ಇದೀಗ, ಮದುವೆ ಬಗ್ಗೆ 'ಕಿರಕ್' ಬೆಡಗಿ ರಶ್ಮಿಕಾ ಅವರು ಮಾತಾಡಿದ್ದು ಅವರ ಹೇಳಿಕೆಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ. ಸಂದರ್ಶನವೊಂದರಲ್ಲಿ ರಶ್ಮಿಕಾ ಮದುವೆ, ಲವ್ ವಿಚಾರಗಳ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಉತ್ತರ ನೀಡಿದ್ದಾರೆ. ನಟ ವಿಜಯ್ ದೇವರಕೊಂಡ ಮತ್ತು ರಶ್ಮಿಕಾ ಅವರ ಸ್ನೇಹದ ಬಗ್ಗೆಯೂ ಎಲ್ಲರಿಗೂ ಗೊತ್ತಿದೆ. ಅನೇಕ ಬಾರಿ ಇವರಿಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದು, ಇವರು ಡೇಟಿಂಗ್ ಮಾಡುತ್ತಿದ್ದಾರೆ ಎನ್ನುವ ಅನುಮಾನಗಳಿಗೆ ಇವರೇ ದಾರಿ ಮಾಡಿಕೊಟ್ಟರು. ಹಾಗಾಗಿ, ಶ್ರೀವಲ್ಲಿಯನ್ನು ಮೊದಲು ಲವ್ ಬಗ್ಗೆ ಕೇಳಲಾಗಿತ್ತು. ಆಗ ರಶ್ಮಿಕಾ ಅವರು, ''ಲವ್ ಎಂದರೆ ಪರಸ್ಪರ ಸಮಯ, ಗೌರವವನ್ನು ಇಬ್ಬರು ವ್ಯಕ್ತಿಗಳು ಒಬ್ಬರಿಗೊಬ್ಬರು ನೀಡುವುದು.