ಜಯಂ ರವಿಗಿರುವ ಆ ಕೆಟ್ಟ ಅಭ್ಯಾಸದಿಂದಲೇ ಕೆನಿಶಾ ಆತನನ್ನು ಬಿಟ್ಟು ಹೋಗಿದ್ದು... ಸ್ಫೋಟಕ ಹೇಳಿಕೆ ನೀಡಿದ ಗಾಯಕಿ! Ravi Mohan

ಜಯಂ ರವಿಗಿರುವ ಆ ಕೆಟ್ಟ ಅಭ್ಯಾಸದಿಂದಲೇ ಕೆನಿಶಾ ಆತನನ್ನು ಬಿಟ್ಟು ಹೋಗಿದ್ದು... ಸ್ಫೋಟಕ ಹೇಳಿಕೆ ನೀಡಿದ ಗಾಯಕಿ! Ravi Mohan
ಜಯಂ ರವಿಗಿರುವ ಆ ಕೆಟ್ಟ ಅಭ್ಯಾಸದಿಂದಲೇ ಕೆನಿಶಾ ಆತನನ್ನು ಬಿಟ್ಟು ಹೋಗಿದ್ದು... ಸ್ಫೋಟಕ ಹೇಳಿಕೆ ನೀಡಿದ ಗಾಯಕಿ! Ravi Mohan
Published on

ಪ್ರಮುಖ ಮುಖ್ಯಾಂಶಗಳು

  • ನಟ ರವಿ ಮೋಹನ್​ ವಿರುದ್ಧ ಗಂಭೀರ ಆರೋಪ ಮಾಡಿದ ತಮಿಳುನಾಡಿನ ರೇಡಿಯೋ ಜಾಕಿ ಹಾಗೂ ಗಾಯಕಿ ಸುಚಿತ್ರಾ
  • ರವಿ ಮೋಹನ್ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನಿ ಎಂದು ಜಾಲತಾಣದಲ್ಲಿ ವಿಡಿಯೋ ಹಂಚಿಕೊಂಡ ಸುಚಿತ್ರಾ
  • ಪತ್ರಿಕಾಗೋಷ್ಠಿಯಲ್ಲಿ ರವಿ ಮೋಹನ್​ ಹೇಳಿದ ಕೆಲವು ಹೇಳಿಕೆಗಳು ಸಂಪೂರ್ಣ ಸುಳ್ಳು ಎಂದ ಕಾಲಿವುಡ್​ ಗಾಯಕಿ
  • ವ್ಯಸನ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಹೊರಬರಲು ರವಿಗೆ ಸೂಕ್ತ ಚಿಕಿತ್ಸೆ ಕೊಡಿಸಿ ಎಂದು ಸುಚಿತ್ರಾ
Ravi Mohan : ಒಂದು ಕಾಲದಲ್ಲಿ ಸೆಲೆಬ್ರಿಟಿಗಳ ಅಶ್ಲೀಲ ವಿಡಿಯೋ ಮತ್ತು ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವ ಮೂಲಕ ಕಾಲಿವುಡ್​ ಅಂಗಳದಲ್ಲಿ ತಲ್ಲಣ ಸೃಷ್ಟಿಸಿದ್ದ ತಮಿಳುನಾಡಿನ ರೇಡಿಯೋ ಜಾಕಿ ಹಾಗೂ ಗಾಯಕಿ ಸುಚಿತ್ರಾ ಕಾರ್ತಿಕ್, ನಟ ರವಿ ಮೋಹನ್​ ಅಲಿಯಾಸ್​ ಜಯಂ ರವಿ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದಾರೆ.
ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ವಿಡಿಯೋವೊಂದರಲ್ಲಿ, ರವಿ ಮೋಹನ್ ಮದ್ಯ ಮತ್ತು ಮಾದಕ ವಸ್ತುಗಳ ವ್ಯಸನಿಯಾಗಿರುವುದರಿಂದ ಅವರ ಆಪ್ತರು ಅವರಿಂದ ದೂರವಾಗುತ್ತಿದ್ದಾರೆ ಎಂದು ಸುಚಿತ್ರಾ ಸ್ಫೋಟಕ ಹೇಳಿಕೆಯನ್ನು ನೀಡಿದ್ದಾರೆ.
ಇತ್ತೀಚಿಗೆ ರವಿ ಮೋಹನ್​ ಅವರು ಸುದ್ದಿಗೋಷ್ಠಿ ನಡೆಸಿ, ತಮ್ಮ ಪತ್ನಿ ಆರತಿ ವಿರುದ್ಧ ವಾಗ್ದಾಳಿ ನಡೆಸಿದರು. ಈ ಬಗ್ಗೆ ಮಾತನಾಡಿರುವ ಸುಚಿತ್ರಾ, ಸುದ್ದಿಗೋಷ್ಠಿಯ ಸಮಯದಲ್ಲಿ ನಟ ರವಿ ಮೋಹನ್ ಅವರ ಮಾನಸಿಕ ಸ್ಥಿತಿಯಲ್ಲಿರಲಿಲ್ಲ ಎಂದು ಸುಚಿತ್ರಾ ವಾದಿಸಿದ್ದಾರೆ. ಅವರ ಪ್ರಕಾರ, ಪತ್ರಿಕಾಗೋಷ್ಠಿಯಲ್ಲಿ ಜಯಂ ರವಿ ವರ್ತಿಸಿದ ರೀತಿ ಹಾಗೂ ಅವರ ನಡವಳಿಕೆಯು ಮದ್ಯ ಮತ್ತು ಮಾದಕ ದ್ರವ್ಯಗಳ (ಡ್ರಗ್ಸ್) ಪ್ರಭಾವದಿಂದ ಕೂಡಿತ್ತು. ಆ ಸಂದರ್ಭದಲ್ಲಿ ಅವರು ನೀಡಿದ ಕೆಲವು ಹೇಳಿಕೆಗಳು ನಿಜವಾಗಿದ್ದರೂ ಸಹ, ಇನ್ನೂ ಕೆಲ ಹೇಳಿಕೆಗಳನ್ನು ಸಂಪೂರ್ಣ ಸುಳ್ಳು ಎಂದು ಸುಚಿತ್ರಾ ಹೇಳಿದ್ದಾರೆ.
ಪ್ರಸ್ತುತ ರವಿ ಮೋಹನ್ ಅವರ ಮೇಲೆ ಯಾರಿಗೆ ತುಂಬಾ ಕಾಳಜಿ ಇದೆಯೋ ಅವರು ಕೂಡಲೇ ವ್ಯಸನ ಮತ್ತು ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಹೊರಬರಲು ರವಿ ಮೋಹನ್​ ಅವರಿಗೆ ಸೂಕ್ತ ಚಿಕಿತ್ಸೆ ಕೊಡಿಸಬೇಕು. ರವಿ ಅವರು ಆರತಿ ಜೊತೆ ಇರಬೇಕೇ ಅಥವಾ ಕೆನಿಶಾ ಜೊತೆ ಇರಬೇಕೇ ಎಂಬ ವಿಷಯಗಳ ಬಗ್ಗೆ ಚರ್ಚಿಸುವ ಬದಲು, ಅವರ ಚೇತರಿಕೆಗೆ ಸಹಾಯ ಮಾಡುವುದರ ಕಡೆಗೆ ಎಲ್ಲರೂ ಗಮನ ಹರಿಸಬೇಕು ಎಂದು ಸುಚಿತ್ರಾ ಅಭಿಪ್ರಾಯಪಟ್ಟಿದ್ದಾರೆ.
ಮುಂದುವರಿದು ಮಾತನಾಡಿದ ಅವರು, ಒಳ್ಳೆಯ ಉದ್ದೇಶದಿಂದ ಸಹಾಯ ಮಾಡಲು ಮುಂದಾದ ಪ್ರತಿಯೊಬ್ಬರನ್ನೂ ರವಿ ಮೋಹನ್​ ಅವರು ಬ್ಲಾಕ್ ಮಾಡಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಅವರಿಗೆ ಯಾರಾದರೂ ಹೇಗೆ ತಾನೇ ಬೆಂಬಲ ನೀಡಲು ಸಾಧ್ಯ? ಅವರು ಸದ್ಯ ತಮ್ಮ ಸುತ್ತಲೂ ಮದ್ಯ ಮತ್ತು ಮಾದಕ ದ್ರವ್ಯ ವ್ಯಸನಿಗಳನ್ನು ಮಾತ್ರ ಇರಿಸಿಕೊಂಡಿದ್ದಾರೆ ಎಂದು ಸುಚಿತ್ರಾ ಆರೋಪಿಸಿದರು.
ಇನ್ನೂ ಒಂದು ಹೆಜ್ಜೆ ಮುಂದೆ ಹೋದ ಸುಚಿತ್ರಾ, ರವಿ ಮೋಹನ್ ಜೊತೆಗಿನ ಭಿನ್ನಾಭಿಪ್ರಾಯ ಮತ್ತು ಜಗಳದ ಬಳಿಕ ಅವರ ಗೆಳತಿ ಕೆನಿಶಾ ಫ್ರಾನ್ಸಿಸ್​ ಅವರನ್ನು ತೊರೆದು ಹೋಗಿದ್ದಾರೆ ಎಂದು ಸ್ಫೋಟಕ ಹೇಳಿಕೆ ನೀಡಿದರು. ರವಿ ಅವರು ತನ್ನ ತಪ್ಪುಗಳನ್ನು ಮುಚ್ಚಿಟ್ಟು ಬೇರೆಯವರ ಮೇಲೆ ಗೂಬೆ ಕೂರಿಸಲು ಪ್ರಯತ್ನಿಸುತ್ತಿದ್ದಾರೆ. ಸೋಷಿಯಲ್ ಮೀಡಿಯಾ ಯಾವಾಗಲೂ ಇಂತಹ ಕಂಟೆಂಟ್‌ಗಳಿಗಾಗಿ ಕಾಯುತ್ತಿರುತ್ತದೆ ಮತ್ತು ನೀವು ಅದನ್ನೇ ಅವರಿಗೆ ಉಣಬಡಿಸುತ್ತಿದ್ದೀರಿ, ಹೀಗಿರುವಾಗ ಜನರು ಕೇವಲ ಪಾಸಿಟಿವ್ ಆಗಿ ಪ್ರತಿಕ್ರಿಯಿಸಬೇಕೆಂದು ನೀವು ಹೇಗೆ ತಾನೇ ನಿರೀಕ್ಷಿಸುತ್ತೀರಿ? ಜಯಂ ರವಿ, ನೀವು ಒಮ್ಮೆ ಟೈಮ್ ಮೆಷಿನ್ ಹತ್ತಿ ಹಿಂದಕ್ಕೆ ಹೋಗಿ, ಮತ್ತೊಮ್ಮೆ ಅಯೋಧ್ಯೆಯ ಶ್ರೀರಾಮನಂತೆ ಬದಲಾಗಿ ಎಂದು ಸುಚಿತ್ರಾ ಅವರು ಲೇವಡಿ ಮಾಡಿದ್ದಾರೆ.

ಯಾರು ಈ ಸುಚಿತ್ರಾ?

017ರಲ್ಲಿ ಸುಚಿತ್ರಾ ಅವರ ಟ್ವಿಟರ್ ಪೇಜ್​ನಿಂದ ಕಾಲಿವುಡ್​ ಸೆಲೆಬ್ರಿಟಿಗಳ ಕೆಲವೊಂದು ಅಶ್ಲೀಲ ವಿಡಿಯೋ ಮತ್ತು ಫೋಟೋಗಳು ಹೊರಬಿದ್ದ ಬಳಿಕ ಭಾರೀ ವಿವಾದವೇ ಸೃಷ್ಟಿಯಾಗಿತ್ತು. ಇದನ್ನು ಸುಚಿ ಲೀಕ್ಸ್ ಪ್ರಕರಣ ಎಂದೇ ಕರೆಯಲಾಗಿದೆ. ಈ ಪ್ರಕರಣ ಭಾರಿ ಸದ್ದು ಮಾಡುತ್ತಿದ್ದಂತೆ ನನ್ನ ಟ್ವಿಟರ್​ ಖಾತೆ ಹ್ಯಾಕ್​ ಆಗಿತ್ತು ಎಂದು ಸುಚಿತ್ರಾ ಸ್ಪಷ್ಟನೆ ನೀಡಿದ್ದರು. ಆದರೆ, ಅದು ಉದ್ದೇಶಪೂರ್ವಕವಾಗಿಯೇ ಲೀಕ್​ ಮಾಡಿದ್ದಾರೆ ಎಂಬ ಮಾತುಗಳು ಸಹ ಕೇಳಿಬಂದಿದ್ದವು. ಕಾಲಿವುಡ್​ ಸೂಪರ್​ ಸ್ಟಾರ್​ ಧನುಷ್​ ಅವರ ಸಹಾಯಕರು ನನ್ನನ್ನು ಕೆಟ್ಟದಾಗಿ ನಡೆಸಿಕೊಂಡರು ಎಂದು ಸುಚಿತ್ರಾ ಆರೋಪಿದ್ದರು. ಅಲ್ಲದೆ, ಧನುಷ್​ ಅವರು ನನಗೆ ಡ್ರಗ್ಸ್​ ನೀಡಿ, ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ಗಂಭೀರ ಆರೋಪ ಮಾಡುವ ಮೂಲಕ ಕಾಲಿವುಡ್​ ಇಂಡಸ್ಟ್ರಿಯಲ್ಲಿನ ಕಾಸ್ಟಿಂಗ್​ ಕೌಚ್​ ಚರ್ಚೆಯನ್ನು ಮುನ್ನೆಲೆಗೆ ತಂದಿದ್ದರು. ಟ್ವಿಟರ್​ ಖಾತೆಯಲ್ಲಿ ಧನುಷ್, ಮ್ಯೂಸಿಕ್​ ಡೈರೆಕ್ಟರ್​ ಅನಿರುದ್ಧ್ ಮತ್ತು ನಟಿಯರಾದ ಆಂಡ್ರಿಯಾ ಜೆರೆಮಿಯಾ, ತ್ರಿಷಾ, ಅಮಲಾ ಪೌಲ್​ ಹಾಗೂ ಸಂಚಿತಾ ಶೆಟ್ಟಿ ಅವರ ಕೆಲ ಫೋಟೋಗಳು ಮತ್ತು ವಿಡಿಯೋಗಳು ಜಾಗತಿಕ ಗಮನವನ್ನು ಸೆಳೆದವು. ಈ ಪ್ರಕರಣ ಕಾಲಿವುಡ್​ನಲ್ಲಿ ಅಲ್ಲೋಲ ಕಲ್ಲೋಲವನ್ನೇ ಸೃಷ್ಟಿ ಮಾಡಿ, ಕೊನೆಗೆ ತಣ್ಣಗಾಯಿತು, (ಏಜೆನ್ಸೀಸ್​).
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net