ಅಮದಹಾಗೆ, ಪರಸ್ಪರ ಪ್ರೀತಿಸಿ ಮದುವೆಯಾಗಿದ್ದ ನಟ ರವಿ ಮೋಹನ್ ಹಾಗೂ ಆರತಿ, ಕಳೆದ ಕೆಲವು ಸಮಯದಿಂದ ದೂರವಾಗಿದ್ದಾರೆ. ಈ ನಡುವೆ ನಟ ರವಿ ಮೋಹನ್, ಗಾಯಕಿ ಕೆನಿಶಾ ಫ್ರಾನ್ಸಿಸ್ ಅವರೊಂದಿಗೆ ಪ್ರೀತಿಯಲ್ಲಿದ್ದಾರೆ ಎಂಬ ವದಂತಿಗಳು ಹರಡಿದವು. ಆದರೆ, ಇತ್ತೀಚೆಗಷ್ಟೇ ಕೆನಿಶಾ ಅವರು ರವಿ ಮೋಹನ್ ಅವರೊಂದಿಗಿನ ತಮ್ಮ ಸ್ನೇಹವನ್ನು ಕೊನೆಗೊಳಿಸುತ್ತಿರುವುದಾಗಿ ಸುಳಿವು ನೀಡಿ ಹೊರಬಂದ ಬೆನ್ನಲ್ಲೇ, ಸುದ್ದಿಗೋಷ್ಠಿ ನಡೆಸಿದ ರವಿ ಮೋಹನ್ ತೀವ್ರ ಭಾವುಕರಾಗಿ ಕಣ್ಣೀರು ಹಾಕಿದರು. ಅಲ್ಲದೆ, ತಮಗೆ ವಿಚ್ಛೇದನ ಸಿಗುವವರೆಗೂ ತಮ್ಮ ಯಾವುದೇ ಸಿನಿಮಾಗಳನ್ನು ಬಿಡುಗಡೆ ಮಾಡುವುದಿಲ್ಲ ಎಂದು ಘೋಷಿಸಿದ್ದಾರೆ. ಮೊದಲು ನನ್ನ ವೈಯಕ್ತಿಕ ಜೀವನದ ಸಮಸ್ಯೆಗಳನ್ನು ಬಗೆಹರಿಸಿ, ಕಳೆದುಹೋದ ನನ್ನ ಹೆಸರನ್ನು ಮರಳಿ ಪಡೆಯುತ್ತೇನೆ, ಆ ನಂತರವಷ್ಟೇ ಮತ್ತೆ ನಟನೆಗೆ ಮರಳುತ್ತೇನೆ ಎಂದು ಕಣ್ಣೀರಿಡುತ್ತಾ ಭಾವುಕವಾಗಿ ನುಡಿದಿದ್ದಾರೆ, (ಏಜೆನ್ಸೀಸ್).