ರಾತ್ರಿಯೆಲ್ಲಾ ಕಣ್ಣೀರು ಹಾಕಿದ್ದೆ!; ಟ್ರೋಲ್​ಗಳ ಬಗ್ಗೆ ಮೌನ ಮುರಿದ ರಶ್ಮಿಕಾ

Rashmika
Published on

ಸ್ಯಾಂಡಲ್​ವುಡ್ ಸುತ್ತಿ, ಟಾಲಿವುಡ್​ನಲ್ಲಿ ಗುಡುಗಿ, ಸದ್ಯ ಬಾಲಿವುಡ್​ನಲ್ಲಿ ಮಿಂಚುತ್ತಿರುವ ಕನ್ನಡತಿ ರಶ್ಮಿಕಾ ಮಂದಣ್ಣ. ಹೀಗೆ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಹೆಸರು ಮಾಡುತ್ತಿರುವ ನಟಿ ಹಿಂದೊಮ್ಮೆ ಟ್ರೋಲ್​ಗಳಿಂದ ಕುಗ್ಗಿದ್ದರಂತೆ. ರಾತ್ರಿಯೆಲ್ಲ ನಿದ್ರೆಯಿಲ್ಲದೆ ಕುಳಿತು ಕಣ್ಣೀರು ಹಾಕಿದ್ದರಂತೆ. ಅಂದಹಾಗೆ ಅದಕ್ಕೆ ಕಾರಣ ವಿಜಯ್ ದೇವರಕೊಂಡ ಜತೆಗೆ ನಟಿಸಿದ್ದ ‘ಡಿಯರ್ ಕಾಮ್ರೇಡ್’ ಚಿತ್ರದ ಬೋಲ್ಡ್ ಸೀನ್​ಗಳು.

ಇತ್ತೀಚೆಗಷ್ಟೇ ಈ ಕುರಿತು ಹೇಳಿಕೊಂಡಿರುವ ಅವರು, ‘ಆಗ ಹಲವು ನೋವಿನ ಸಂಗತಿಗಳು ನಡೆದಿದ್ದವು. ನಾನು ಒಬ್ಬಂಟಿ ಅಂತನಿಸುತ್ತಿತ್ತು. ನನ್ನವರು ಯಾರೂ ಇಲ್ಲ, ಎಲ್ಲರೂ ನನ್ನಿಂದ ದೂರವಾಗಿದ್ದಾರೆ, ಕೂಗಿ ಕರೆದರೂ ನನ್ನ ಬಳಿ ಬರುತ್ತಿಲ್ಲ ಎಂಬ ಭಾವನೆ ಉಂಟಾಗಿತ್ತು. ಯಾಕೆ ಅಂತ ಗೊತ್ತಿಲ್ಲ. ಆದರೆ, ಪದೇಪದೆ ಒಂಟಿತನದ ಕನಸುಗಳೇ ಬರುತ್ತಿದ್ದವು. ಆಗ ಎದ್ದು ಮತ್ತೆ ನಿದ್ರೆ ಬರುವವರೆಗೂ ಅಳುತ್ತಿದ್ದೆ ಅಥವಾ ರಾತ್ರಿಯೆಲ್ಲಾ ಅಳುತ್ತಾ ನಿದ್ರೆಯೇ ಮಾಡುತ್ತಿರಲಿಲ್ಲ’ ಎಂದಿದ್ದಾರೆ. ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ ರಶ್ಮಿಕಾ ಮಂದಣ್ಣ ಮೊದಲ ಬಾಲಿವುಡ್ ಚಿತ್ರ ‘ಗುಡ್​ಬೈ’ ಶುಕ್ರವಾರವಷ್ಟೇ ಬಿಡುಗಡೆಯಾಗಿದೆ.

ಉಳಿದಂತೆ ತೆಲುಗಿನ ‘ಪುಷ್ಪ 2 : ದಿ ರೂಲ್’, ತಮಿಳಿನಲ್ಲಿ ವಿಜಯ್ ಜತೆ ‘ವಾರಿಸು’ ಚಿತ್ರಗಳಲ್ಲೂ ರಶ್ಮಿಕಾ ನಟಿಸುತ್ತಿದ್ದಾರೆ. ಹಾಗೆಯೇ ಅವರು ಸಿದ್ಧಾರ್ಥ್ ಮಲ್ಹೋತ್ರಗೆ ನಾಯಕಿಯಾಗಿರುವ ಮತ್ತೊಂದು ಬಾಲಿವುಡ್ ಸಿನಿಮಾ ‘ಮಿಷನ್ ಮಜ್ನೂ’ ತೆರೆಗೆ ಬರಲು ರೆಡಿಯಾಗಿದೆ. ಇನ್ನು ರಣಬೀರ್ ಕಪೂರ್ ಜತೆ ‘ಅನಿಮಲ್’ ಚಿತ್ರದಲ್ಲೂ ಅವರು ನಟಿಸುತ್ತಿದ್ದಾರೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net