ಇಂದು ರಣಬೀರ್-ಆಲಿಯಾ ಮದುವೆ

Ranbir
Published on

ಕೊನೆಗೂ ಆ ದಿನ ಬಂದೇ ಬಿಟ್ಟಿದೆ. ಕಳೆದ ಎರಡ್ಮೂರು ವರ್ಷಗಳಿಂದ ಬಾಲಿವುಡ್​ನ ತಾರಾಜೋಡಿ ರಣಬೀರ್ ಕಪೂರ್ ಮತ್ತು ಆಲಿಯಾ ಭಟ್ ಮದುವೆ ಕುರಿತು ಆಗಾಗ ಸುದ್ದಿಗಳು ಬರುತ್ತಲೇ ಇದ್ದವು. ಅದು ಈಗ ನಿಜವಾಗಿದೆ. ಇಂದು ಮಧ್ಯಾಹ್ನ ಮೂರಕ್ಕೆ ಮುಹೂರ್ತ ಕೂಡಿಬಂದಿದ್ದು, ಆಲಿಯಾಗೆ ರಣಬೀರ್ ತಾಳಿ ಕಟ್ಟಲಿದ್ದಾರೆ. ಮೊದಲಿಗೆ ಈ ಮದುವೆಯು ಮುಂಬೈನಲ್ಲಿರುವ ಆರ್​ಕೆ ಸ್ಟುಡಿಯೋನಲ್ಲಿ ಆಯೋಜಿತವಾಗಿದೆ ಎಂಬ ಸುದ್ದಿ ಇತ್ತು.

ಈಗಿನ ಸುದ್ದಿಯ ಪ್ರಕಾರ, ಪಾಲಿ ಹಿಲ್​ನಲ್ಲಿರುವ ರಣಬೀರ್ ಅವರ ವಾಸ್ತು ಹೆಸರಿನ ಮನೆಯಲ್ಲಿ ಈ ಮದುವೆ ಕೆಲವೇ ಮಂದಿಯ ಸಮ್ಮುಖದಲ್ಲಿ ನೆರವೇರಲಿದೆ. ಕೆಲವು ದಿನಗಳಿಂದ ಸದ್ದಿಲ್ಲದೆ ತಯಾರಿ ನಡೆಯುತ್ತಲೇ ಇತ್ತು. ಆದರೆ, ಎರಡೂ ಕುಟುಂಬದವರು ಮದುವೆಯ ಬಗ್ಗೆ ಯಾವುದೇ ವಿಷಯವನ್ನು ಬಹಿರಂಗಪಡಿಸಿಲ್ಲ.

ಬುಧವಾರ ಮೆಹಂದಿ ಕಾರ್ಯಕ್ರಮ ಆಯೋಜಿತವಾಗಿದ್ದು, ಇದರಲ್ಲಿ ಕರಣ್ ಜೋಹಾರ್, ಪೂಜಾ ಭಟ್, ಕರೀನಾ ಕಪೂರ್, ಕರಿಷ್ಮಾ ಕಪೂರ್, ಅಯಾನ್ ಮುಖರ್ಜಿ ಮುಂತಾದವರು ಭಾಗವಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net