೆ, (ಏಜೆನ್ಸೀಸ್​).

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net