ನ್ಯಾಶನಲ್ ಕ್ರಶ್ ರಶ್ಮಿಕಾ ಮಂದಣ್ಣ ಅವರು 2016 ರಲ್ಲಿ ಕನ್ನಡ ಚಿತ್ರ 'ಕಿರಿಕ್ ಪಾರ್ಟಿ' ಮೂಲಕ ಪಾದಾರ್ಪಣೆ ಮಾಡಿದಾಗಿನಿಂದ ಸಿನಿರಂಗದಲ್ಲಿ ಒಂದೊಳ್ಳೆ ಪ್ರಯಾಣವನ್ನು ಎಂಜಾಯ್ ಮಾಡಿದ್ದಾರೆ. ಇತ್ತೀಚೆಗೆ, ನಟಿ ತಮ್ಮ ಈ ಐದು ವರ್ಷಗಳ ಸಿನಿ ಪ್ರಯಾಣದ ಬಗ್ಗೆ ಇನ್ಸ್ಟಾಗ್ರಾಂ ನಲ್ಲಿ ಸಣ್ಣದೊಂದು ಟಿಪ್ಪಣಿ ಬರೆದು ಹಂಚಿಕೊಂಡಿದ್ದಾರೆ. ಇದೀಗ, ನಟಿಯ ಆ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ. ಅಂದಹಾಗೆ, 5 ವರ್ಷಗಳ ಪ್ರಯಾಣದಲ್ಲಿ ತಾವು ಕಲಿತ 9 ಬದುಕಿನ ಪಾಠಗಳ ಬಗ್ಗೆ ಬರೆದುಕೊಂಡು, ಆ ಪೋಸ್ಟ್ನಲ್ಲಿ ಎಲ್ಲರಿಗೂ ಹಲವು ವಿಚಾರಗಳನ್ನು ತಿಳಿಸಿದ್ದಾರೆ ರಶ್ಮಿಕಾ. ಹಾಗಿದ್ದರೆ, ರಶ್ಮಿಕಾ ಮಂದಣ್ಣ ಅವರು ಕಲಿತ ಆ 9 ಪಾಠಗಳು ಏನು ಅಂತೀರಾ...?