

ನಟಿ ರಶ್ಮಿಕಾ ಮಂದಣ್ಣ ಇದೀಗ ಮುಟ್ಟಿದ್ದೆಲ್ಲ ಚಿನ್ನ. ನಟಿಸಿದ ಸಿನಿಮಾಗಳೆಲ್ಲ ಬಾಕ್ಸ್ಆಫೀಸ್ನಲ್ಲಿ ಧೂಳೆಬ್ಬಿಸುತ್ತಿವೆ. ಅದಕ್ಕೆ ಇತ್ತೀಚಿನ ಉದಾಹರಣೆ ‘ಪುಷ್ಪ’. ಅಲ್ಲು ಅರ್ಜುನ್ ಜತೆಗಿನ ‘ಪುಷ್ಪ’ ಗೆಲುವು ರಶ್ಮಿಕಾಗೆ ಮತ್ತಷು, ಮಗದಷ್ಟು ಮೈಲೇಜ್ ತಂದುಕೊಟ್ಟಿದೆ. ಸಿನಿಮಾ ಅವಕಾಶಗಳು ಒಂದೆಡೆ ಹೆಚ್ಚಾದರೆ, ಅವರ ಸಂಭಾವನೆಯಲ್ಲಿಯೂ ಏರಿಕೆ ಕಂಡಿದೆ. ಅವರ ಕಾಲ್ಶೀಟ್ ಪಡೆಯಲು ನಿರ್ವಪಕರು ಅಕ್ಷರಶಃ ಕ್ಯೂನಲ್ಲಿದ್ದಾರೆ. ಹೀಗಿರುವಾಗಲೇ, ಟಾಲಿವುಡ್ನ ಸ್ಟಾರ್ ನಟ ರಾಮ್ ಚರಣ್ ತೇಜ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗಿದ್ದಾರಂತೆ ರಶ್ಮಿಕಾ.
ಹೀಗೊಂದು ಸುದ್ದಿ ಸದ್ಯ ತೆಲುಗು ನಾಡಿನಲ್ಲಿ ಸದ್ದು ಮಾಡುತ್ತಿದೆ. ‘ಜೆರ್ಸಿ’ ಸಿನಿಮಾ ಖ್ಯಾತಿಯ ಗೌತಮ್ ತಿನ್ನನೂರಿ, ರಾಮ್ ಚರಣ್ಗೆ ಆ್ಯಕ್ಷನ್ ಕಟ್ ಹೇಳುತ್ತಿರುವ ಸುದ್ದಿ ಹೊಸದೇನಲ್ಲ. ಕಳೆದ ದಸರಾ ಹಬ್ಬದಂದೇ ಈ ಚಿತ್ರದ ಅಧಿಕೃತ ಘೋಷಣೆ ಆಗಿತ್ತು. ಆದರೆ, ಯಾವಾಗ ಶುರು ಎಂಬುದಕ್ಕೆ ಉತ್ತರ ಸಿಕ್ಕಿರಲಿಲ್ಲ. ಇದೀಗ ತೆರೆಮರೆಯಲ್ಲಿ ಸಿನಿಮಾ ಕೆಲಸಗಳಿಗೆ ಚಿತ್ರತಂಡ ಚಾಲನೆ ನೀಡಿದೆ. ಮೊದಲಾರ್ಥವಾಗಿ ನಾಯಕಿ ಆಯ್ಕೆ ವಿಚಾರದಲ್ಲಿ ರಶ್ಮಿಕಾಗೆ ತಂಡ ಮಣೆ ಹಾಕಿದೆಯಂತೆ. ಕಥೆ ಕೇಳಿ ಇಷ್ಟಪಟ್ಟಿರುವ ರಶ್ಮಿಕಾ ಇನ್ನಷ್ಟೇ ಹಸಿರು ನಿಶಾನೆ ನೀಡಬೇಕಿದೆ.
ರಶ್ಮಿಕಾಗೂ ಮೊದಲು ರಾಮ್ರಣ್ಗೆ ಜೋಡಿಯಾಗಿ ದಿಶಾ ಪಠಾಣಿ ಅವರನ್ನು ಚಿತ್ರತಂಡ ಸಂರ್ಪಸಿತ್ತು. ಆದರೆ, ಬೇರೆಬೇರೆ ಸಿನಿಮಾಗಳಲ್ಲಿ ದಿಶಾ ಬಿಜಿಯಿರುವ ಹಿನ್ನೆಲೆಯಲ್ಲಿ ಪ್ರಾಜೆಕ್ಟ್ನಿಂದ ಹಿಂದೆ ಸರಿದರು. ಎಲ್ಲ ಅಂದುಕೊಂಡಂತೆ ರಶ್ಮಿಕಾ ನಟಿಸುವುದು ಅಧಿಕೃತವಾದರೆ, ರಾಮ್ರಣ್ ಜತೆಗೆ ಮೊದಲ ಸಲ ತೆರೆಹಂಚಿಕೊಂಡಂತಾಗಲಿದೆ. ಯುವಿ ಕ್ರಿಯೇಷನ್ಸ್ ಬ್ಯಾನರ್ನಲ್ಲಿ ಈ ಸಿನಿಮಾ ನಿರ್ವಣವಾಗಿಲಿದೆ.