ಬ್ರಿಟನ್ ರಾಣಿ ಎಲಿಜಬೆತ್​ II ನಿಧನ, ಇಂದು ಬೆಳಗ್ಗೆಯಿಂದಲೇ ಉಂಟಾಗಿದ್ದ ಆತಂಕ..

Queen Elizabeth
Published on

ಲಂಡನ್​: ಬ್ರಿಟನ್ ರಾಣಿ ಎಲಿಜಬೆತ್ II ಇಂದು ಕೊನೆಯುಸಿರೆಳೆದರು. ಅವರಿಗೆ 96 ವರ್ಷ ವಯಸ್ಸಾಗಿತ್ತು. ಅವರ ಆರೋಗ್ಯದ ಪರಿಸ್ಥಿತಿ ಬಗ್ಗೆ ಇಂದು ಬೆಳಗ್ಗಿನಿಂದಲೇ ವೈದ್ಯರಿಗೆ ಆತಂಕ ಉಂಟಾಗಿದ್ದು, ಅವರ ಕುರಿತು ವಿಶೇಷ ಕಾಳಜಿ ವಹಿಸಲಾಗಿತ್ತು.

ಬೆಳಗ್ಗಿನಿಂದ ಅವರನ್ನು ಪರಿಣತರ ವೈದ್ಯರ ನಿಗಾದಲ್ಲಿ ಇರಿಸಿ ವಿಶೇಷ ಆರೈಕೆ ಒದಗಿಸಲಾಗಿದ್ದರೂ, ಅವರು ಚಿಕಿತ್ಸೆ ಫಲಿಸದೆ ಇಂದು ನಿಧನರಾದರು. ಅವರು ಇಂದು ಸ್ಕಾಟ್ಲೆಂಡ್​ನ ಬಲ್ಮೊರಲ್ ಕ್ಯಾಸಲ್​ನಲ್ಲಿ ಕೊನೆಯುಸಿರೆಳೆದರು ಎಂಬುದಾಗಿ ಬಕಿಂಗ್​ಹ್ಯಾಂ ಅರಮನೆ ಮೂಲಗಳು ತಿಳಿಸಿವೆ.

ರಾಣಿ ಕಳೆದ ಅಕ್ಟೋಬರ್​ನಿಂದಲೇ ಅನಾರೋಗ್ಯದಿಂದ ಬಳಲುತ್ತಿದ್ದು, ನಡೆಯಲು ಹಾಗೂ ನಿಲ್ಲಲೂ ಆಗದ ಪರಿಸ್ಥಿತಿ ತಲುಪಿದ್ದರು. ಬುಧವಾರ ರಾಜಕೀಯ ಸಲಹೆಗಾರರ ಜತೆ ಮೀಟಿಂಗ್ ಇದ್ದಿದ್ದು, ವೈದ್ಯರು ವಿಶ್ರಾಂತಿಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ ಅವರು ಅದರಲ್ಲಿ ಭಾಗಿ ಆಗಿರಲಿಲ್ಲ. ಇಂದು ಬೆಳಗ್ಗೆ ದೈಹಿಕ ಪರಿಸ್ಥಿತಿ ತಪಾಸಣೆ ನಡೆಸಿದ ವೈದ್ಯರು, ವೈದ್ಯರ ನಿಗಾದಲ್ಲಿ ಇರುವುದು ಸೂಕ್ತ ಎಂದು ಸಲಹೆ ನೀಡಿದ್ದರಿಂದ ರಾಣಿ ವಿಶೇಷ ಆರೈಕೆಯಲ್ಲಿ ಇರಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net