ಪಾತ್ರಕ್ಕಾಗಿ ಯಾವ ಹೀರೋ ಜತೆಗೂ ಮಲಗಿಲ್ಲ: ರವೀನಾ ಟಂಡನ್​

Raveena Tandon - Final
Published on

ಸುಶಾಂತ್​ ಸಾವಿನ ನಂತರ ರವೀನಾ ಟಂಡನ್​, ಚಿತ್ರರಂಗದ ರೀತಿ-ನೀತಿಗಳ ಬಗ್ಗೆ ಸಾಕಷ್ಟು ಮಾತನಾಡಿದ್ದಾರೆ. ಇಲ್ಲಿಯ ಸ್ಟ್ರಗಲ್​ಗಳು ಹೇಗಿರುತ್ತವೆ ಎಂದು ಸೋಷಿಯಲ್​ ಮೀಡಿಯಾ ಮೂಲಕ ಮುಕ್ತವಾಗಿ ಹಂಚಿಕೊಂಡಿದ್ದಾರೆ.

ಈ ಬಗ್ಗೆ ಅವರು ಇನ್ನಷ್ಟು ಮಾತನಾಡಿದ್ದಾರೆ. ಸಂದರ್ಶನವೊಂದರಲ್ಲಿ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿರುವ ಅವರು, ಎಷ್ಟೇ ಕಷ್ಟವಾದರೂ ಮತ್ತು ಎಷ್ಟೇ ಹೋರಾಟ ಮಾಡಬೇಕಾಗಿ ಬಂದರೂ, ಪಾತ್ರಕ್ಕಾಗಿ ಯಾವ ಹೀರೋ ಜತೆಗೂ ಮಲಗಿಲ್ಲ ಎಂದು ಹೇಳಿಕೊಂಡಿದ್ದಾರೆ.

'ನಮ್ಮ ತಂದೆ ನಿರ್ದೇಶಕರಾದರೂ, ನಾನು ಚಿತ್ರರಂಗಕ್ಕೆ ಬಂದಾಗ ಯಾವ ಗಾಡ್​ಫಾದರ್​ಗಳೂ ಇರಲಿಲ್ಲ. ನಾನು ಯಾವುದೇ ಕ್ಯಾಂಪ್​ನ ಭಾಗವಾಗಿರಲಿಲ್ಲ ಮತ್ತು ಯಾವ ಹೀರೋ ಸಹ ನನ್ನನ್ನು ಪ್ರಮೋಟ್​ ಮಾಡಲಿಲ್ಲ. ನನಗೆ ಯಾವ ಹೀರೋ ಜತೆಗೂ ಅಫೇರ್​ಗಳಿರಲಿಲ್ಲ ಮತ್ತು ನಾನು ಪಾತ್ರಕ್ಕಾಗಿ ಯಾವ ಹೀರೋ ಜತೆಗೂ ಮಲಗಲಿಲ್ಲ. ಅದೇ ಕಾರಣಕ್ಕೆ ನಾನು ಸಿಕ್ಕಾಪಟ್ಟೆ ಅರೋಗಂಟ್​ ಎಂದು ಸುದ್ದಿ ಹಬ್ಬಿಸಲಾಗಿತ್ತು. ನಾನು ಹೀರೋಗಳ ತಾಳಕ್ಕೆ ಕುಣಿಯದೇ ಇದ್ದುದರಿಂದ ತಮ್ಮ ವಿರುದ್ಧ ಅಪಪ್ರಚಾರ ಮಾಡಲಾಗಿತ್ತು' ಎಂದು ಹೇಳಿಕೊಂಡಿದ್ದಾರೆ.

ತಮ್ಮ ಬಗ್ಗೆ ಕೆಲವು ಮಹಿಳಾ ಪತ್ರಕರ್ತರೇ ಅಪಪ್ರಚಾರ ಮಾಡಿದರು ಎಂದು ಹೇಳಿಕೊಂಡಿರುವ ರವೀನಾ, 'ಬಹಳಷ್ಟು ಮಹಿಳಾ ಪತ್ರಕರ್ತರು, ಹೀರೋಗಳ ಚಮಚಾಗಳಾಗಿ ಕೆಲಸ ಮಾಡಿದ್ದಾರೆ. ನನ್ನ ಬಗ್ಗೆ ಯಾವಾಗಲೂ ಒಂದಲ್ಲಾ ಒಂದು ಲೇಖನ ಬರೆಯುವುದರ ಮೂಲಕ ಅಪಪ್ರಚಾರ ನಡೆಸುತ್ತಲೇ ಇದ್ದರು. ಒಬ್ಬ ಮಹಿಳೆ ಇನ್ನೊಬ್ಬ ಮಹಿಳೆಗೆ ಈ ರೀತಿ ಮಾಡುವುದಕ್ಕೆ ಸಾಧ್ಯವಾ ಎಮದು ನನಗೆ ಯಾವಾಗಲೂ ಅನಿಸುತಿತ್ತು. ಈಗ ಅವರೆಲ್ಲಾ ಮಹಿಳೆಯರು ಒಗ್ಗಟ್ಟಾಗಿರಬೇಕು ಅಂತೆಲ್ಲಾ ಮಾತನಾಡಿದರೆ, ನನಗೆ ನಿಜಕ್ಕೂ ನಗು ಬರುತ್ತದೆ' ಎಂದು ರವೀನಾ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net