

ನಟಿ ರಶ್ಮಿಕಾ ಮಂದಣ್ಣ ಸದ್ಯ ಲಾಕ್ಡೌನ್ನಲ್ಲಿ ಬಂಧಿಯಾಗಿದ್ದರೂ, ಸಾಮಾಜಿಕ ಜಾಲತಾಣಗಳ ಮೂಲಕ ಅಭಿಮಾನಿಗಳ ಜತೆ ಸಂಪರ್ಕದಲ್ಲಿದ್ದಾರೆ. ಮತ್ತೊಂದು, ಮಗದೊಂದು ಪೋಸ್ಟ್ ಹಾಕುತ್ತ ಕರೊನಾ ದಿನಗಳನ್ನು ಕಳೆಯುತ್ತಿದ್ದಾರೆ. ಇಂಥ ಹೊತ್ತಲ್ಲಿ ತಮಿಳು ನಟನ ಬಗ್ಗೆ ಮಾತನಾಡಿದ್ದಾರೆ. ಅಷ್ಟೇ ಅಲ್ಲ ಅವರ ಜನ್ಮ ದಿನಕ್ಕೆ ಶುಭಾಶಯವನ್ನೂ ಕೋರಿದ್ದಾರೆ.
ಹೌದು, ಗುರುವಾರ ಕಾಲಿವುಡ್ ನಟ ಅಜಿತ್ ಕುಮಾರ್ ಹುಟ್ಟುಹಬ್ಬ. ಹಾಗಾಗಿ ಶುಕ್ರವಾರ ಟ್ವಿಟರ್ನಲ್ಲಿ ಅಜಿತ್ಗೆ ವಿಷ್ ಮಾಡಿದ್ದಾರೆ. ಅವರ ಆ ಶುಭಾಶಯ ಸಹ ಅಷ್ಟೇ ಮಜವಾಗಿದ್ದು, ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
‘ತಲಾ ಅಜಿತ್ ಸರ್, ನಾನು ಈವರೆಗೂ ನಿಮ್ಮನ್ನ ವೈಯಕ್ತಿಕವಾಗಿ ಭೇಟಿ ಮಾಡಿಲ್ಲ. ಆದರೆ, ಲೆಕ್ಕವಿಲ್ಲದಷ್ಟು ಸಲ ನಿಮ್ಮ ಅಭಿಮಾನಿಗಳು ನಿಮ್ಮ ಹೆಸರಿನೊಡನೆ ನನ್ನನ್ನು ಸೇರಿಸಿಕೊಂಡು ಟ್ವೀಟ್ ಮಾಡಿದ್ದಾರೆ. ಹಾಗಾಗಿ ನಿಮ್ಮನ್ನು ತುಂಬ ಸಲ ಭೇಟಿಯಾಗಿದ್ದೇನೆ ಅಂತ ಅನಿಸುತ್ತಿದೆ. ನಿಮಗೆ ಹ್ಯಾಪಿ ಬರ್ತಡೇ’ ಎಂದಿದ್ದಾರೆ.
ಸದ್ಯ ರಶ್ಮಿಕಾ ಹೇಳಿಕೆ, ತಲಾ ಅಭಿಮಾನಿಗಳ ಖುಷಿಯನ್ನು ದುಪ್ಪಟ್ಟು ಮಾಡಿದ್ದು, ಅಜಿತ್ ಜತೆ ಸಿನಿಮಾ ಯಾವಾಗ ಮಾಡುತ್ತೀರಿ, ತಮಿಳಿಗೆ ಆದಷ್ಟು ಬೇಗ ಬನ್ನಿ ಎನ್ನುತ್ತಿದ್ದಾರೆ. (ಏಜೆನ್ಸೀಸ್)