ನೇರವಾಗಿ ಒಟಿಟಿಯಲ್ಲಿ ‘ರತ್ನನ್ ಪ್ರಪಂಚ’

Rathnan Prapancha
Published on

ಇಲ್ಲಿಯವರೆಗೂ ಕನ್ನಡದಲ್ಲಿ ಸ್ಟಾರ್ ಸಿನಿಮಾಗಳು ನೇರವಾಗಿ ಒಟಿಟಿಯಲ್ಲಿ ತೆರೆಕಂಡಿರಲಿಲ್ಲ. ಇದೀಗ ಆ ಹಸಿವನ್ನು ಡಾಲಿ ಧನಂಜಯ ನಟಿಸಿರುವ ‘ರತ್ನನ್ ಪ್ರಪಂಚ’ ನೀಗಿಸಿದೆ. ಇಂದು (ಅ. 22) ಅಮೆಜಾನ್ ಪ್ರೖೆಂನಲ್ಲಿ ಚಿತ್ರ ಬಿಡುಗಡೆ ಆಗಿದೆ.

ರೋಹಿತ್ ಪದಕಿ ನಿರ್ದೇಶನದಲ್ಲಿ ಮೂಡಿಬಂದಿರುವ ಬಹುತಾರಾಗಣದ ಈ ಚಿತ್ರವನ್ನು ಕಾರ್ತಿಕ್ ಗೌಡ ಮತ್ತು ಯೋಗಿ. ಜಿ. ರಾಜ್, ಕೆಆರ್​ಜಿ ಸ್ಟುಡಿಯೋಸ್​ನಲ್ಲಿ ನಿರ್ಮಾಣ ಮಾಡಿದ್ದಾರೆ. ಈ ಚಿತ್ರದಲ್ಲಿ ಧನಂಜಯ ಜತೆಗೆ ರೆಬಾ ಮೋನಿಕಾ ಜಾನ್, ರವಿಶಂಕರ್ ಗೌಡ, ಪ್ರಮೋದ್, ಅನು ಪ್ರಭಾಕರ್, ಶ್ರುತಿ, ಉಮಾಶ್ರೀ ಮುಂತಾದವರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net