ಸದ್ಯ, ದಕ್ಷಿಣ ಭಾರತದಲ್ಲಿ ನಂ.1 ನಟಿಯರೆಂದರೆ ನ್ಯಾಷನಲ್ ಕ್ರಶ್ ರಶ್ಮಿಕಾ ಮಂದಣ್ಣ ಹಾಗೂ ಬುಟ್ಟ ಬೊಮ್ಮಾ ಪೂಜಾ ಹೆಗ್ಡೆ ಅವರ ಹೆಸರು ಕೇಳಿಬರುತ್ತದೆ. ಹೌದು, ಸಾಲು ಸಾಲು ಸಿನಿಮಾಗಳನ್ನು ಗಿಟ್ಟಿಸಿಕೊಳ್ಳುತ್ತಾ ಇವರಿಬ್ಬರೂ ದಕ್ಷಿಣ ಹಾಗೂ ಉತ್ರರದ ಸಿನಿರಂಗಗಳಲ್ಲಿ ಮಾಡುತ್ತಿರುವ ಕಮಾಲ್ ಅಷ್ಟಿಷ್ಟಲ್ಲಾ. ಇದೀಗ, ಇವರಿಬ್ಬರ ನಡುವೆ ಸಿಕ್ಕಾಪಟ್ಟೆ ಕಾಂಪಿಟಿಷನ್ ಎದುರಾಗುತ್ತಿದೆ. ಹೌದು, ರಶ್ಮಿಕಾ ಅವರು ''ಪುಷ್ಪ'' ಚಿತ್ರದ ಬಳಿಕ ಮತ್ತಷ್ಟು ಖ್ಯಾತಿ ಗಳಿಸಿದ್ದಾರೆ. ಮತ್ತೊಂದೆಡೆ, ನಟಿ ಪೂಜಾ ಹೆಗ್ಡೆ ಅವರು ಸಹ (2022) ಈ ಒಂದೇ ವರ್ಷದಲ್ಲಿ 5 ಸಿನಿಮಾಗಳ ರಿಲೀಸ್ ಹೊಂದಿದ್ದಾರೆ. ಹೀಗಾಗಿ, ರಶ್ಮಿಕಾ ಮಂದಣ್ಣ ಹಾಗೂ ಪುಜಾ ಹೆಗ್ಡೆ ಅವರ ಟ್ರ್ಯಾಕ್ ರೆಕಾರ್ಡ್ ಬಗ್ಗೆ ಹೇಳಬೇಕಾಗಿಲ್ಲ.