ಅಂದಹಾಗೆ, ವಿಡಿಯೋದಲ್ಲಿ ಹಲವು ಬಗೆಯ ವ್ಯಾಯಾಮಗಳನ್ನು ಮಾಡಿದ್ದಾರೆ ರಶ್ಮಿಕಾ. ಇನ್ನು, ಯಾವ ಸಿನಿಮಾಗಾಗಿ ನಟಿ ಇಷ್ಟು ಕಸರತ್ತು ಮಾಡುತ್ತಿದ್ದಾರೆ ಎಂಬುದು ತಿಳಿಯದಿದ್ದರೂ, ನಟಿಯ ಅಭಿಮಾನಿಗಳಲ್ಲಿ ಮಾತ್ರ ಈ ವಿಡಿಯೋ ಅಚ್ಚರಿ ಮೂಡಿಸಿದ್ದು, ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಹೌದು, ಎಷ್ಟು ಬ್ಯೂಸಿಯಾಗಿದ್ದರೂ ರಶ್ಮಿಕಾ ವರ್ಕೌಟ್ ಮಾಡುವುದನ್ನು ಮಾತ್ರ ಯಾವತ್ತೂ ತಪ್ಪಿಸುವುದಿಲ್ಲ ಎಂಬ ಮಾತಿದೆ. ಹೀಗಾಗಿ, ರಶ್ಮಿಕಾ ಅವರ ಅಭಿಮಾನಿಗಳಿಗೆ ಮತ್ತು ಇತರೆ ಸೆಲೆಬ್ರಿಟಿಗಳಿಗೂ ಪ್ರೇರಣೆ ಎಂದೇ ಹೇಳಬೇಕು.