ಬೆಂಗಳೂರು ರೇವ್​ ಪಾರ್ಟಿ ಕೇಸ್​: ದಿನಕ್ಕೊಂದು ಹೈಡ್ರಾಮ ಮಾಡುತ್ತಿರುವ ನಟಿ ಹೇಮಾಗೆ ಬಿಗ್​ ಶಾಕ್​!

Actress Hema
Published on

ಹೈದರಾಬಾದ್​: ಸದ್ಯ ಬೆಂಗಳೂರು ರೇವ್ ಪಾರ್ಟಿ ಪ್ರಕರಣ ತೆಲುಗು ರಾಜ್ಯಗಳಲ್ಲಿ ಸಖತ್​ ಸದ್ದು ಮಾಡುತ್ತಿದೆ. ಈ ರೇವ್ ಪಾರ್ಟಿಯಲ್ಲಿ ಟಾಲಿವುಡ್‌ನ ಅನೇಕ ಸೆಲೆಬ್ರಿಟಿಗಳು ಭಾಗವಹಿಸಿದ್ದರು ಎಂದು ವರದಿಯಾಗಿದೆ. ಇವರಲ್ಲಿ ಖ್ಯಾತ ನಟಿ ಹೇಮಾ ಕೂಡ ಇದ್ದಾರೆ ಎಂದು ಬೆಂಗಳೂರು ಪೊಲೀಸರು ತಿಳಿಸಿದ್ದಾರೆ. ಆದರೆ, ನಾನು ರೇವ್ ಪಾರ್ಟಿಗೆ ಹೋಗಿಲ್ಲ, ಫಾರ್ಮ್ ಹೌಸ್​ನಲ್ಲಿದ್ದೇನೆ ಎಂದು ಹೇಮಾ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇದಾದ ನಂತರ ಬಿರಿಯಾನಿ ಅಡುಗೆ ಮಾಡುತ್ತಿರುವ ಮತ್ತೊಂದು ವಿಡಿಯೋ ಬಿಡುಗಡೆಯಾಗಿದೆ.

ಈ ವಿಡಿಯೋಗಳಿಗೆ ಪ್ರತಿಕ್ರಿಯಿಸಿರುವ ಬೆಂಗಳೂರು ಪೊಲೀಸರು, ಇದು ಪೊಲೀಸರು ಹಾಗೂ ಮಾಧ್ಯಮದವರನ್ನು ದಾರಿ ತಪ್ಪಿಸಲು ಬಿಡುಗಡೆ ಮಾಡಿರುವ ವಿಡಿಯೋ ಎಂದಿದ್ದಾರೆ. ಈ ಬಗ್ಗೆ ತನಿಖೆ ನಡೆಸುತ್ತಿದ್ದೇವೆ ಎಂದು ಬೆಂಗಳೂರು ಕಮಿಷನರ್​ ಬಿ. ದಯಾನಂದ್​ ಹೇಳಿದ್ದಾರೆ. ಇದರ ನಡುವೆ ಟಾಲಿವುಡ್ ಖ್ಯಾತ ನಟಿ ಕರಾಟೆ ಕಲ್ಯಾಣಿ, ನಟಿ ಹೇಮಾಗೆ ಬಿಗ್​ ಶಾಕ್​ ನೀಡಿದ್ದಾರೆ.

ಹೇಮಾ ಮಾಡಿದ ತಪ್ಪಿಗೆ ಶಿಕ್ಷೆಯಾಗಬೇಕು ಎಂದು ಕರಾಟೆ ಕಲ್ಯಾಣಿ ಹೇಳಿದ್ದಾರೆ. ತಮ್ಮ ಕಲಾವಿದರ ಸಂಘದ ಜಂಟಿ ಕಾರ್ಯದರ್ಶಿ ಮಂಚು ವಿಷ್ಣು ಅವರೊಂದಿಗೆ ಮಾತನಾಡಿ, ಹೇಮಾ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ. ಹೇಮಾ ಅವರನ್ನು ಇಂಡಸ್ಟ್ರಿಯಲ್ಲಿ ಅಮಾನತು ಮಾಡಲಾಗುವುದು. ಡ್ರಗ್ಸ್ ಪ್ರಕರಣಗಳಲ್ಲಿ ಸಿಕ್ಕಿಬಿದ್ದವರನ್ನು ಅಮಾನತು ಮಾಡಲೇಬೇಕು. ಹೇಮಾ ಅಮಾನತುಗೊಳ್ಳುವ ಸಾಧ್ಯತೆಗಳು ಖಂಡಿತಾ ಇವೆ ಎನ್ನುವ ಮೂಲಕ ಹೇಮಾಗೆ ಶಾಕ್​ ನೀಡಿದ್ದಾರೆ.

ಹೇಮಾ ಅಂತಹವರಿಗೆ ಕ್ಷಮೆ ಇಲ್ಲ. ರೇವ್ ಪಾರ್ಟಿಯಲ್ಲಿ ಬಳಸಿರುವ ಡ್ರಗ್ಸ್ ಮಾದರಿಗಳು ಪೊಲೀಸರಿಗೆ ಸಿಕ್ಕರೆ ಹೇಮಾರನ್ನು ಬಂಧಿಸಲಾಗುತ್ತದೆ. ಹಾಗಾಗಿ ಅಮಾನತುಗೊಳ್ಳುವ ಸಾಧ್ಯತೆ ಹೆಚ್ಚಿದೆ ಎಂದರು. ಡ್ರಗ್ಸ್ ಸ್ಯಾಂಪಲ್ ಸಿಗದಿದ್ದರೂ ಇಂತಹ ರೇವ್ ಪಾರ್ಟಿಯಲ್ಲಿ ಭಾಗವಹಿಸಿದ್ದಕ್ಕಾಗಿ ಆಕೆಯನ್ನು ಅಮಾನತುಗೊಳಿಸಲಾಗುತ್ತದೆ ಎಂದು ತಿಳಿಸಿದರು.

ತಾಳೆ ಮರದ ಕೆಳಗೆ ಕುಳಿತು ಹಾಲು ಕುಡಿದರೆ ಯಾರೂ ನಂಬುವುದಿಲ್ಲ ಎಂದು ಕಲ್ಯಾಣಿ ಹೇಳಿದರು. ಮೋಹನ್ ಬಾಬು, ಬಾಲಕೃಷ್ಣ, ಮಂಚು ವಿಷ್ಣು, ಜಯಸುಧಾ ಅವರಂತಹ ದೊಡ್ಡವರು ಸಮಿತಿ ರಚಿಸಿ ಚರ್ಚಿಸಿ ಕ್ರಮ ಕೈಗೊಳ್ಳುತ್ತೇವೆ ಎಂದರು. ಈ ವಿಚಾರದಲ್ಲಿ ಹೇಮಾ ಶಿಕ್ಷೆಗೆ ಅರ್ಹಳು ಎಂದು ಹೇಳಿದರು. ಮೊದಲು ಮಾಡಿದ ತಪ್ಪನ್ನು ಅರಿತು ಅದನ್ನು ಮುಚ್ಚಿಡಲು ಮಾಧ್ಯಮಗಳು ಮತ್ತು ಪೊಲೀಸರನ್ನು ನಿರ್ಲಕ್ಷಿಸದಿದ್ದರೆ ಒಳ್ಳೆಯದು ಎಂದು ಸಲಹೆ ನೀಡಿದರು. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net