ಸಾಯಿ ನೀವು ತುಂಬ ಕ್ಯೂಟ್; ಸಹನಟಿಯನ್ನು ಹೊಗಳಿದ ರಶ್ಮಿಕಾ

Rashmika
Published on

‘ಅವರು ತುಂಬ ಕ್ಯೂಟ್ ಅಲ್ವಾ?’... ಹೀಗೆ ಸಾಯಿಪಲ್ಲವಿ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ ನಟಿ ರಶ್ಮಿಕಾ ಮಂದಣ್ಣ. ಮುಕ್ತ ಕಂಠದಿಂದ ಅವರ ಗುಣಗಾನವನ್ನೂ ಮಾಡಿದ್ದಾರೆ. ಇಂಥದ್ದೊಂದು ವಿಶೇಷ ಗಳಿಗೆಗೆ ಸಾಕ್ಷಿಯಾಗಿದ್ದು ‘ಆಡವಾಳ್ಳು ಮೀಕು ಜೋಹರ್ಲು’ ಚಿತ್ರದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ. ಇತ್ತೀಚೆಗೆ ನಡೆದ ಕಾರ್ಯಕ್ರಮಕ್ಕೆ ಸಾಯಿಪಲ್ಲವಿ ಮುಖ್ಯ ಅತಿಥಿಯಾಗಿ ಆಗಮಿಸಿದ್ದರು. ಇದೇ ವೇಳೆ ಚಿತ್ರದ ನಾಯಕಿ ರಶ್ಮಿಕಾ, ಸಾಯಿಯನ್ನು ಕೊಂಡಾಡಿದ್ದಾರೆ.

‘ಈ ವರೆಗೂ ನೀವು ಏನೆಲ್ಲ ಮಾಡಿದ್ದೀರೋ ಅದೆಲ್ಲವನ್ನು ನೋಡಿದರೆ ಹೆಮ್ಮೆ ಎನಿಸುತ್ತದೆ. ಆ ಕಾರಣಕ್ಕೆ ಇಷ್ಟೆಲ್ಲ ಪ್ರೀತಿಯನ್ನು ಗಳಿಸಿದ್ದೀರಿ. ನಿಮ್ಮ ಉಪಸ್ಥಿತಿಯಿಂದ ಕಾರ್ಯಕ್ರಮ ಮತ್ತಷ್ಟು ಕಳೆಗಟ್ಟಿತ್ತು’ ಎನ್ನುವುದರ ಜತೆಗೆ ನೆರೆದಿದ್ದ ಪ್ರೇಕ್ಷಕರತ್ತ ನೋಡಿ, ‘ಸಾಯಿ ಪಲ್ಲವಿ ತುಂಬ ಕ್ಯೂಟ್ ಇದ್ದಾರಲ್ವಾ?’ ಎಂದು ಹೇಳಿದ್ದಾರೆ. ಅಭಿಮಾನಿಗಳಿಂದಲೂ ಅದೇ ಉತ್ತರ ಸಿಕ್ಕಿದೆ. ಶರ್ವಾನಂದ ಈ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದು, ಮಾ.4ಕ್ಕೆ ತೆರೆಗೆ ಬರಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net