ರಶ್ಮಿಕಾ ಹಿಂದೆ ವಿಜಯ್; ರಂಜಿತಮೆ ಎಂದು ಹಾಡಿ ಕುಣಿಯುತ್ತಿರುವ ತಮಿಳು ನಟ

Vijay
Published on

ಕಳೆದ ವರ್ಷ ಕಾರ್ತಿ ಜತೆ ‘ಸುಲ್ತಾನ್’ ಚಿತ್ರದಲ್ಲಿ ನಟಿಸಿದ ಬಳಿಕ ರಶ್ಮಿಕಾ ಮಂದಣ್ಣ ಅಭಿನಯಿಸುತ್ತಿರುವ ಎರಡನೆಯ ತಮಿಳು ಸಿನಿಮಾ ‘ವಾರಿಸು’. ಕಾಲಿವುಡ್​ನ ಸ್ಟಾರ್ ನಟ ವಿಜಯ್ ನಾಯಕನಾಗಿರುವ ಈ ಚಿತ್ರಕ್ಕೆ ವಂಶಿ ಪೈಡಿಪಲ್ಲಿ ಆಕ್ಷನ್ ಕಟ್ ಹೇಳುತ್ತಿದ್ದು, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ಮೂಡಿಬರುತ್ತಿದೆ. ಇತ್ತೀಚೆಗಷ್ಟೆ ‘ರಂಜಿತಮೆ...’ ಎಂದು ಸಾಗುವ ಹಾಡೊಂದು ಬಿಡುಗಡೆಯಾಗಿದ್ದು, ಕೇವಲ 24 ತಾಸುಗಳಲ್ಲಿ ಬರೋಬ್ಬರಿ 1.70 ಕೋಟಿಗೂ ಅಧಿಕ ಬಾರಿ ವೀಕ್ಷಣೆಗೊಂಡು ಯೂಟ್ಯೂಬ್​ನಲ್ಲಿ ವೈರಲ್ ಆಗಿದೆ.

ಹಾಡಿಗೆ ಥಮನ್ ಸಂಗೀತ ನೀಡಿದ್ದು, ಖುದ್ದು ನಾಯಕ ವಿಜಯ್ ಮತ್ತು ಗಾಯಕಿ ಮಾನಸಿ ಕಂಠದಾನ ಮಾಡಿದ್ದಾರೆ. ತಮ್ಮ ಡಾನ್ಸ್ ಮೂಲಕ ಹೆಸರುವಾಸಿಯಾದ ನಟ ವಿಜಯ್ ಅವರ ಎನರ್ಜಿಗೆ ತಕ್ಕಂತೆ ರಶ್ಮಿಕಾ ಕೂಡ ಕುಣಿದಿದ್ದಾರೆ. ‘ವಾರಿಸು’ ಚಿತ್ರದಲ್ಲಿ ವಿಜಯ್, ರಶ್ಮಿಕಾ ಜತೆ ಪ್ರಕಾಶ್ ರಾಜ್, ಶರತ್ ಕುಮಾರ್, ಪ್ರಭು, ಶಾಮ್ ಖುಷ್ಬೂ, ಶ್ರೀಕಾಂತ್, ಯೋಗಿಬಾಬು, ಜಯಸುಧಾ ಪ್ರಮುಖ ತಾರಾಗಣದಲ್ಲಿ ನಟಿಸಿದ್ದಾರೆ. ಚಿತ್ರ 2023ರ ಸಂಕ್ರಾಂತಿ ಹಬ್ಬದ ಸಂಭ್ರಮದಲ್ಲಿ ಜನವರಿ 12ರಂದು ಬಿಡುಗಡೆಯಾಗಲಿದೆ. - ಏಜೆನ್ಸೀಸ್

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net