ಸಾಯಿಪಲ್ಲವಿ ಬದಲು ರಶ್ಮಿಕಾ

Sayipallavi
Published on

ತೆಲುಗಿನಲ್ಲಿ ಮೊದಲೇ ಹಲವು ಚಿತ್ರಗಳಲ್ಲಿ ನಟಿಸುವ ಮೂಲಕ ಬಿಜಿಯಾಗಿದ್ದ ರಶ್ಮಿಕಾ, ಲಾಕ್​ಡೌನ್ ನಂತರ ಇನ್ನಷ್ಟು ಬಿಜಿಯಾಗಿದ್ದಾರೆ. ಈಗಾಗಲೇ ಮೂರು ತೆಲುಗು ಚಿತ್ರಗಳಲ್ಲಿ ರಶ್ಮಿಕಾ ನಟಿಸುತ್ತಿದ್ದಾರೆ ಎಂಬ ಸುದ್ದಿಯೊಂದು ಇತ್ತೀಚೆಗೆ ಕೇಳಿಬಂದಿತ್ತು. ಈಗ ಆ ಸಂಖ್ಯೆ ನಾಲ್ಕಾಗಿದ್ದು, ಶರ್ವಾನಂದ್ ಜತೆಗೆ ರಶ್ಮಿಕಾ ಅಭಿನಯಿಸುತ್ತಿರುವ ಹೊಸ ಚಿತ್ರ ಸೋಮವಾರ ಪ್ರಾರಂಭವಾಗಿದೆ. ಈಗಾಗಲೇ ಮಹೇಶ್ ಬಾಬು, ಅಲ್ಲು ಅರ್ಜುನ್​ರಂತಹ ಸ್ಟಾರ್​ಗಳ ಜತೆಗೆ ನಟಿಸಿರುವ ರಶ್ಮಿಕಾ, ಇದೀಗ ‘ಆಚಾರ್ಯ’ ಚಿತ್ರದಲ್ಲಿ ರಾಮ್ರಣ್ ತೇಜಗೆ ನಾಯಕಿಯಾಗಿ ನಟಿಸುತ್ತಿರುವ ಸುದ್ದಿ ಇದೆ. ಅದರ ಜತೆಗೆ ನಾಗಾರ್ಜುನ ಅವರ ಎರಡನೆಯ ಮಗ ಅಖಿಲ್ ಅಭಿನಯದ ಹೊಸ ಚಿತ್ರಕ್ಕೆ, ಹಾಗೆಯೇ ನಾನಿ ಅಭಿನಯದ ‘ಶ್ಯಾಮ್ ಸಿಂಗ್ ರಾವ್’ ಚಿತ್ರಕ್ಕೆ ನಾಯಕಿಯಾಗಿ ಆಯ್ಕೆಯಾಗುವ ಸಾಧ್ಯತೆ ಇದೆ ಎಂಬ ವಿಷಯವೊಂದು ಹೆಚ್ಚುಹೆಚ್ಚು ಕೇಳಿ ಬರುತ್ತಿದೆ.

ಇವೆಲ್ಲದರ ಜತೆಗೆ ಶರ್ವಾನಂದ್ ಅಭಿನಯದ ‘ಆಡಾಳ್ಳು ಮೀಕು ಜೊಹ್ರಾಲು’ ಚಿತ್ರಕ್ಕೂ ರಶ್ಮಿಕಾ ಆಯ್ಕೆಯಾಗಿದ್ದಾರೆ. ವಿಶೇಷವೆಂದರೆ, ಇದಕ್ಕೂ ಮುನ್ನ ಈ ಚಿತ್ರದಲ್ಲಿ ಸಾಯಿಪಲ್ಲವಿ ನಾಯಕಿಯಾಗಿ ಅಭಿನಯಿ ಸುತ್ತಿದ್ದಾರೆ ಎಂಬ ಸುದ್ದಿ ಇತ್ತು. ಇದೀಗ ಅವರನ್ನು ರಶ್ಮಿಕಾ ಬದಲಾಯಿಸಿದ್ದಾರೆ ಎಂದು ಹೇಳಲಾಗುತ್ತಿದೆ. (ಏಜನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net