ರಶ್ಮಿಕಾಗೆ ಶ್ರೀದೇವಿ ಆಗುವಾಸೆ

Rashmika Mandanna Final
Published on

ಬೆಂಗಳೂರು: ದಕ್ಷಿಣ ಭಾರತದಲ್ಲಿ ಸದ್ಯ ಸೆನ್ಸೆಷನ್ ಸೃಷ್ಟಿಸಿರುವ ನಟಿ ರಶ್ಮಿಕಾ ಮಂದಣ್ಣ, ಸಾಲುಸಾಲು ಸ್ಟಾರ್ ನಟರ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಒಪ್ಪಿಕೊಂಡ ಸಿನಿಮಾಗಳಲ್ಲಿ ಬಗೆಬಗೆ ಪಾತ್ರಗಳನ್ನು ನಿಭಾಯಿಸಿರುವ ಅವರು, ಕರಿಯರ್​ನ ಏರುಗತಿಯಲ್ಲಿರುವಾಗಲೇ ಭವಿಷ್ಯದ ಕನಸಿನ ಪಾತ್ರದ ಬಗ್ಗೆ ಅಭಿಮಾನಿಗಳಿಗೆ ಹೇಳಿಕೊಂಡಿದ್ದಾರೆ.

ರಶ್ಮಿಕಾ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರಿಯರು. ಒಂದಲ್ಲ ಒಂದು ಪೋಸ್ಟ್ ಹಾಕುತ್ತ ಅಭಿಮಾನಿಗಳಿಂದ ಲಕ್ಷಾಂತರ ಲೈಕ್ಸ್ ಮತ್ತು ಸಾವಿರಾರು ಕಮೆಂಟ್​ಗಳನ್ನು ಪಡೆದುಕೊಳ್ಳುತ್ತಿದ್ದಾರೆ. ಹೀಗಿರುವಾಗಲೇ ಇತ್ತೀಚೆಗಷ್ಟೇ ಅಭಿಮಾನಿಗಳ ಮುಂದೆ ಪ್ರಶ್ನೆಯೊಂದನ್ನು ಇಟ್ಟಿದ್ದರು ರಶ್ಮಿಕಾ. ಇದನ್ನೂ ಓದಿ: PHOTOS: ತಮಿಳು ನಟ ವಿಷ್ಣು ವಿಶಾಲ್ ಜತೆ ಷಟ್ಲರ್ ಜ್ವಾಲಾ ಗುಟ್ಟಾ ನಿಶ್ಚಿತಾರ್ಥ…!

‘ನಾನು ಯಾರ ಬಯೋಪಿಕ್​ನಲ್ಲಿ ನಟಿಸಬೇಕು? ಶ್ರೀದೇವಿ ಅವರದ್ದಾ ಅಥವಾ ಸೌಂದರ್ಯ ಅವರದ್ದಾ?’ ಎಂದು ಪ್ರಶ್ನೆ ಕೇಳಿದ್ದರು. ರಶ್ಮಿಕಾ ಪ್ರಶ್ನೆಗೆ ಸಾವಿರಾರು ಮಂದಿ ಕಮೆಂಟ್ ಮೂಲಕ ಉತ್ತರಿಸಿದ್ದಾರೆ. ಅದರಲ್ಲಿ ಶ್ರೀದೇವಿ ಬಯೋಪಿಕ್​ನಲ್ಲೇ ನಟಿಸುವುದಕ್ಕೆ ಸೂಚಿಸಿದ್ದಾರೆ. ಆ ಪ್ರತಿಕ್ರಿಯೆ ಸಿಗುತ್ತಿದ್ದಂತೆ, ‘ಶ್ರೀದೇವಿ ಬಯೋಪಿಕ್​ನಲ್ಲಿ ನಟಿಸುವುದು ನನ್ನ ಬಹುದಿನಗಳ ಕನಸು’ ಎಂದು ಹೇಳಿದ್ದಾರೆ ರಶ್ಮಿಕಾ. ಸದ್ಯ ಅಲ್ಲು ಅರ್ಜುನ್ ‘ಪುಷ್ಪ’ ಚಿತ್ರದಲ್ಲಿ ರಶ್ಮಿಕಾ ಬಿಜಿಯಾಗಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net