

ರಶ್ಮಿಕಾ ಮಂದಣ್ಣ ಅವರ ಬಿಡುಗಡೆಯಾಗುತ್ತಿರುವ ಮೊದಲ ಬಾಲಿವುಡ್ ಚಿತ್ರ ‘ಗುಡ್ಬೈ’. ಆದರೆ, ಈ ಚಿತ್ರದಲ್ಲೇ ಅವರು ಅಮಿತಾಭ್ ಬಚ್ಚನ್ ಜತೆ ಜೋರು ಜಗಳವಾಡಿಕೊಂಡಿದ್ದಾರೆ. ಹಾಗಂತ ಇದು ರಿಯಲ್ ಜಗಳವಲ್ಲ. ರೀಲ್ ಜಗಳ.ಇತ್ತೀಚೆಗಷ್ಟೇ ‘ಗುಡ್ಬೈ’ ಟ್ರೖೆಲರ್ ಬಿಡುಗಡೆಯಾಗಿದ್ದು, ಬಚ್ಚನ್ ಮಗಳ ಪಾತ್ರದಲ್ಲಿ ರಶ್ಮಿಕಾ ನಟಿಸಿದ್ದಾರೆ. ಇದೊಂದು ಕಾಮಿಡಿ ಡ್ರಾಮಾ ಚಿತ್ರವಾಗಿದ್ದು, ವಿಕಾಸ್ ಬೆಹ್ಲ ನಿರ್ದೇಶಿಸಿದ್ದಾರೆ.
ಸಣ್ಣಪುಟ್ಟ ವಿಷಯಗಳಿಗೂ ತಂದೆ, ಮಗಳ ನಡುವೆ ಜಗಳವಾಗುತ್ತಿರುತ್ತದೆ. ಅದರ ನಡುವೆ ತಾಯಿ ವಿಧಿವಶರಾಗುತ್ತಾರೆ. ಆ ಬಳಿಕವಾದರೂ ಅಪ್ಪ, ಮಗಳ ಜಗಳ ನಿಲ್ಲುತ್ತಾ ಎಂದರೆ, ಖಂಡಿತಾ ಇಲ್ಲ. ಅಳು, ಸಿಟ್ಟು, ಗಲಾಟೆ, ಜಗಳಗಳ ಜತೆಗೊಂದಿಷ್ಟು ಕಾಮಿಡಿಯಿಂದ ಕೂಡಿದೆ ‘ಗುಡ್ಬೈ’ ಚಿತ್ರದ ಟ್ರೖೆಲರ್. ಅಂದಹಾಗೆ ಚಿತ್ರ ಇದೇ ಅಕ್ಟೋಬರ್ 7ರಂದು ಬಿಡುಗಡೆಯಾಗಲಿದೆ. -ಏಜೆನ್ಸೀಸ್