ಹೌದು, ಬಿರಿಯಾನಿ ಎಂದ ತಕ್ಷಣ ಮೊದಲು ನೆನಪಾಗುವುದು ಹೈದರಾಬಾದಿ ಬಿರಿಯಾನಿ. ಅಂತಹದ್ದು, ಮೆಗಾ ಕುಟುಂಬದ ಹೈದರಾಬಾದಿ ಬಿರಿಯಾನಿ ಎಂದರೆ ಮಾತೇ? ಅಂದಹಾಗೆ, ಒಂದು ಜಾಹೀರಾತಿನ ಚಿತ್ರೀಕರಣಕ್ಕೆಂದು ಬಾಲಿವುಡ್ ನಟ ರಣವೀರ್ ಸಿಂಗ್ ಹೈದರಾಬಾದ್ನಲ್ಲಿ ಇದ್ದಾರೆ. ಈ ಜಾಹೀರಾತಿನಲ್ಲಿ ನಟ ರಣವೀರ್ ಸಿಂಗ್ ಮೆಗಾ ಕುಟುಂಬದ ಸ್ಟಾರ್ ನಟ ರಾಮ್ ಚರಣ್ ತೇಜ್ ಜೊತೆಗೆ ಕಾಣಿಸಿಲಿದ್ದಾರೆ. ಹೀಗಾಗಿ, ಶೂಟಿಂಗ್ ಸಂರ್ದಭದಲ್ಲಿ ತಮ್ಮ ಮನೆಯ ಹೈದರಾಬಾದಿ ಬಿರಿಯಾನಿಯ ರುಚಿ ನಟ ರಣವೀರ್ ಸಿಂಗ್ಗೆ ತೋರಿಸಿದ್ದಾರೆ ರಾಮ್ ಚರಣ್. ಇನ್ನು, ಮೆಗಾ ಕುಟುಂಬದ ಬಿರಿಯಾನಿ ಸವಿದ ನಟ ರಣವೀರ್ ಸಿಂಗ್ ''ಅಬ್ಬಬ್ಬಾ, ವ್ಹಾ'' ಎಂದಿದ್ದಾರಂತೆ.