ಒಡೆಯರ್ ಎಕ್ಸ್​​ಪ್ರೆಸ್​ ಆಗಿ ಬದಲಾದ ಟಿಪ್ಪು ಎಕ್ಸ್​ಪ್ರೆಸ್​: ರಾಜ್ಯದ 2 ರೈಲುಗಳಿಗೆ ಹೊಸ ಹೆಸರು; ವಿವರ ಇಲ್ಲಿದೆ..

Train
Published on

ಬೆಂಗಳೂರು: ಟಿಪ್ಪು ಎಕ್ಸ್​ಪ್ರೆಸ್​ ಇನ್ನಿಲ್ಲ. ಏಕೆಂದರೆ ಮೈಸೂರು-ಬೆಂಗಳೂರು ಟಿಪ್ಪು ಎಕ್ಸ್​ಪ್ರೆಸ್​ಗೆ ಹೊಸ ನಾಮಕರಣವಾಗಿದ್ದು, ಅಧಿಕೃತ ಆದೇಶವೂ ಹೊರಬಿದ್ದಿದೆ. ರಾಜ್ಯದ ಎರಡು ರೈಲುಗಳ ಹೆಸರನ್ನ ಬದಲಾಯಿಸಲಾಗಿದೆ.

ಮೈಸೂರು-ಬೆಂಗಳೂರು ಟಿಪ್ಪು ಎಕ್ಸ್​ಪ್ರೆಸ್​ ರೈಲಿಗೆ ಹೊಸದಾಗಿ ಒಡೆಯರ್ ಎಕ್ಸ್​ಪ್ರೆಸ್ ಎಂದು ಹೆಸರಿಡಲಾಗಿದೆ. ಮೈಸೂರು-ತಾಳಗುಪ್ಪ ಎಕ್ಸ್​ಪ್ರೆಸ್​ ರೈಲಿಗೆ ಕುವೆಂಪು ಎಕ್ಸ್​ಪ್ರೆಸ್​ ಎಂದು ಮರು ನಾಮಕರಣ ಮಾಡಲಾಗಿದೆ. ಈ ಕುರಿತು ರೈಲ್ವೆ ಇಲಾಖೆ ಇಂದು ಆದೇಶ ಹೊರಡಿಸಿದೆ.

ಟಿಪ್ಪು ಎಕ್ಸ್​ಪ್ರೆಸ್​ ಹೆಸರು ಬದಲಾವಣೆಗೆ ಬಹಳಷ್ಟು ಜನರು ಬೇಡಿಕೆ ಇರಿಸಿದ್ದು, ಆ ಹೆಸರನ್ನು ಬದಲಾಯಿಸುವುದಾಗಿ ಸಂಸದ ಪ್ರತಾಪ್ ಸಿಂಹ ಹೇಳಿದ್ದರು. ಹೆಸರನ್ನು ಬದಲಿಸಿದ ಹಿನ್ನೆಲೆಯಲ್ಲಿ ರೈಲ್ವೆ ಸಚಿವ ಅಶ್ವಿನ್​ ವೈಷ್ಣವ್ ಅವರಿಗೆ ಹಾಗೂ ಈ ಪ್ರಯತ್ನಕ್ಕೆ ಬೆನ್ನೆಲುಬಾಗಿ ನಿಂತ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಿಗೆ ಧನ್ಯವಾದ ಎಂದು ಪ್ರತಾಪ್ ಸಿಂಹ ಸೋಷಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net