ಹೀಗೊಂದು ಹೊಸ ಪ್ರಸಂಗ!; ‘ರವಿಕೆ ಪ್ರಸಂಗ’ ಚಿತ್ರದ ಆಡಿಯೋ ಬಿಡುಗಡೆ

ravike prasanga
Published on

ಬೆಂಗಳೂರು: ‘ಹೋಮ್ ಸ್ಟೇ’, ‘ಒಂದಾನೊಂದು ಕಾಲದಲ್ಲಿ ಒಬ್ಬ ರಾಜನಿದ್ದ’ ಸೇರಿ ಕೆಲವು ಸಿನಿಮಾಗಳಿಗೆ ಆ್ಯಕ್ಷನ್-ಕಟ್ ಹೇಳಿರುವ ಸಂತೋಷ್ ಕೋಡೆಂಕೇರಿ ನಿರ್ದೇಶಿಸುತ್ತಿರುವ ಹೊಸ ಚಿತ್ರ ‘ರವಿಕೆ ಪ್ರಸಂಗ’. ಈ ಚಿತ್ರಕ್ಕೆ ‘ಬ್ರಹ್ಮಗಂಟು’ ಧಾರಾವಾಹಿಯ ನಟಿ ಗೀತಾ ಭಾರತೀ ಭಟ್ ನಾಯಕಿಯಾಗಿದ್ದಾರೆ ಹಾಗೂ ರಾಕೇಶ್ ಮಯ್ಯ ನಾಯಕರಾಗಿದ್ದಾರೆ.

ಹೆಸರಿನಷ್ಟೇ ವಿಭಿನ್ನ ಕಥಾಹಂದರವನ್ನು ಹೊಂದಿರುವ ಚಿತ್ರವಿದು ಎನ್ನಲಾಗಿದೆ. ಇದೊಂದು ಕಾಮಿಡಿ ಡ್ರಾಮಾ ಜಾನರ್‌ನ ಸಿನಿಮಾ ಆಗಿದ್ದು ಹೆಣ್ಣಿನ ಜೀವನವನ್ನು ಭಾವನಾತ್ಮಕವಾಗಿ ನಿರೂಪಿಸಲಾಗಿದೆ. ಇತ್ತೀಚೆಗಷ್ಟೆ ಚಿತ್ರದ ಶೀರ್ಷಿಕೆ ಗೀತೆ ಬಿಡುಗಡೆ ಮಾಡಲಾಯಿತು. ಕಿರಣ್ ಕಾವೇರಪ್ಪ ಸಾಹಿತ್ಯ ಬರೆದಿದ್ದು, ವಿನಯ್ ಸಂಗೀತ ಸಂಯೋಜನೆಯಲ್ಲಿ ಮೂಡಿಬಂದಿರುವ ಈ ಗೀತೆಗೆ ಚೈತ್ರಾ ಹಾಗೂ ಚೇತನ್ ಧ್ವನಿಯಾಗಿದ್ದಾರೆ. ‘ಸಾನ್ವಿ’ ಎಂಬ ಪಾತ್ರದಲ್ಲಿ ಕಾಣಿಸಕೊಳ್ಳುತ್ತಿರುವ ಗೀತಾ, ‘ರವಿಕೆಯ ವಿಚಾರವನ್ನು ಇಟ್ಟುಕೊಂಡು, ಎಲ್ಲಿಯೂ ಅಸಹ್ಯ ಎನಿಸದಂತೆ ನಾಜೂಕಾಗಿ ಮಾಡಿರುವ ವಿಭಿನ್ನ ಚಿತ್ರವಿದು’ ಎಂದು ಹೇಳಿಕೊಂಡರು. ಈ ಚಿತ್ರಕ್ಕೆ ಕಥೆ ಬರೆದಿರುವ ಪಾವನಾ ಸಂತೋಷ್, ‘ಹೆಣ್ಣಿನ ಆಭರಣ, ಸೀರೆಗಳ ಬಗ್ಗೆ ಹಲವು ಹಾಡುಗಳು ಬಂದಿವೆ. ಈಗ ರವಿಕೆ ಬಗ್ಗೆಯೂ ಹಾಡು ಮಾಡಿದ್ದೇವೆ. ಪ್ರತಿಯೊಬ್ಬ ಹೆಣ್ಣು ಹಾಗೂ ಗಂಡಿಗೆ ಆಪ್ತವಾಗುವ ಸಿನಿಮಾ ಇದು’ ಎಂದರು.

ಗೀತಾ, ರಾಕೇಶ್ ಜತೆಗೆ ಪದ್ಮಜಾ ರಾವ್, ಸುಮನ್ ರಂಗನಾಥ್, ಸಂಪತ್ ಮೈತ್ರೇಯ, ಕೃಷ್ಣಮೂರ್ತಿ, ಪ್ರವೀಣ್ ಆಥರ್ವ, ರಘು, ಖುಷಿ ಚಿತ್ರದ ತಾರಾಗಣದಲ್ಲಿದ್ದಾರೆ. ಮುರಳಿ ಛಾಯಾಗ್ರಹಣ ಹಾಗೂ ರಘು ಸಂಕಲನ ಚಿತ್ರಕ್ಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net